ಬಸವಂ ಶರಣಂ ಗಚ್ಚಾಮಿ: ಬಸವ ಧರ್ಮೀಯರು ಒಂದಾಗಲು ಕರೆ

ಬಸವನಬಾಗೇವಾಡಿ

ಬಸವ ಸಂಸ್ಕೃತಿ ಅಭಿಯಾನಕ್ಕೆ ಸೋಮವಾರ ಸಂಭ್ರಮ, ಉತ್ಸಾಹದ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭಾವಿಗಳ ನುಡಿಗಳು ಮನಮುಟ್ಟುವಂತಿದ್ದವು.

ಬುದ್ಧ ದೇವನಲ್ಲಿ ಕ್ಷಮಾಪಣೆ ಕೇಳಿ ಬೌದ್ಧ ಧರ್ಮದ ಪ್ರಸಿದ್ಧ ಘೋಷಣೆಯನ್ನು ಮಾರ್ಪಡಿಸಿಕೊಂಡರು.

ಬಸವಂ ಶರಣಂ ಗಚ್ಛಾಮಿ
ಧಮ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ

ಇದು ಘೋಷಣ ವಾಕ್ಯ ಆದಾಗ ಮಾತ್ರ ಲಿಂಗಾಯತ ಧರ್ಮದಲ್ಲಿ ಐಕ್ಯತೆ ಬರಲು ಸಾಧ್ಯ. ಎಲ್ಲಾ ಒಳಪಂಗಡಗಳು ಬಿನ್ನಾಭಿಪ್ರಾಯ ಮರೆತು ಬಸವಧರ್ಮದಡಿಯಲ್ಲಿ ಒಗ್ಗೂಡಲು ಕರೆ ನೀಡಿದರು.
ಎಸ್ ಎಂ ಜಾಮದಾರ್

ಲಿಂಗಾಯತ ಧರ್ಮದವರಾದ ನಾವುಗಳು ಶೋಷಿತ ಸಮುದಾಯದವರನ್ನು ಗೌರವದಿಂದ ಕಾಣುತ್ತಿಲ್ಲ. ಎಲ್ಲಾ ಶೋಷಿತರ ಜೊತೆಗೆ ಲಿಂಗಾಯತರು ವೈವಾಹಿಕ ಸಂಬಂಧ ನಡೆಸಬೇಕು.
ಎಂ ಬಿ ಪಾಟೇಲ್

ಎಲ್ಲಾ ಶ್ರೀಗಳು ಒಂದೇ ವೇದಿಕೆ ಹಂಚಿಕೊಂಡು ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದು ಮಹತ್ವದ ಬೆಳವಣಿಗೆಯೆಂದು ಗದ್ಗದಿತರಾದರು.

ಶರಣರು ಕರ್ಮ ಸಿದ್ಧಾಂತ ಹೇಳಿಲ್ಲ ಅವರದು ಕಾಯಕ ಸಿದ್ಧಾಂತ. ಶ್ರಮಜೀವಿಗಳನ್ನು ಅವರು ಕಷ್ಟ ಪಡಲು ಅವರ ಹಿಂದಿನ ಕರ್ಮವೇ ಕಾರಣ ಎಂದು ಒಂದು ಸಂಸ್ಕೃತಿ ಹೇಳಿದರೆ ಶ್ರಮ ಪಡುವವರೆಲ್ಲರೂ ಕೂಡಲಸಂಗಮದೇವಾ ಎಂದು ಹೇಳಿದ್ದು ಬಸವ ಸಂಸ್ಕೃತಿ.

ಇಳಕಲ್ ಶ್ರೀಗಳು

ಲಿಂಗಾಯತ ಧರ್ಮದ ಉನ್ನತಿಗೆ ಎಂಎಂ ಕಲಬುರ್ಗಿ ಅವರು ಕೊಟ್ಟ ಸಲಹೆಗಳೆಂದರೆ
ಶುದ್ಧೀಕರಣ
ಏಕೀಕರಣ
ನವೀಕರಣ
ಜಾಗತೀಕರಣ
ಸಬಲೀಕರಣ
ಇವುಗಳನ್ನು ಸಂಘಟನೆ ಮೂಲಕ ಸಾಧಿಸಬೇಕು ಎಂದು ಹೇಳಿದರು.
– ವೀರಣ್ಣ ರಾಜೂರ

ಎನಗಿಂತ ಕಿರಿಯರಿಲ್ಲ ಎಂದು ಹೇಳುವುದು ಅಲ್ಲ ಅದರಂತೆ ನಡೆಯುವುದು ಬಸವ ಸಂಸ್ಕೃತಿ. ಜಗತ್ತಿನಲ್ಲಿ ಬರುವ ಎಲ್ಲಾ ಪ್ರಶ್ನೆಗಳಿಗೆ ಲಿಂಗಾಯತ ಧರ್ಮದಲ್ಲಿ ಉತ್ತರ ಇದೆ.

ಬಸವಣ್ಣನವರ ಭಾವಚಿತ್ರ ಶೋಷಿತರ ಮನೆ ಮನಗಳಿಗೆ ಮುಟ್ಟಬೇಕು. ಬಸವಣ್ಣ ಎಂಬ ಆಲದ ಮರದ ಕೆಳಗೆ ಸಾಮಾಜಿಕ, ಆರ್ಥಿಕ ಹಿಂದುಳಿದ ಜನಾಂಗ ಒಂದಾಗಬೇಕಿದೆ. ಬಸವ ಧರ್ಮದ ಅನುಯಾಯಿಗಳು ಕವಲು ದಾರಿಯಲ್ಲಿ ನಡೆದರೆ ಅದು ಶೋಷಿತ ಸಮುದಾಯಗಳ ಬೆಳವಣಿಗೆಗೆ ಅಡ್ಡಿ.
– ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬೋವಿ ಗುರು ಪೀಠ

ಶರಣ ಪರಂಪರೆಯ ಮಠಗಳು ಮುಂದಿನ ದಿನಗಳಲ್ಲಿ ಜಾತ್ಯತೀತ ಪೀಠಗಳಾಗಬೇಕು. ತಳ‌ ಸಮುದಾಯದವರನ್ನು ಪ್ರೀತಿ ಗೌರವದಿಂದ ಕಾಣುವವರೇ ಬಸವಣ್ಣನವರ ನಿಜವಾದ ಅನುಯಾಯಿಗಳು.
– ಮಾದಾರ ಚೆನ್ನಯ್ಯ ಶ್ರೀಗಳು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು