ಚಾಮರಾಜನಗರ
ಚಾಮರಾಜನಗರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ನಡೆದ ಬೈಕ್ ಜಾಥಾಕ್ಕೆ ಮರಿಯಾಲ ವಿರಕ್ತ ಮಠದ ಮುರುಘಾರಾಜೇಂದ್ರ ಸ್ವಾಮೀಜಿ ಹಾಗೂ ಚಾ. ನಗರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಚಾಲನೆ ಭಾನುವಾರ ನೀಡಿದರು.

ವಿರಕ್ತ ಮಠದಿಂದ ಪ್ರಾರಂಭವಾದ ರಾಲಿಯು ರಾಮಸಮುದ್ರ, ಚಂದಕವಾಡಿ, ಕಾಗಲವಾಡಿ, ಆಲೂರು, ಆದಾಪುರ, ಮಂಗಲ, ಸಂತೇಮರಹಳ್ಳಿ, ಉಮ್ಮತ್ತೂರು, ದಾಸನೂರು, ಹೆಗ್ಗೋಠಾರ, ಕಲ್ಲುರ, ನಂಜೇದೇವನಪುರ,
ಉಡಿಗಾಲ, ಉಗನೇದಹುಂಡಿ, ಕಟ್ಟವಾಡಿ, ಕೊತ್ತಲವಾಡಿ, ಅರಕಲವಾಡಿ, ಹೊನ್ನಹಳ್ಳಿ, ಹರದನಹಳ್ಳಿ, ಸೋಮವಾರಪೇಟೆ ಮೂಲಕ ವಿರಕ್ತಮಠಕ್ಕೆ ಮರಳಿದವು.

ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ, “ಬಸವಣ್ಣನವರ ತತ್ತ್ವ, ಸಿದ್ಧಾಂತಗಳನ್ನು ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಆಯೋಜಿಸಲಾಗಿದೆ,” ಎಂದರು.

ಈ ಬೈಕ್ ರಾಲಿಯಲ್ಲಿ ಅಭಿಯಾನದ ಕೋಡಿಮೋಳೆ ಮಹದೇವಸ್ವಾಮಿ, ಮೂಡ್ಲುಪುರ ನಂದೀಶ್, ಮಂಜೇಶ್, ಗಿರೀಶ್ ದೊಡ್ಡರಾಯಪೇಟೆ, ಪುರುಷೋತ್ತಮ್, ಗುರು, ಕುಮಾರ್, ವಿಜಿ ಸೇರಿದಂತೆ ಇನ್ನಿತರರಿದ್ದರು.
ಬಸವ ತತ್ವ ಲಿಂಗಾಯತ ಧರ್ಮ ಉಳಿಯಬೇಕಾದರೆ ಈ ದೇಶದ ಲಿಂಗಾಯತ ಮತ್ತು ಲಿಂಗಾಯತೇತರ ಬಸವ ಪ್ರಜ್ಞೆಯ ಯುವಕರು ಮತ್ತು ಯುವತಿಯರು ಹಾಗೂ ಮಹಿಳೆಯರಿಂದ ಮಾತ್ರ ಸಾಧ್ಯವಿದೆ