ಬಸವ ಬೆಳಗು ಬೆಳಗಲಿ: ಬಸವ ಸಂಸ್ಕೃತಿ ಅಭಿಯಾನದ ಶೀರ್ಷಿಕೆ ಗೀತೆ ಬಿಡುಗಡೆ

ಧಾರವಾಡ

ಬಸವ ಬೆಳಗು ಬೆಳಗಲಿ
ವಚನ ಜ್ಞಾನ ಮೊಳಗಲಿ
ಬಸವ ಸಂಸ್ಕೃತಿ ಯಾತ್ರೆ
ವಿಶ್ವ ತುಂಬ ಹಬ್ಬಲಿ…

ನಗರದಲ್ಲಿ ಇತ್ತೀಚೆಗೆ ನಡೆದ ಲಿಂಗಾಯತ ಮಠಾಧೀಶರ ಒಕ್ಕೊಟದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಶೀರ್ಷಿಕೆ ಗೀತೆ ಬಿಡುಗಡೆಯಾಯಿತು.

ಅಭಿಯಾನದ ಯಾತ್ರೆಯಲ್ಲಿ ಬಳಸಲು ಒಟ್ಟು ನಾಲ್ಕು ಹಾಡುಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಪ್ರಧಾನವಾದ ‘ಬಸವ ಬೆಳಗು ಬೆಳಗಲಿ’ ಗೀತೆಯನ್ನು ಸಮಾವೇಶದಲ್ಲಿ ಮಾದಾರ ಚೆನ್ನಯ್ಯ ಶ್ರೀಗಳು ಮತ್ತು ಮೂರು ಸಾವಿರ ಮಠದ ಶ್ರೀಗಳು ಬಿಡುಗಡೆ ಮಾಡಿದರು.

ಗೀತೆಯ ಸಾಹಿತ್ಯವನ್ನು ಪೂಜ್ಯ ಪ್ರಭು ಚೆನ್ನಬಸವ ಸ್ವಾಮೀಜಿ ರಚಿಸಿದ್ದಾರೆ (ಅಥಣೀಶ). ರವೀಂದ್ರ ಸೋರಗಾವಿ, ನಾಗರಾಜ ಸಾಣೇಹಳ್ಳಿ ಸೇರಿದಂತೆ ಎಂಟು ಜನ ಕಲಾವಿದರು ಹಾಡಿದ್ದಾರೆ. ಖ್ಯಾತ ತಬಲಾಪಟು ವೇಣುಗೋಪಾಲ್ ರಾಜು ಮತ್ತು ಸಂಗೀತ ಥಾಮಸ್ ಆಯೋಜಿಸಿದ್ದಾರೆ.

“ಇದು ಸಮಗ್ರ ಬಸವ ಸಿದ್ದಾಂತವನ್ನು ಪ್ರತಿಪಾದಿಸುವ ಗೀತೆ. ಲಿಂಗಾಯತ ಧರ್ಮದ ಎಲ್ಲ ತತ್ವ ಸಿದ್ಧಾಂತಗಳು ಈ ಹಾಡಿನಲ್ಲಿ ಅಡಕವಾಗಿವೆ. ಕಳೆದ ಒಂದು ತಿಂಗಳ ಹಿಂದೆ ಇದನ್ನು ಎಲ್ಲ ಪೂಜ್ಯರ ಆದೇಶದ ಮೇರೆಗೆ ರಚಿಸಲಾಯಿತು,” ಎಂದು ಅಥಣೀಶ ಹೇಳಿದರು.

ಅಭಿಯಾನಕ್ಕೆ ಬಳಸಿರುವ ಮಿಕ್ಕ ಮೂರು ಹಾಡುಗಳ ವಿವರ:

1) ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವ.
ಇದು ಬಸವಣ್ಣನವರ ಸಮಗ್ರ ಜೀವನ ಚರಿತೆಯನ್ನು ಒಳಗೊಂಡ ನೂತನ ಸುಪ್ರಭಾತ. ಇದನ್ನು ಕೀರ್ತನ್ ಹೊಳ್ಳ ಹಾಡಿದ್ದಾರೆ.

2) ಕನ್ನಡ ತವನಿಧಿ
ಇದು ವಚನ ಸಾಹಿತ್ಯವನ್ನು ಒಳಗೊಂಡ ಸಮಗ್ರ ಸ್ತುತಿಯ ನೂತನ ಹಾಡು. ಇದನ್ನು ವಾಣಿಶ್ರೀ ಹಾಡಿದ್ದಾರೆ.

3) ಕನ್ನಡ ಕಾಂತಿಯ ಧರ್ಮ; ಲಿಂಗಾಯತ ಧರ್ಮ
ಲಿಂಗಾಯತ ಧರ್ಮ ತತ್ವ ಸಿದ್ಧಾಂತವನ್ನು ವಿವರಿಸುವ ಒಳಗೊಂಡ ಮಹಿಳೆಯರು ಹಾಡಿದ ಅಪರೂಪದ ಹಾಡು) ಇದನ್ನು ಕಲಾವತಿ ದಯಾನಂದ ಹಾಡಿದ್ದಾರೆ.

ಅಭಿಯಾನದ ಪ್ರಚಾರ ಗೀತೆ: ಬಸವ ಬೆಳಗು ಬೆಳಗಲಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
6 Comments
  • ಶರಣುಶರಣಾರ್ಥಿಗಳು, ಅತ್ಯಂತ ಸಮಂಜಸವಾದ ,ಪರಿಣಾಮಕಾರಿ ಹಾಡು .ರಚಿಸಿದವರಿಗೆ ಹಾಗೂ ಹಾಡಿದವರಿಗೆ ಧನ್ಯವಾದಗಳು.

  • ಸಮಂಜಸವಾದ ,ಪರಿಣಾಮಕಾರಿ ಹಾಡು .ರಚಿಸಿದವರಿಗೆ ಹಾಗೂ ಹಾಡಿದವರಿಗೆ ಧನ್ಯವಾದಗಳು.

      • ಸಾಹಿತ್ಯ ಮತ್ತು ಪರಿಕಲ್ಪನೆ ಮಾಡಿದ ಪೂಜ್ಯರಿಗೆ, ರಾಗ ಸಂಯೋಜನೆ, ಗಾಯನ,ವಾದ್ಯ ಸಂಯೋಜನೆ ಮಾಡಿದ ತಮ್ಮೆಲ್ಲರಿಗೂ ಅನಂತ ಶರಣಾರ್ಥಿಗಳು. 🙏🙏🙏

      • ಶರಣು ಶರಣಾರ್ಥಿಗಳು.
        ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟ ಎಲ್ಲಾ ಮಠಾಧೀಶರಿಗೂ ಶರಣು ಶರಣಾರ್ಥಿಗಳು
        ನೀಲಕಂಠಪ್ಪ, ಕಾಯಕ ಬಳಗ, ಬೆಂಗಳೂರು.

    • ಈ ಹಾಡುಗಳು ಸಾಂದರ್ಭಿಕವಾದರೂ, ಲಿಂಗಾಯತ ಧರ್ಮದ ಸಾರ, ಸತ್ವ, ತಿರುಳನ್ನು ತಿಳಿಸಿಕೊಡುವಲ್ಲಿ ಯಶಸ್ವಿಯೊಂದಿಗೆ ಪ್ರಭಾವ ಬೀರುತ್ತವೆ.
      ಒಳ್ಳೆಯ ಪ್ರಯತ್ನ, ಅಷ್ಟೇ ಅಗತ್ಯಕೂಡ.
      ಧನ್ಯವಾದಗಳು 🙏

Leave a Reply

Your email address will not be published. Required fields are marked *