ಬೆಂಗಳೂರು
ಅಭಿಯಾನದ ಸಮಾರೋಪ ಸಮಾರಂಭಕ್ಕೆ ಹೋಗುತ್ತಿರುವವರು ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ದ್ವಾರಗಳ ಬಗ್ಗೆ ಪೊಲೀಸರು ಸೂಚನೆ ನೀಡಿದ್ದಾರೆ.
ಗೇಟ್ ನಂಬರ್ 2 (ತ್ರಿಪುರವಾಸಿನಿ) :
ಬಸ್, ಕ್ರೂಸರ್, ಜೀಪ್, ಕಾರ್, ಬೈಕ್ ಎಲ್ಲಾ ವಾಹನಗಳ ಮೂಲಕ ಪ್ರವೇಶ ಮತ್ತು ನಿಲ್ದಾಣ.
ಸೂಚನೆ: ಇದು ತಪ್ಪಿದರೆ ಅನವಶ್ಯಕವಾಗಿ ತಾವು 10 ಕಿ.ಮೀ. ಸುತ್ತು ಹಾಕಬೇಕಾಗುತ್ತದೆ.
ಗೇಟ್ ನಂಬರ್ 3 (ವೈಟ್ ಪೆಟಲ್ಸ್) :
ಎಲ್ಲಾ ನಡೆದುಕೊಂಡು ಬರುವ ಸಾರ್ವಜನಿಕರಿಗೆ ಮಾತ್ರ ಪ್ರವೇಶ.
ಗೇಟ್ ನಂಬರ್ 4 (ಗಾಯತ್ರಿ ವಿಹಾರ):
ಕೇವಲ ಗಣ್ಯರಿಗೆ ಮತ್ತು ಮುಖ್ಯ ಸ್ವಾಮೀಜಿಯವರು ಸೇರಿ 100 ಜನರಿಗೆ ಮಾತ್ರ ಪ್ರವೇಶವಿದೆ.
ಶ್ರೀ ಗುರು ಬಸವೇಶ್ವರ,
ಇಂದು ಜರುಗಿದ ಅಭೂತಪೂರ್ವ ಸಮಾವೇಶ ಮತ್ತು ಅದನ್ನು ತಮ್ಮ ಮೀಡಿಯಾ ಮೂಲಕ ಚಿತ್ರಿಸಿದ ರೀತಿ ನೋಡಿ ಮನಸ್ಸು ತುಂಬಿ ಬಂತು. ಮೊದಲು ಅಂದು 2013ರಲ್ಲಿ ಜರುಗಿದ ಪ್ರತ್ಯೇಕ ಲಿಂಗಾಯತ ಧರ್ಮ ಸಮಾವೇಶ ಮತ್ತು ಎರಡನೇ ಬಾರಿ ಥೇಮ್ಸ್ ನದಿಯ ದಂಡೆಯ ಮೇಲೆ ಬಸವಣ್ಣ ರಾರಾಜಿಸಿದಾಗ ಯಾವ ರೀತಿ ರೋಮಾಂಚನವಾಯಿತೋ ಅದೇ ರೀತಿ ಇಂದು ಈ ಸಮಾವೇಶ ನೋಡಿ ಮನ ಪುಳಕಿತವಾಗಿದೆ. ಇನ್ನು ಬಸವಣ್ಣ ನವರಿಗೆ ಶರಣು ತತ್ವಕ್ಕೆ ಸಾವಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಆಗುವ ದಿನಗಳು ದೂರವಿಲ್ಲ.
ಜೈ ಬಸವೇಶ🙏🙏
ನಮ್ಮ ಬಸವ ಸಂಸ್ಕೃತಿ ಜಾಗತಿಕವಾಗಿ ಬೆಳೆಯಲಿ. ನಾವು ಬಸವಣ್ಣನವರ ಆದರ್ಶ ಪಾಲಿಸುವವರಗಬೇಕು. ಜಾತಿಭೇದ ಭಿನ್ನಭಾವಗಳನ್ನು ಮರೆತು ಒಂದಾಗಿ ಬಾಳುವದನ್ನು ಅಳವಡಿಸಿಕೊಳ್ಳಬೇಕು.