ಅಭಿಯಾನದ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಅಣಬೇರು ರಾಜಣ್ಣ ಆಯ್ಕೆ

ದಾವಣಗೆರೆ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆಪ್ಟೆಂಬರ್ ಒಂದರಿಂದ ರಾಜ್ಯಾದ್ಯಂತ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ದಾವಣಗೆರೆ ಜಿಲ್ಲೆಗೆ ಸೆಪ್ಟೆಂಬರ್ 15 ರಂದು ಆಗಮಿಸಲಿದೆ.

ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಪೂಜ್ಯ ಡಾ. ಶ್ರೀ ಬಸವಪ್ರಭು ಸ್ವಾಮಿಗಳು, ದಾವಣಗೆರೆ ಹಾಗೂ ಡಾ. ಶ್ರೀ ಗುರುಬಸವ ಸ್ವಾಮಿಗಳು, ಪಾಂಡೋಮಟ್ಟಿ ಇವರ ದಿವ್ಯ ನೇತೃತ್ವದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯು ದಾವಣಗೆರೆಯ ಹೋಟೆಲ್ ಉದ್ಯಮಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಶರಣ ಕುರ್ಕಿ ಮಂಜುನಾಥ, ಹಿರಿಯ ಸಾಹಿತಿಗಳಾದ ಶಾಂತ ಗಂಗಾಧರಪ್ಪ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಎ. ಬಿ. ರಾಮಚಂದ್ರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಐಗೂರು ಚಂದ್ರಶೇಖರಪ್ಪ, ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕುಸುಮ ಲೋಕೇಶ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಮತಿ ಜಯಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪರಮೇಶ್ವರಪ್ಪ ಕೆ.ಬಿ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಆವರಗೆರೆ ರುದ್ರಮುನಿ, ಬಸವ ಬಳಗದ ಹುಚ್ಚಪ್ಪ ಮಾಸ್ತರು, ಬಸವ ಬಳಗದ ವೀಣಾ ಮಂಜುನಾಥ, ವನಜಾಕ್ಷಿ ಮಹಾಲಿಂಗಯ್ಯ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಗೌಡ ಗೋಪನಾಳ,
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷರಾದ ಲಿಂಗಾನಂದ ಕಮ್ಮತ್ತಳ್ಳಿ, ಅತ್ತಿಗರೆ ನಾಗರಾಜ, ಟಿ‌.ಎಂ. ಶಿವಮೂರ್ತಯ್ಯ, ದಾವಣಗೆರೆ ಬಸವ ಬ್ರಿಗೇಡ್ ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರು ಸೇರಿದಂತೆ ಹಲವಾರು ಬಸವಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲೇ 37 ಸಾವಿರ ದಾಸೋಹ ನಿಧಿಯನ್ನು ವಾಗ್ದಾನ ಮಾಡಲಾಯಿತು. ಸಮಾರಂಭದ ಪೂರ್ಣ ಪ್ರಮಾಣದ ಪ್ರಸಾದದ ವ್ಯವಸ್ಥೆಯ ದಾಸೋಹ ಮಾಡಲು ಅಣಬೇರು ರಾಜಣ್ಣ ಅವರು ಒಪ್ಪಿಕೊಂಡರು. ಕೊನೆಯಲ್ಲಿ ಪರಮ ಪೂಜ್ಯರು ಆಶೀರ್ವಚನ ನೀಡಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳು, ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕರಾದ ಶರಣ ಕರೂರು ಹನುಮಂತಪ್ಪ ಅವರು ವಚನ ಪ್ರಾರ್ಥನೆ ಮಾಡಿದರು. ಶರಣ ನಾಗರಾಜ್ ಕಕ್ಕರಗೊಳ್ಳ ಅವರು ಎಲ್ಲರನ್ನೂ ಸ್ವಾಗತಿಸಿದರೆ, ಶರಣ ಕಲಿವೀರ ಕಳ್ಳಿಮನಿ ನಿರೂಪಣೆ ಮಾಡಿದರು. ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಇವರು ಎಲ್ಲರಿಗೂ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು