ಬೆಂಗಳೂರು
ಅಕ್ಟೋಬರ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬಸವ ಸಂಸ್ಕೃತಿ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಹ್ವಾನ ನೀಡಲಾಗಿದೆ.
ಇಂದು ಮುಖ್ಯಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಪದಾಧಿಕಾರಿಗಳು ಮತ್ತು ಸಚಿವ ಎಂ.ಬಿ. ಪಾಟೀಲ ಸಿದ್ದರಾಮಯ್ಯನವರಿಗೆ ಆತ್ಮೀಯ ಆಹ್ವಾನ ನೀಡಿದರು. ಮುಖ್ಯಮಂತ್ರಿಗಳು ತುಂಬು ಹೃದಯದಿಂದ ಒಪ್ಪಿ ಕಾರ್ಯಕ್ರಮದಲ್ಲಿ ಭಾಗವಹಿಸುವದಾಗಿ ಹೇಳಿದ್ದಾರೆಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಬೆಂಗಳೂರಿನಲ್ಲಿ ಲಕ್ಷಾಂತರ ಲಿಂಗಾಯತ ಅನುಯಾಯಿಗಳನ್ನು ಸೇರಿಸಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು, ಎಂದು ಎಂ.ಬಿ.ಪಾಟೀಲ ಹೇಳಿದ್ದರು.

ಈ ಸಂದರ್ಭದಲ್ಲಿ ಬೆಳಗಾವಿ ನಾಗನೂರು ಮಠದ ಪರಮಪೂಜ್ಯ ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಮೊಟಗಿ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ, ಶೇಗುಣಶಿಯ ಶ್ರೀ ಮಹಾಂತ ಸ್ವಾಮೀಜಿ, ನೆಲಮಂಗಲ ಬಸವಣ್ಣ ದೇವರ ಮಠದ ಸ್ವಾಮೀಜಿ, ಬೆಂಗಳೂರು ನಿಜಗುಣ ಸ್ವಾಮೀಜಿ, ಡಾ. ಗಂಗಾಂಬಿಕಾ ಮಾತಾಜಿ, ನೆಲಮಂಗಲದ ಪವಾಡ ಮಠ ಸಿದ್ಧಲಿಂಗ ಸ್ವಾಮೀಜಿ, ನಂಜುಂಡಿಯ ಗುರುದೇವರ ಮಠ ಸ್ವಾಮೀಜಿ, ಚಕ್ರಭಾವಿಯ ಸಿದ್ದಲಿಂಗ ಸ್ವಾಮೀಜಿ, ಕೆಂಚುಗಲ್ ಬಂಡೆ ಮಠದ ಮಹಾಲಿಂಗ ಸ್ವಾಮೀಜಿ, ಚನ್ನಪಟ್ಟಣದ ಬೇವೂರು ಮಠದ ಮೃತ್ಯಂಜಯ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
👌👍🌹🌹🌹ಮಾನ್ಯ ಶ್ರೀ ಸಿದ್ದರಾಮಯ್ಯನವರು, ಮುಖ್ಯಮಂತ್ರಿಗಳು ನಿಜವಾದ ಬಸವ ಪ್ರೇಮಿಗಳು. ಅವರನ್ನು ಅಭಿಮಾನ ಪೂರ್ವ ಸನ್ಮಾನಿಸುವುದು ಎಲ್ಲಾ ಬಸವಅನುಯಾಯಿಗಳ ಕರ್ತವ್ಯ. ಒಳ್ಳೆಯದು. 👍