ಬಸವನಬಾಗೇವಾಡಿ
ಬಸವ ಜನ್ಮಭೂಮಿ ಸ್ಮಾರಕದ ಮುಂಭಾಗದಲ್ಲಿ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಹಾಗೂ ನೆರೆದಿದ್ದ ಅಪಾರ ಸಂಖ್ಯೆಯ ಬಸವ ಭಕ್ತರ ಸಮ್ಮುಖದಲ್ಲಿ ಷಟಸ್ಥಲ ಧ್ವಜಾರೋಹಣ ನೇರವೆರಿಸುವ ಮೂಲಕ ಬಸವ ಸಂಸ್ಕ್ರತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಸಂವಾದ
ಪಟ್ಟಣದ ಸಿಬಿಎಸ್‌ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗ ಮಂದಿರದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ವಚನ ಸಂವಾದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗದಗದ ಡಾ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಮಾತನಾಡಿದರು.

ಬಸವ ಸಂಸ್ಕ್ರತಿ ವಿಶಿಷ್ಟ ಸಂಸ್ಕ್ರತಿಯಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸಂಸ್ಕ್ರತಿಯಾಗಿದೆ. ಈ ಸಂಸ್ಕ್ರತಿಯು ಸಮಾಜದಲ್ಲಿನ ಅಂಧಶ್ರದ್ಧೆ, ಮೂಢನಂಬಿಕೆ, ಶೋಷಣೆ ನಿವಾರಿಸುವ ಸಂಸ್ಕ್ರತಿಯಾಗಿದೆ.


ಸಮಾಜದಲ್ಲಿ ಜಾತಿ ಮತ ಪಂಥ ಧರ್ಮದ ಹೆಸರಿನಲ್ಲಿ ಅಸಮಾನತೆ ಉಂಟಾಗುತ್ತಿದೆ, ಶರಣರ ಅಮೂಲ್ಯ ತತ್ವಗಳಾದ ಸಮಾನತೆ, ಕಾಯಕ, ದಾಸೋಹ, ಜಾರಿಗೆ ಬಂದರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ, ಈ ನಿಟ್ಟಿನಲ್ಲಿ ಜನಮಾನಸದಲ್ಲಿ ಶರಣರ ವಿಚಾರ ಮುಟ್ಟಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ.

ಪ್ರತಿಯೊಬ್ಬರು ವೈಜ್ಞಾನಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ವಚನ ಸಾಹಿತ್ಯ ಯುವ ಜನಾಂಗಕ್ಕೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಕಾಯಕ ಮಾಡುವರೇ ನಿಜವಾದ ಭಕ್ತರು ಎಂದು ಜಗತ್ತಿಗೆ ಸಾರಿದವರು ಬಸವಾದಿ ಶರಣರು. ಯುವ ಜನಾಂಗದಲ್ಲಿ ಶ್ರಮಸಂಸ್ಕೃತಿ ಬೆಳೆಸುವ ಅಗತ್ಯವಿದೆ ಎಂದರು.
ಸಾಣೆಹಳ್ಳಿ, ತರಬಾಳು ಸಂಸ್ಥಾನ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಪ್ರತಿನಿತ್ಯ ಶರಣರ ಸಂವಾದಗಳು ನಡೆಯುತ್ತಿದ್ದವು, ಸಂವಾದದಿಂದ ಸಮಾಜದಲ್ಲಿ ಸಮೃದ್ದ ನೆಮ್ಮದಿ, ಶಾಂತಿ ನೆಲೆಸಿರುತ್ತದೆ, ಸಂವಾದದಲ್ಲಿ ವಾದ ವಿವಾದಗಳು ಇರಬಾರದು, ಕಾಯವೇ ಕೈಲಾಸ, ಕಾಯಕವೇ ಕೈಲಾಸ ಎಂದು ಶರಣರು ಹೇಳುವ ಮೂಲಕ ಕಾಯಕ ಹಾಗೂ ಕಾಯದ ಮಹತ್ವವನ್ನು ಜಗತ್ತಿಗೆ ತಿಳಿಸಿದ್ದಾರೆ, ನಾವು ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ ಇದ್ದಾಗ ಯಶಸ್ಸು ಪಡೆಯಲು ಸಾಧ್ಯ.

ಶರಣ ಸಂಸ್ಕೃತಿಯಲ್ಲಿ ದಾನ ಪ್ರವೃತ್ತಿ ಮತ್ತು ಕರ್ಮ ಸಿದ್ಧಾಂತ ಇಲ್ಲಾ, ಇದರಲ್ಲಿ ದಾಸೋಹ ಪ್ರವೃತ್ತಿ, ಕಾಯಕ ಸಿದ್ದಾಂತವಿದೆ, ಸತ್ವ ಪ್ರೇರಣೆ ನೀಡುವ ವಿದ್ಯೆ ಬಹಳ ಮುಖ್ಯವಾಗಿರುತ್ತೆ, ನಾವುಗಳು ವಿದ್ಯವಂತರಾಗಿದ್ದೇವೆ ವಿವೇಕಸ್ಥರರಾಗಿಲ್ಲ, ವಿದ್ಯಾರ್ಥಿಗಳು ವಿನಯ ವಿವೇಕ ಬೆಳೆಸಿಕೊಳ್ಳಬೇಕು, ಶಿಕ್ಷಣದಲ್ಲಿ ಬದಲಾವಣೆಯಾಗದೆ ಹೊದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದರು.

ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವತತ್ವದಲ್ಲಿ ಆಶಾ ತತ್ವವಿದೆ, ಜೀವನದಲ್ಲಿ ಸದಾ ಉತ್ಸಾಹದಿಂದ ಇರಬೇಕು, ವಚನಗಳಲ್ಲಿ ಜೀವನದ ಮೌಲ್ಯ ಇರುವುದರಿಂದ ವಚನದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮನೋಬಲ ವೃದ್ದಿಯಾಗುತ್ತದೆ, ಪ್ರತಿದಿನ ವಚನ ಪಠಿಸಿದರೆ ಬದುಕು ಎತ್ತರಕ್ಕೆ ಸಾಗುತ್ತದೆ, ಎಂದರು.
ಸಂವಾದ ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾರ್ಥಿಗಳು ರುದ್ರಾಕ್ಷಿ, ಭಕ್ತಿ, ಮುಕ್ತಿ, ಜಂಗಮ-ಸನ್ಯಾಸಿ, ದೇವರು – ಇಷ್ಟಲಿಂಗ ಸೇರಿದಂತೆ ವಚನಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ವೇದಿಕೆಯಲ್ಲಿರುವ ವಿವಿಧ ಮಠಾಧೀಶರು ಪ್ರಶ್ನೆಗೆ ಸಮಂಜಸವಾಗಿ ಉತ್ತರಿಸಿದರು.

ಬಸವರಥ
ಸೆಪ್ಟಂಬರ ೧ರಿಂದ ಅಕ್ಟೋಬರ ೫ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಬಸವರಥ ಯಾತ್ರೆಗೆ ಸಚಿವ ಶಿವಾನಂದ ಪಾಟೀಲ ಬಸವ ಜನ್ಮಸ್ಮಾರಕದ ಮುಂಭಾಗದಲ್ಲಿ ಚಾಲನೆ ನೀಡಿದರು.
ಬಸವ ಜನ್ಮ ಸ್ಮಾರಕದ ಮುಂಭಾಗದಿಂದ ಆರಂಭವಾದ ರಥಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶರಣೆಯರು ತಲೆ ಮೇಲೆ ವಚನಗ್ರಂಥ ಹೊತ್ತು ಸಾಗಿರುವುದು ವಿಶೇಷವಾಗಿತ್ತು.

ಬಸವ ರಥಯಾತ್ರೆ ಬಸವ ಜನ್ಮ ಸ್ಮಾರಕದಿಂದ ಆರಂಭಗೊಂಡು ಸಂಗೊಳ್ಳಿ ರಾಯಣ್ಣವ್ರತ್ತ, ಅಂಬಿಗರ ಚೌಡಯ್ಯ ವ್ರತ್ತ, ಡಾ. ಬಿ.ಆರ್ ಅಂಬೇಡ್ಕರ್ ವ್ರತ್ತ, ಬಸವೇಶ್ವರ ವ್ರತ್ತದ ಮಾರ್ಗವಾಗಿ ಕಾರ್ಯಕ್ರಮದ ವೇದಿಕೆ ತಲುಪಿತು.
ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ಹಾವೇರಿಯ ಪುರಂದರ ಕಲಾ ತಂಡ, ಡೊಳ್ಳು ವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.
ಡಾ. ಅರವಿಂದ ಜತ್ತಿ, ಡಾ, ಎಸ್. ಎಂ. ಜಾಮದಾರ, ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಈರಣ್ಣ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.

ಶೇಗುಣಸಿ ಡಾ. ಮಹಾಂತಪ್ರಭು ಶ್ರೀ ನಿರೂಪಿಸಿ ಶರಣು ಸಮರ್ಪಿಸಿದರು.
ಪಾಂಡುಮಟ್ಟಿ ಗುರುಬಸವ ಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ, ಮನಗೂಳಿ ವಿರತೀಶಾನಂದ ಸ್ವಾಮೀಜಿ, ಕೂಡಲಸಂಗಮದ ಪೂಜ್ಯರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೈಲೂರು ನಿಜಗುಣಾನಂದ ಸ್ವಾಮೀಜಿ, ವಿರಕ್ತಮಠ ಮಠದ ಸಿದ್ಧಲಿಂಗ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿಯ ಬಸವಲಿಂಗ ಪಟ್ಟದೇವರು, ತಂಗಡಗಿಯ ಅನ್ನದಾನೇಶ್ವರ ಸ್ವಾಮೀಜಿ, ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಡಾ. ಎಸ್. ಎಂ. ಜಾಮದಾರ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖಂಡರಾದ ಡಾ, ಬಸವರಾಜ ಕೋಟಿ, ರವಿಗೌಡ ಚಿಕ್ಕೊಂಡ, ಬಾಲಚಂದ್ರ ಮುಂಜಾನೆ, ಶಂಕರಗೌಡ ಬಿರಾದಾರ, ಶೇಖರ ಗೊಳಸಂಗಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ ಸೇರಿದಂತೆ ಮುಂತಾದವರು ಅಭಿಯಾನದಲ್ಲಿ ಇದ್ದರು.
ಶರಣರೇ, ಸರ್ಕಾರದ ಆದೇಶದ ಮೇರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗ “ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ”ಯನ್ನು ಇದೇ ತಿಂಗಳ 20ರಿಂದ ಕೈಗೊಂಡಿರುವ ಕಾರಣ, ಅದರಲ್ಲಿ 78 ಲಿಂಗಾಯತ ಜಾತಿಗಳನ್ನು ಗುರುತಿಸಿದ್ದಾರೆ. ಆದರೆ ಇನ್ನೂ 103 ಜಾತಿ /ಉಪಜಾತಿಗಳನ್ನು ಸೇರಿಸಲು ಮನವಿ ಸಲ್ಲಿಸಲಾಗಿದೆ. ಹೀಗಾಗಿ ಲಿಂಗಾಯತ ಧರ್ಮದ ಒಟ್ಟು 181 ಜಾತಿ/ಉಪಜಾತಿಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ, ಈಗ ತುರ್ತಾಗಿ ಅವಶ್ಯಕತೆ ಇರುವುದು ಬಸವ ಸಂಸ್ಕೃತಿ ಅಭಿಯಾನವಲ್ಲ, ಅವಶ್ಯಕತೆ ಇರುವುದು “ಬಸವ ಜಾತಿ ಸಮೀಕ್ಷೆ ಅಭಿಯಾನ”. ತಪ್ಪಿದ್ದರೆ ಕ್ಷಮಿಸಿ 🙏 ಸುನೀಲ ಸಾಣಿಕೊಪ್ಪ , ನ್ಯಾಯವಾದಿ, ಬೆಳಗಾವಿ
Haudu, sri. Sumil Sanikop avar abhipraya sariyagide.