ಬಾಳೆಹೊನ್ನೂರು
ಬಸವಕಲ್ಯಾಣದಲ್ಲಿ ಭಕ್ತರ ಹೆಗಲ ಬದಲು ತೆರೆದ ವಾಹನದ ಮೇಲೆ ಅಡ್ಡಪಲ್ಲಕ್ಕಿ ಉತ್ಸವ ನಡೆಸಲು ರಂಭಾಪುರಿ ವೀರಸೋಮೇಶ್ವರ ಶ್ರೀಗಳು ಸಮ್ಮತಿ ನೀಡಿದ್ದಾರೆ.
ಇಂದು ಸಂಜೆ ಕಳಿಸಿರುವ ಪ್ರಕಟಣೆಯಲ್ಲಿ ಹಾರಕೂಡ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ, ಸ್ವಾಗತ ಸಮಿತಿಯ ಮತ್ತು ಈ ಭಾಗದ ಭಕ್ತರ ಇಚ್ಛಾನುಸಾರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಮುಂಚೆ ಅಡ್ಡ ಪಲ್ಲಕ್ಕಿಯ ವಿಷಯದಲ್ಲಿ ದಸರಾ ದರ್ಬಾರ್ ಸಮಿತಿ ಮತ್ತು ರಂಭಾಪುರಿ ಶ್ರೀಗಳ ನಡುವೆ ಗಂಭೀರವಾದ ಬಿನ್ನಾಭಿಪ್ರಾಯ ಮೂಡಿತ್ತು.
ಸಮಿತಿಯ ಸದಸ್ಯರು ರಂಭಾಪುರಿ ಶ್ರೀಗಳಿಗೆ ಬಸವಣ್ಣನವರ ನಾಡಿನಲ್ಲಿ ನಿಮ್ಮ ಹೊತ್ತುಕೊಂಡು ಅಡ್ಡಪಲ್ಲಕ್ಕಿ ಮಾಡುವುದು ಬೇಡ, ವಾಹನದಲ್ಲಿ ಕೂರಿಸಿ ಮಾಡೋಣ ಎಂದು ಹೇಳಿದ್ದರು. ಅದನ್ನು ಶ್ರೀಗಳು ತಿರಸ್ಕರಿಸಿದ ಮೇಲೆ ಹಾರಕೂಡ ಶ್ರೀಗಳು ದಸರಾ ದರ್ಬಾರ್ ಕಾರ್ಯಕ್ರಮದಿಂದ ದೂರವುಳಿಯಲು ನಿರ್ಧರಿಸಿದ್ದರು.
