ಬಸವ ಸಂಸ್ಕೃತಿ ಅಭಿಯಾನ ಈ ಶತಮಾನದ ವೈಶಿಷ್ಟ್ಯ: ಭಾಲ್ಕಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಿಂಗಾಯತ ಮಠಾಧಿಪತಿಗಳು ಒಗ್ಗಟ್ಟಾಗಿ ನಾಡಿನುದ್ದಕ್ಕೂ ಸಂಚರಿಸಿದ್ದು ಈ ಶತಮಾನದ ವೈಶಿಷ್ಟ್ಯ, ಎಂದು ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದೇವರು ಹೇಳಿದರು.

ಇಂದು ನಗರದ ಅರಮನೆ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತಿಹಾಸದಲ್ಲಿ ಸಿದ್ದಲಿಂಗೇಶ್ವರರ 770 ವಿರಕ್ತ ಶಿಷ್ಯರ ನಂತರ ಸ್ವಾಮಿಗಳು ನಾಡಿನುದ್ದಕ್ಕೂ ಸಂಚರಿಸಿ ಅಭಿಯಾನ ಮಾಡಿದ್ದು ಇದೇ ಮೊದಲು, ಎಂದು ಹೇಳಿದರು.

ಬಸವಧರ್ಮ ಪೀಠದ ಪೂಜ್ಯ ಗಂಗಾ ಮಾತಾಜಿ ಅಭಿಯಾನದಿಂದ ಹಲವಾರು ವರ್ಷಗಳ ಕನಸು ನನಸಾಗಿದೆ ಎಂದು ಹೇಳಿದರು.

12ನೇ ಶತಮಾನದ ಕಲ್ಯಾಣ ಚಳುವಳಿ 21ನೇ ಶತಮಾನದಲ್ಲಿ ಮತ್ತೆ ಪ್ರಾರಂಭವಾಗಿದೆ. ಅಭಿಯಾನದಲ್ಲಿ ಕಂಡ ಉತ್ಸಹ ಅಭಿಮಾನ ನೋಡಿದರೆ ನಾಡಿನಲ್ಲಿ ಬಸವ ಪ್ರಜ್ಞೆ ಮೂಡುತ್ತಿದೆ, ವ್ಯಾಪಕವಾಗಿ ಪ್ರಚಾರವಾಗುತ್ತಿರುವುದು ತಿಳಿಯುತ್ತದೆ, ಎಂದು ಹೇಳಿದರು.

ಮಾಧ್ಯಮಗಳಿಗೆ ನೀಡಿದ ಪ್ರಕಟಣೆಯಲ್ಲಿ ಅಭಿಯಾನ ಅರಮನೆ ಮೈದಾನದಲ್ಲಿ (ಗಾಯತ್ರಿ ವಿಹಾರ) ಅಕ್ಟೋಬರ್ 5 ರಂದು ಮುಂಜಾನೆ 11 ಗಂಟೆಗೆ ಸಮಾರೋಪಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ 500ಕ್ಕೂ ಅಧಿಕ ಲಿಂಗಾಯತ ಮಠಾಧಿಪತಿಗಳು ಹಾಗೂ ಲಕ್ಷಾಂತರ ಬಸವಾನುಯಾಯಿಗಳು ಭಾಗವಹಿಸಲಿದ್ದಾರೆ.

ನಾಡಿನ ಹಿರಿಯ ಚಿಂತಕರಾದ ಎಚ್.ಎನ್. ನಾಗಮೋಹನದಾಸ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕದ ಸಚಿವರು, ಜನಪ್ರತಿನಿಧಿಗಳು ಚಿಂತಕರು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ಸಿದ್ಧರಾಮಯ್ಯ ಅವರನ್ನು ಒಕ್ಕೂಟದ ವತಿಯಿಂದ ವಿಶೇಷವಾಗಿ ಅಭಿನಂದಿಸಲಾಗುವುದು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿರುವ ಜಾಗತಿಕ ಲಿಂಗಾಯತ ಮಹಾಸಭೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಶರಣ ಸಾಹಿತ್ಯ ಪರಿಷತ್ತು, ಬಸವಧರ್ಮ ಮಹಾಪೀಠ, ರಾಷ್ಟ್ರೀಯ ಬಸವದಳ ಮುಂತಾದ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಅಭಿಯಾನದ ಯಶಸ್ಸಿಗೆ ಕಾರಣರಾಗಿದ್ದಾರೆ,, ಎಂದು ತಿಳಿಸಲಾಗಿದೆ.

ಬೇಲಿಮಠದ ಬೇಲಿಮಠದ ಶಿವರುದ್ರ ಸ್ವಾಮೀಜಿ, ಮಾತನಾಡಿದರು. ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತ ಕೋರಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಬೆಂಗಳೂರು ಗುರುವಣ್ಣ ದೇವರು ಮಠದ ಸ್ವಾಮೀಜಿ, ಬೆಳಗಾವಿಯ ಅಲ್ಲಮಪ್ರಭು ಸ್ವಾಮೀಜಿ, ಬೆಂಗಳೂರು ಬಸವಯೋಗಿ ಸ್ವಾಮೀಜಿ, ಶೇಗುಣಸಿ ಮಹಾಂತಪ್ರಭು ಶ್ರೀ, ಅಥಣಿ ಪ್ರಭುಚನ್ನಬಸವ ಶ್ರೀ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣದ ಬಸವದೇವರು, ರಾಯಚೂರಿನ ವೀರಭದ್ರ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
1 Comment

Leave a Reply

Your email address will not be published. Required fields are marked *