ಚಿಂಚೋಳಿ
ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆಯ ಶ್ರಾವಣ ಶರಣ ಚಿಂತನ ಗೋಷ್ಠಿಗಳ ಸಮಾರೋಪ ಸಮಾರಂಭ ಜರುಗಿತು.
ಬೀದರ ನಗರದ ಶ್ರೀ ಬಸವ ಸೇವಾ ಪ್ರತಿಷ್ಠಾನದ ಪೀಠಾಧ್ಯಕ್ಷೆ ಪೂಜ್ಯ ಗಂಗಾಂಬಿಕೆ ಅಕ್ಕನವರು ಕಾರ್ಯಕ್ರಮ ಉದ್ಘಾಟಿಸಿ ಬಸವ ಸಂಸ್ಕೃತಿ ಅಭಿಯಾನದ ಪೋಸ್ಟರಗಳನ್ನು ಬಿಡುಗಡೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ಸಾಕ್ಷಾತ್ ಕಾರಣಿಕ ಪುರುಷ ಬಸವಣ್ಣನವರ ಕಾರಣಿಕ ಕಟ್ಟೆ ಆಗಿದೆ. ಕುಟುಂಬದ ಪ್ರತಿಯೊಂದು ಕಾರ್ಯಕ್ರಮ ಈ ಪರುಷ ಕಟ್ಟೆ ದರ್ಶನ ಮಾಡಿಯೇ ಆರಂಭಿಸಿ ಜೀವನ ಪಾವನ ಮಾಡಿಕೊಳ್ಳಿ ಎಂದು ಗಂಗಾಂಬಿಕೆ ಅಕ್ಕ ಹೇಳಿದರು.
ಶ್ರಾವಣ ಮಾಸದಾದ್ಯಂತ ನಿತ್ಯ ಬಸವ ಪೂಜೆ, ವಚನ ಪ್ರಾರ್ಥನೆ, ಶರಣ ಚಿಂತನಗೋಷ್ಟಿ, ವಚನ ಪಠಣ, ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ, ವಚನ ನೃತ್ಯ, ಅನ್ನದಾಸೋಹ ನಿರಂತರವಾಗಿ ಮಾಡಿಕೊಂಡು ಬಂದಿರುವ ಚಿಮ್ಮನಚೋಡ ಗ್ರಾಮದ ಭಕ್ತರ ಶ್ರಧ್ದೆಯ ಗುಣಗಾನ ಮಾಡಿದರು.

ಘನ ಉಪಸ್ಥಿತಿ ವಹಿಸಿದ್ದ ಡಾ. ಸಿ. ಎಸ್. ರಗಟೆ ಅವರು ಪೂಜ್ಯ ಅಕ್ಕನವರು ಸ್ವತಃ ತಾವೇ ಇಚ್ಛೆಯಿಂದ ಬಸವ ಪರುಷ ಕಟ್ಟೆ ದರ್ಶನ ಮಾಡಲು ಬಂದಿದ್ದು, ಅವರು ಬಸವತತ್ವ ಪ್ರಸಾರಕ್ಕಾಗಿ ಒಬ್ಬ ನಿಜ ತ್ಯಾಗಿಗಳಾಗಿ ಜಂಗಮರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಆನಂದ ಕುಮಾರ ಬೆಡಸೂರು, ಎಲ್ಲರ ಸ್ನೇಹ ಸಹಕಾರಗಳಿಂದ ಒಂದು ತಿಂಗಳ ಕಾಲ ಅತ್ಯಂತ ಶ್ರಮಪಟ್ಟು ಕಾರ್ಯನಿರ್ವಹಿಸಿದ ಸಮಿತಿ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.

ದಾಸೋಹಿಗಳಾದ ಚಂದ್ರಯ್ಯ ಸ್ವಾಮಿಗಳು ವಚನ ಕಂಠಪಾಠ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
ವೇದಿಕೆಯಲ್ಲಿ ಖ್ಯಾತ ಆಕಾಶವಾಣಿ ಕಲಾವಿದ ಮಹೇಶ ಬಡಿಗೇರ, ಪ್ರಾಚಾರ್ಯ ವಿದ್ಯಾಸಾಗರ ದೇಶಮುಖ, ಪದವಿ ಕಾಲೇಜು ಪ್ರಾಧ್ಯಾಪಕ ಗವಿಸಿದ್ಧಪ್ಪ ಪಾಟೀಲ, ಪತ್ರಕರ್ತ ಜಗನ್ನಾಥ ಶೇರಿಕಾರ, ಉದ್ಯಮಿ ಲಿಂಗಾರ್ತಿ ನಾವದಗೇರೆ ಮುಖ್ಯ ಅತಿಥಿಗಳಾಗಿದ್ದರು.
ಇದೇ ವೇಳೆ ಅಬ್ದುಲ್ ಕಲಾಂ ಶಾಲೆ, ವಿಶ್ವಗಂಗಾ ಶಾಲೆ, ಮೌಲಾನಾ ಆಜಾದ್ ಶಾಲೆ ಮಕ್ಕಳ ವಚನ ನೃತ್ಯಗಳು ಜನಮನ ಸೂರೆಗೊಂಡವು.

ವೀರಸಂಗಯ್ಯ ಮದರಗಿಮಠ, ಜಗದೀಶ ಮರಪಳ್ಳಿ, ಸಂಗಮೇಶ ರಗಟೆ, ಬಸವರಾಜ ಬುರುಕಪಳ್ಳಿ, ಗುರುಶಾಂತ ಹುಂಡೇಕಾರ, ಮಡಿವಾಳಪ್ಪ ರಗಟೆ, ಶಾಂತಪ್ಪ ದುಬಲಗುಂಡಿ, ಅರುಣವರ್ಧನ ಮರಪಳ್ಳಿ, ವೀರಶೆಟ್ಟಿ ದುಬಲಗುಂಡಿ, ಶಿವರುದ್ರಯ್ಯ ಹಿರೇಮಠ, ಶಾಂತಕುಮಾರ ಸೀತಾಳಗೇರಾ, ಶರಣಕುಮಾರ ನೇತಿ, ರಾಕೇಶಕುಮಾರ ಕೊಡಂಗಲ್, ಸಂತೋಷ ಕೊಡಂಗಲ್, ದಿಲೀಪ್ ಬೆಡಸೂರು, ಮಲ್ಲಿಕಾರ್ಜುನ ಬುರುಕಪಳ್ಳಿ, ಶಿವಶರಣ ಕೊಡಂಗಲ್, ಶಾಂತಾಬಾಯಿ ಕಿಳ್ಳಾ, ನಾಗಮ್ಮಾ ಮಠ, ಕವಿತಾ ಜಾಡರ,ರಾಧಿಕಾ ಹಿರೇಮಠ, ಅಶ್ವಿನಿ ರೆಡ್ಡಿ, ಸುಮಿತ್ರಾ ಮದರಗಿಮಠ, ವಿದ್ಯಾವತಿ ಮದರಗಿಮಠ ಮುಂತಾದವರು ಪಾಲ್ಗೊಂಡಿದ್ದರು.
ಸಿದ್ಧಲಿಂಗ ದುಬಲಗುಂಡಿ ಸ್ವಾಗತ ಕೋರಿದರು. ಜ್ಯೋತಿ ಸಂಗೊಂಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.