ಅಭಿಯಾನ: ಧಾರವಾಡದಲ್ಲಿ ಬಸವ ಸಂಘಟನೆಗಳ ಪೂರ್ವಭಾವಿ ಸಭೆ

20ಕ್ಕೂ ಹೆಚ್ಚು ಒಳಪಂಗಡಗಳ ಮುಖಂಡರು ಸಭೆಯಲ್ಲಿ ಭಾಗಿ

ಧಾರವಾಡ

ಬಸವ ಸಂಸ್ಕೃತಿ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸುವ ಕುರಿತು ಬಸವ ಸಂಘಟನೆಗಳ ಪೂರ್ವಭಾವಿ ಸಭೆ ಮುರುಘಾಮಠದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾ ಕೇಂದ್ರದಲ್ಲಿ ಸೆಪ್ಟಂಬರ್ 12 ನಡೆಯಲಿರುವ ಅಭಿಯಾನದ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಮಾಹಿತಿ ನೀಡಿದರು.

ಪ್ರಚಾರ, ದಾಸೋಹ ಮುಂತಾದ ಸಮಿತಿಗಳ ಬಗ್ಗೆ ವಿವರಿಸಿ ಸ್ವಯಂಸೇವಕರ ಪಡೆ ಸಿದ್ಧ‌ಮಾಡಬೇಕೆಂದು ಹೇಳಿದರು. ಲಿಂಗಾಯತ ಇತಿಹಾಸದ ಕುರಿತು ಸರಿಯಾದ ಮಾಹಿತಿ ಕೊಡುವ ಉಪನ್ಯಾಸಕರನ್ನು ಗುರುತಿಸಬೇಕು, ಸುಶ್ರಾವ್ಯವಾಗಿ ವಚನ ಸಂಗೀತ ಹಾಡುವವರಿಗೆ ಅವಕಾಶ ಕೊಡಬೇಕು, ಸೂಕ್ತ ಅತಿಥಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಬಸವತತ್ವ ಮಠಾಧೀಶರು ಹಾಗೂ ಬಸವಪರ ಸಂಘಟನೆಗಳನ್ನು ಆಮಂತ್ರಿಸಿ, ಅವರ ಜೊತೆ ಧಾರವಾಡದ ಮುಖ್ಯ ಬೀದಿಗಳಲ್ಲಿ ಬಸವರಥದೊಂದಿಗೆ ಮೆರವಣಿಗೆ ನಡೆಸಿ ನಂತರ ಬೃಹತ್ ವೇದಿಕೆ ಕಾರ್ಯಕ್ರಮ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

ಈ ಸಾರಿಯ ಜನಗಣತಿಯಲ್ಲಿ ಎಲ್ಲರೂ ಹಕ್ಕಿನಿಂದ ತಮ್ಮ ಒಳಪಂಗಡ ಜೊತೆಗೆ ಲಿಂಗಾಯತ ಧರ್ಮ ಎಂದು ಬರೆಸಬೇಕು, ಹಿಂದೂ ಅಥವಾ ವೀರಶೈವ ಬರೆಸಬಾರದೆಂದು ಎಂದು ಜಾಮದಾರ್ ಹೇಳಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಮಲ್ಲಿಕಾರ್ಜುನಸ್ವಾಮಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಸಮಾಜದ ಉಪಪಂಗಡಗಳು, ಬಸವಪರ ಸಂಘಟನೆಗಳು ಎಲ್ಲರೂ ಒಗ್ಗಟ್ಟಿನಿಂದ ಅದ್ದೂರಿಯಾಗಿ ಅಭಿಯಾನವನ್ನು ಮಾಡೋಣ ಎಂದರು.

ಸಭೆಯಲ್ಲಿ ಮಾತನಾಡಿದ ಚಿಂತಕ ವೀರಣ್ಣ ರಾಜೂರ ನಮ್ಮ ಜಿಲ್ಲೆಗೆ ಒಳ್ಳೆಯ ಹೆಸರು ಬರುವ ಹಾಗೆ ಅಭಿಯಾನವನ್ನು ಎಲ್ಲರೂ ಒಂದಾಗಿ ಮಾಡೋಣ ಎಂದರು.

ಬಣಜಿಗ, ಪಂಚಮಸಾಲಿ, ಹಡಪದ, ಮಡಿವಾಳ, ಕುಂಬಾರ, ಸೇರಿದಂತೆ 20 ಒಳಪಂಗಡಗಳ ಮುಖಂಡರು ಸಭೆಯಲ್ಲಿದ್ದರು ಎಂದು ಬಸವ ಕೇಂದ್ರದ ಬಿ ಎಸ್ ತೋಟದ ಹೇಳಿದರು. ಜೆ.ಎಲ್.ಎಂ.ನ ಬಸವರಾಜ ರೊಟ್ಟಿ ಮಾತನಾಡಿದರು.

ರಾಷ್ಟ್ರೀಯ ಬಸವದಳದ ದೇಮಪ್ಪ ಗಾಳಿ ಭಾಗವಹಿಸಿದ್ದರು, ಮುರುಘಾಮಠದ ಉಪಾಧ್ಯಕ್ಷರಾದ ನಾಗರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ಡಿ. ಬಿ. ಲಕ್ಕಮ್ಮನಹಳ್ಳಿ, ಜೆ.ಎಲ್. ಎಂ. ರಾಷ್ಟ್ರೀಯ ಉಪಾಧ್ಯಕ್ಷ ಪ್ರಭು ನಡಕಟ್ಟಿ, ಬಸವ ಕೇಂದ್ರದ ಅಧ್ಯಕ್ಷರಾದ ಸಿದ್ದರಾಮಣ್ಣ ನಡಕಟ್ಟಿ, ಧಾರವಾಡ ತಾಲೂಕು ಜೆ.ಎಲ್.ಎಂ. ಅಧ್ಯಕ್ಷ ಜಿ.ಆರ್. ಜವಳಗಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಶರಣ ಮೇದಾರ ಕೇತಯ್ಯ ಸಮಾಜದ ಅರವಿಂದ ಶಿರಹಟ್ಟಿ, ಡೋಹಾರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ, ಹಡಪದ ಸಮಾಜ ಜಿಲ್ಲಾಧ್ಯಕ್ಷ ಈರಣ್ಣ ಚಿಕ್ಕಮಲ್ಲಿಗವಾಡ, ಜೆ.ಎಲ್.ಎಂ. ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ನಡಕಟ್ಟಿ, ಬಸವ ಜ್ಯೋತಿ ಪ್ರತಿಷ್ಠಾನದ ರಾಜೇಶ್ವರಿ ಕಟ್ಟಿಮನಿ, ಹುಬ್ಬಳ್ಳಿ ಶ್ರೀ ಗುರುಬಸವ ಮಂಟಪದ ಸದಸ್ಯರು, ನೀಲಾಂಬಿಕ ಬಳಗದ ಶರಣೆಯರು, ಜೆ.ಎಲ್.ಎಂ. ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ. ಜಿ ಪಾಟೀಲ, ಉಪಾಧ್ಯಕ್ಷ ಸುನೀಲ ದನಗೊಂಡ, ಬಸವರಾಜ ಹುಲ್ಲೋಳಿ, ಚಿಂತಾಮಣಿ ಸಿಂದಗಿ, ಕುಂಬಾರ ಗುಂಡಯ್ಯ ಸಮಾಜದ ಬಿ. ಬಿ. ಚಕ್ರಸಾಲಿ,
ಬಸವೇಶ್ವರ ಅಧ್ಯಯನ ಪೀಠ, ಸಿ.ಎಂ. ಕುಂದಗೋಳ, ರವೀಂದ್ರ ಕುಡುವಕ್ಕಲಿಗರ, ಮಡಿವಾಳ ಸಮಾಜದ ಸಂತೋಷ ಶಿವಾನಂದ್ ನಾಗೂರ, ಅನುಭವ ಮಂಟಪದ ಮಡಿವಾಳಪ್ಪ ಸಿರಿಯಣ್ಣವರ್, ಕುಮಾರಣ್ಣ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಮಹಿಳಾ ಘಟಕಗಳು ಜಂಟಿಯಾಗಿ ಸಭೆ ಆಯೋಜಿಸಿದ್ದವು. ಶರಣ ಬಸವಂತಪ್ಪ ತೋಟದ ಸ್ವಾಗತಿಸಿದರು. ಶಿವರುದ್ರಗೌಡ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
5 Comments
  • ಲಿಂಗಾಯತ ಎಂದು ಸರಕಾರವು ಜಾತಿ ಪ್ರಮಾಣ ಪತ್ರ ಕೊಡಲು ಅಭಿಯಾನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಬೇಕು

  • ವಿಶ್ವನಾಥ ಹೂಗಾರ ಸಿರಿಗೇರಿ ನಿವೃತ್ತ ನಿರ್ವಾಹಕರುರ ಸಾ ಸಂಸ್ಥೆ ಬಳ್ಳಾರಿ ವಿಭಾಗ ಬಳ್ಳಾರಿ ವೀ ಲಿಂಗಾಯತ says:

    ಮಾನ್ಯರೇ ನಾವು ಶ್ರೀ ಜಗಜ್ಯೋತಿ ಬಸವಣ್ಣವರು ಅನುಯಾಯಿಗಳು. ಕೇವಲ ಲಿಂಗಾಯತ ರುಚಿಗೆ ಮೀಸಲಾಗಿರುವ ರಲ್ಲೂ.ಆದರೆ ಅವರ ಉಪದೇಶಗಳನ್ನ ಯಾಕೆ ಆಚರಣೆಗಳಲ್ಲಿ ರೂಢಿ ಸಿಗೊಳ್ಳುತ್ತಿಲ್ಲ?ಮೇಲ್ಜಾತಿ ಕೀಳ್ಜಾತಿ ಎಂದು ಕೀಳು ಮಟ್ಟದಲ್ಲಿ ಆಲೋಚನೆ ಮಾಡುತ್ತೇವೆ.ಲಿಂಗಾಯತ ಒಳಪಂಗಡಗಳು ಒಂದಾಗಿ ಹೋಗಬೇಕಾದ ಸಂಧರ್ಭದಲ್ಲಿ ನಾನು ಬಣಜಿಗ,ಪಂಚಮಸಾಲಿ,ಶೆಟ್ರು,ದಾಸ್ ಲಿಂಗಾಯತ ಇವುಗಳು ಬೇಕೇ? ದಯವಿಟ್ಟು ಮುಖಂಡರು ಒಂದಾಗಿ ಅಭಿವೃದ್ಧಿ ಮಾಡೋಣ.

  • Let us all appreciate the measures initiated in Dharwad district about the fourth coming Lingayat Abhiyana. They have done very good thing. We join in their efforts in making the ABHziYANA a grand success.

Leave a Reply

Your email address will not be published. Required fields are marked *