ಧಾರವಾಡ
ನಗರದಲ್ಲಿ ಮಂಗಳವಾರ ನಡೆದ ಲಿಂಗಾಯತ ಮಠಾಧೀಶರ ಒಕ್ಕೊಟದ ಸಮಾವೇಶದಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ದಾಖಲೆ ದಾಸೋಹ ಘೋಷಣೆಯಾಗಿದೆ.
ಸೆಪ್ಟೆಂಬರ್ ತಿಂಗಳು ಪೂರ್ತಿ ನಡೆಯುವ ಅಭಿಯಾನಕ್ಕೆ ಸಮಾವೇಶದಲ್ಲಿ ಹಲವಾರು ಮಠಾಧೀಶರು ನೆರವು ನೀಡುವುದಾಗಿ ಘೋಷಿಸಿದರು. “ಐವತ್ತು ಲಕ್ಷಕ್ಕಿಂತಲೂ ಹೆಚ್ಚು ದಾಸೋಹ ನೀಡುವುದಾಗಿ ಬೇರೆ ಬೇರೆ ಪೂಜ್ಯರು ತಿಳಿಸಿದ್ದಾರೆ,” ಎಂದು ಒಕ್ಕೊಟದ ಪ್ರಮುಖ ಸ್ವಾಮೀಜಿಯೊಬ್ಬರು ಹೇಳಿದರು.
ಇದರ ಬಗ್ಗೆ ಅಧಿಕೃತ ಹೇಳಿಕೆ ಲಭ್ಯವಿಲ್ಲದ್ದರಿಂದ ಒಕ್ಕೂಟದ ಕೆಲವು ಪದಾಧಿಕಾರಿಗಳೂ ಸೇರಿದಂತೆ ಸಮಾವೇಶದಲ್ಲಿ ಭಾಗವಹಿಸಿದ್ದ ಹಲವಾರು ಪೂಜ್ಯರೊಂದಿಗೆ ಬಸವ ಮೀಡಿಯಾ ಮಾತನಾಡಿದಾಗ ತಿಳಿದು ಬಂದ ಖಚಿತ ಮಾಹಿತಿ. (ಉಳಿದ ಪೂಜ್ಯರ ದಾಸೋಹ ಘೋಷಣೆಯ ಬಗ್ಗೆ ಹಚ್ಚಿನ ವಿವರ ಲಭ್ಯವಾಗುತ್ತಿದಂತೆಯೇ ಪ್ರಕಟಿಸುತ್ತೇವೆ.)
ಚಿತ್ರದುರ್ಗ ಮುರುಘಾಮಠದ ಬಸವಕುಮಾರ ಶ್ರೀ — 10 ಲಕ್ಷ
ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟ — 5 ಲಕ್ಷ
ಗದುಗಿನ ತೋಂ. ಸಿದ್ಧರಾಮ ಶ್ರೀ — 5 ಲಕ್ಷ
ಭಾಲ್ಕಿ ಹಿರೇಮಠ ಬಸವಲಿಂಗ ಶ್ರೀ— 5 ಲಕ್ಷ
ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ — 5 ಲಕ್ಷ
ಬೆಳಗಾವಿ ನಾಗನೂರ ಅಲ್ಲಮಪ್ರಭು ಶ್ರೀ — 5 ಲಕ್ಷ
ಇಲಕಲ್ಲ ಗುರುಮಹಾಂತ ಶ್ರೀ — 5 ಲಕ್ಷ
ಕೂಡಲಸಂಗಮ ಡಾ. ಗಂಗಾ ಮಾತಾಜಿ — 2 ಲಕ್ಷ
ಬೇಲೂರು (ಬೀದರ ಜಿಲ್ಲೆ) ವಿರಕ್ತಮಠ ಶಿವಬಸವ ಶ್ರೀ – 1 ಲಕ್ಷ
“ಪ್ರಮುಖ ಮಠಾಧೀಶರು ಐದು ಲಕ್ಷ ನೀಡಲು ಮಾತಾಗಿತ್ತು. ಆದರೆ ಅಭಿಯಾನದಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿತು. ದಲಿತ ಮಠಾಧೀಶರ ಒಕ್ಕೂಟ 5 ಲಕ್ಷ ನೀಡುತ್ತಿರುವುದು ಎಲ್ಲರಲ್ಲಿಯೂ ಹೊಸ ಹುರುಪು ತಂದಿದೆ,” ಮಠಾಧೀಶರ ಒಕ್ಕೊಟದ ಪ್ರಮುಖರೊಬ್ಬರು ಹೇಳಿದರು.
“ಎಲ್ಲ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲು ಕೋಟ್ಯಂತರ ರೂಪಾಯಿ ಖರ್ಚಾಗಲಿದೆ. ಬಸವ ಭಕ್ತರು ತನು-ಮನ-ಧನಗಳೊಂದಿಗೆ ಕೈ ಜೋಡಿಸಬೇಕು. ಸದ್ಯದಲ್ಲೇ ಪ್ರತಿಯೊಂದು ಜಿಲ್ಲೆಗೆ ಉಸ್ತುವಾರಿ ಸ್ವಾಮೀಜಿಗಳನ್ನು ನೇಮಿಸಲಾಗುವುದು,” ಎಂದು ಹೇಳಿದರು.
ಬೇಡ ಜಂಗಮರೆನ್ನಿಸಿಕೊಳ್ಳಲು ಹೋಗಿ. ಉಚ್ಚ ನ್ಯಾಯಾಲಯದಿಂದ ಮುಖಕ್ಕೆ ವಿಭೂತಿ ಬದಲು ಕಪ್ಪು ಮಸಿ ಬಳಿಸಿಕೊಂಡು ವಿಕಾರವಾಗಿ ಕಾಣುತ್ತಿರುವ ಜಾತಿ ಜಂಗಮರು ಇನ್ನಾದರೂ ಬಸವನನ್ನು ಒಪ್ಪಿ ಅಪ್ಪಿಕೊಂಡು ಅಭಿಯಾನದ ಸಂಗಮವೆಂಬ ನದಿಯಲ್ಲಿ ಮಿಂದೆದ್ದು ಶುಭ್ರ ಶ್ವೇತರಾಗಲು ಶುಭ ಸಮಯವಿದು!
💐
ವಚನ ಪಿತಾಮಹರೆಂದು ಫ.ಗು ಹಳಕಟ್ಟೆ ಯವರನ್ನು ಕರೆಯುತ್ತಾರೆ.. ಆದರೆ ನೀವು ಮೀಡಿಯಾದಲ್ಲಿ ಲಿಂಗಾನಂದಸ್ವಾಮಿಗಳೇಂದು ಭಿತ್ತರಿಸಿದ್ದೀರಿ ಇದು ತಪ್ಪು ಸಂದೇಶವಲ್ಲವೇ?.ಸಮಿಜದ ಪ್ರತಿಯೊಂದು ವರ್ಗಗಳಿಗೆ ಭೇಟಿಕೊಟ್ಟು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕಾರ್ಯವಾಗಲಿ ಪೂಜ್ಯರೆ. ಸಮಾನತೆಯ ಜಾಗೃತಿ ಮೂಡಿಸಿಅನ್ಯಸಮಾಜದ ನಿಂದನೆ ಬೇಡ .ನಿಸ್ವಾರ್ಥತೆ ಇರಲಿ.. ಜೃ ಬಸವೇಶ..
ಪ್ರವಚನ ಪಿತಾಮಹ -ಲಿಂಗಾನಂದ ಸ್ವಾಮೀಜಿ. ವಚನ ಪಿತಾಮಹ -ಫ ಗು ಹಳಕಟ್ಟಿ
ದಾಸೋಹದ A/c ಅಥವಾ ಯಾರಲ್ಲಿ ಮಾಡಬೇಕು
ಜಂಗಮರೇ ನೀವು ಬೇಡಜಂಗಮರು ಆಗೋಲ್ಲ ಆದರೆ ಬೇಡದ ಜಂಗಮರು ಆಗಬೇಡಿ.