ಕೊಪ್ಪಳ
ಅಭಿಯಾನ ಅಭಿಯಾನ
ಬಸವ ಸಂಸ್ಕೃತಿ ಅಭಿಯಾನ
|| ಪ||
ಬಸವ ಬೆಳಕಿನ ಅಭಿಯಾನ
ಶರಣ ಸಂದೇಶದ ಅಭಿಯಾನ
||ಅ. ಪ||
ಸಮ ಸಮಾಜದ ಅಭಿಯಾನ
ವ್ಯಸನಮುಕ್ತದ ಅಭಿಯಾನ
|| 1||
ಮಹಿಳಾ ಘನತೆಯ ಅಭಿಯಾನ
ಸದೃಢ ಸಮಾಜದ ಅಭಿಯಾನ
|| 2 ||
ಭಿನ್ನಭಾವವ ಬಿಡಿಸುವ ಅಭಿಯಾನ
ಬಸವ ಸಂಘಗಳ ಬೆಸೆಯುವ ಅಭಿಯಾನ
|| 3 ||
ಮಕ್ಕಳ ಗೊಂದಲ ನಿವಾರಿಸುವ ಅಭಿಯಾನ
ವೈಚಾರಿಕ ಪ್ರಜ್ಞೆಯ ಮೂಡಿಸುವ ಅಭಿಯಾನ
|| 4 ||
ಅಂಧಶ್ರದ್ದೆಯ ಅಳಿಸುವ ಅಭಿಯಾನ
ಸುಜ್ಞಾನವನ್ನು ಬೆಳೆಸುವ ಅಭಿಯಾನ
|| 5 ||
ಮೇಲು ಕೀಳು ತೊರೆಯುವ ಅಭಿಯಾನ
ಸೌಹಾರ್ದ ಪ್ರೀತಿ ಪ್ರೇಮದ ಅಭಿಯಾನ
|| 6 ||
ತ್ಯಾಗವ ಕಿಂಕರ ಕಲಿಸುವ ಅಭಿಯಾನ
ಬಸವನೇ ಅಂತಿಮ ಸಾರುವ ಅಭಿಯಾನ
|| 7 ||
ಬಸವ ಅಭಿಮಾನ ಮೂಡುವ ಅಭಿಯಾನ
ಬಸವಪ್ರಿಯ ರಾಜಗುರುವಿನ ಅಭಿಯಾನ
|| 8 ||