ಅಡ್ಡಪಲ್ಲಕ್ಕಿ: ಕೂಡಲಸಂಗಮ ವೇದಿಕೆಯಲ್ಲೇ ಕಾಶಪ್ಪನವರಿಗೆ ವಿರೋಧ

ಆಲೋಚನೆ ಮಾಡಿ ನಂತರ ಹೇಳುವೆ ಎಂದು‌ ನುಣುಚಿಕೊಂಡ ಶಾಸಕ

ಕೂಡಲಸಂಗಮ

ಕೂಡಲಸಂಗಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡುವ ಸಾಹಸಕ್ಕೆ ವಿಜಯಾನಂದ ಕಾಶಪ್ಪನವರ ಮುಂದಾಗುವುದಿಲ್ಲ. ಅವರು ಮಾತಿನ ಬರಾಟೆಯಲ್ಲಿ ಹೇಳಿದ್ದರೂ, ಬಸವತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ, ಎಂದು ಬಸವಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಮಂಗಳವಾರ ರಾತ್ರಿ ಹೇಳಿದರು.

ಕೂಡಲಸಂಗಮ ಬಸವಧರ್ಮ ಪೀಠದಲ್ಲಿ ನಡೆದ ಬಸವಣ್ಣನವರ ೮೩೦ನೇ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಶಪ್ಪನವರ ಶ್ರೀಗಳ ಮಾತನ್ನು ಯಾವುದೇ ಪ್ರತಿಕ್ರಿಯೆ ನೀಡದೆ ಕೇಳಿಸಿಕೊಂಡರು.

ಕಾರ್ಯಕ್ರಮದಲ್ಲಿ ಬೀದರ ರಾಷ್ಟ್ರೀಯ ಬಸವದಳದ ಕಾರ್ಯಕರ್ತರೊಬ್ಬರು ಕೂಡಲಸಂಗಮದಲ್ಲಿ ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಮಾಡುತ್ತೇನೆ ಎಂದು ನೀಡಿದ್ದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿ ಎಂದು ಆಗ್ರಹಿಸಿದರು. ಆಗಲೂ ಕಾಶಪ್ಪನವರ ಆಲೋಚನೆ ಮಾಡಿ ನಂತರ ಹೇಳುವೆ ಎಂದು‌ ನುಣುಚಿಕೊಂಡರು.

ತಮ್ಮ ಆಶೀರ್ವಚನ ಮುಂದುವರೆಸಿ ಶ್ರೀಗಳು ಬಸವಣ್ಣನವರ ಲಿಂಗೈಕ್ಯ ದಿನವನ್ನು ಬಸವ ಪಂಚಮಿಯಾಗಿ ರಾಜ್ಯದಲ್ಲಿಯೇ ಪ್ರಥಮಬಾರಿಗೆ ಆಚರಣೆ ಮಾಡಿದ್ದು ಬಸವಧರ್ಮ ಪೀಠ. ಬಸವಣ್ಣನವರ ಲಿಂಗೈಕ್ಯ ದಿನವನ್ನು ರಾಜ್ಯ ಸರ್ಕಾರ ಸರ್ಕಾರಿ ದಿನವನ್ನಾಗಿ ಘೋಷಿಸಿ ಎಲ್ಲ ಕಡೆ ಬಸವ ಪಂಚಮಿ ಆಚರಿಸುವಂತೆ ಮಾಡಬೇಕು, ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಆರ್.ಪಾಟೀಲ ರಾಜಕಾರಣಿಗಳು, ಸಮಾಜ ಸುಧಾರಕರು, ಮಠಾಧೀಶರು ಮೊದಲು ಬಸವತತ್ವ ಅರಿತು ನುಡಿದಂತೆ ನಡೆಯಬೇಕು ಎಂದು ಹೇಳಿದರು.

ಬಸವಧರ್ಮ ಅರಿತರೇ ಸಾಲದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿತ್ಯ ಬದುಕಿನಲ್ಲಿ ಪರಿಪಾಲನೆ ಮಾಡಿದರೆ ಜೀವನದಲ್ಲಿ ಯಾವ ಸಮಸ್ಯೆಗಳು ಬರುವುದಿಲ್ಲ. ಮೌಢ್ಯತೆಗಳನ್ನು ದಿಕ್ಕರಿಸಿ, ಉಪಯೋಗವಿಲ್ಲದ ಆಚರಣೆಗಳಿಂದ ಜನರು ವಿಮುಖರಾಗುವ ಅಗತ್ಯ ಇದೆ. ಜನಮುಖಿ, ಸಮಾಜಮುಖಿ ಕಾರ್ಯದ ಕಡೆ ಜನ ತೊಡಗಿಕೊಳ್ಳಬೇಕು, ಎಂದು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಶಪ್ಪನವರ ಬಸವತತ್ವವನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡಿ, ನಾಡಿಗೆ ಭಿತ್ತರಿಸಿದ್ದೇ ಬಸವಧರ್ಮ ಪೀಠ, ಬಸವಧರ್ಮವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವ ಜನಾಂಗಕ್ಕೆ ಬಸವತತ್ವ ಅಗತ್ಯ ಇದ್ದು ಅವರಿಗೆ ಬಸವತತ್ವ ಅರಿವು, ಸಂಸ್ಕಾರ ಕೊಡುವ ಕಾರ್ಯವನ್ನು ಮಠಾಧೀಶರು ಮಾಡಬೇಕು ಎಂದರು.

ಸಮಾರಂಭದಲ್ಲಿ ಬಳ್ಳಾರಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಶಾರದಾ ತಾಯಿ, ನಿವೃತ್ತ ಕೆ.ಎ.ಎಸ್ ಅಧಿಕಾರಿ ಎಸ್. ದಿವಾಕರ, ಮಹಾರಾಷ್ಟ್ರ ಅಲ್ಲಮಪ್ರಭು ಯೋಗಪೀಠದ ಬಸವಕುಮಾರ ಸ್ವಾಮೀಜಿ, ಹೈದ್ರಾಬಾದ ಬಸವ ಮಂಟಪದ ಅನಿಮಿಷಾನಂದ ಸ್ವಾಮೀಜಿ ಮಾತನಾಡಿದರು.

ಸಮಾರಂಭದಲ್ಲಿ ಗೋಕಾಕ ರಾಷ್ಟ್ರೀಯ ಬಸವ ದಳದ ಕಮಲಕ್ಕ ಚೌದ್ರಿ, ಬೀದರದ ಸೋಮಶೇಖರ ಪಾಟೀಲ ಗಾದಗಿ, ಕೂಡಲಸಂಗಮ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ. ಪಾಟೀಲ, ಮುಖಂಡ ಜಿ.ಜಿ. ಬಾಗೇವಾಡಿ, ವಿವೇಕಾನಂದ ಧನ್ನೂರ, ಹೈದ್ರಾಬಾದದ ಅನಿಲ ಪಾಟೀಲ, ಕೊಪ್ಪಳದ ರೇಣುಕಪ್ಪ ಮಂತ್ರಿ, ಸಂಗನಗೌಡ ಗೌಡರ, ಬಸವನಗೌಡ ಗೌಡರ ಮುಂತಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
9 Comments
  • ಈ ರಾಜಕಾರಣಿಗಳಿಗೆ ತಮ್ಮ ಧರ್ಮ ಯಾವುದು ಅಂತ ಸರಿಯಾಗಿ ಗೊತ್ತಿಲ್ಲ. Vote ಪಡೆಯಲು ಸೇರಿದ ಜನರನ್ನು ನೋಡಿ, ಹುರೂಪಿಗೆ ಎದ್ದು ಏನಾದರೂ ಮಾತಾಡಿ ಬಿಡುತ್ತಾರೆ.
    ಲಿಂಗಾಯತ ರಾಜಕಾರಣಿಗಳಿಗೆ ತಮ್ಮ ಧರ್ಮದ ಅಭಿಮಾನ ಇಲ್ಲ. ಹೆಂಗು ಲಿಂಗಾಯತರು ತಮಗೆ vote ಹಾಕುತ್ತಾರೆ. ಸೇರಿದ ಜನರನ್ನು ಹುರುದುಮಂಬಿಸಲು ಏನಾದರೂ ಮಾತಾಡಿ ಬಿಡುತ್ತಾರೆ.

  • ಬಸವ ಧರ್ಮ ಅರಿಯುವುದಕ್ಕೂ, ಆಚರಣೆಗೂ ಅದಕ್ಕಾಗಿ ರಜೆ ಘೋಷಿಸುವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಕಾಯಕವೇ ಕೈಲಾಸ ಎಂಬ ಧ್ಯೇಯ ವಾಕ್ಯವುಳ್ಳ ಬಸವ/ಶರಣ ಧರ್ಮದ ಹೆಸರಿನಲ್ಲಿ ಇನ್ನು ಮುಂದೆ ಯಾವುದೇ ಆಚರಣೆಗಳಿಗಾಗಿ ದಯಮಾಡಿ ರಜೆ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವುದು ಸರಿಯಲ್ಲ.

    • ಕಾಶಪ್ಪನವರ್ ಪಂಚಾಚಾರ್ಯ ಸಭೆಯಲ್ಲಿ ಅವರು ಹೇಳಿದಂತೆ ನಡೆಯಬೇಕೆಂದ್ರು ಇಲ್ಲಿ ಬಸವಣ್ಣ ಹೇಳಿದಂಗೆ ನಡೆಯಬೇಕು ಎಂದರು

  • ಈ so cald ಲಿಂಗಾಯತ ತಾಲಿಬಾನಿಗಳು , ತಾವುಗಳು ಬಸವ ತತ್ವ ಅಂಥ ಎಲ್ಲಿ ಬೇಕಾದ್ರೂ ಪ್ರಚಾರ ಮಾಡ್ಬೋದು , ಏನೋಭರು ತಮ್ಮ ಧರ್ಮದ ಪ್ರಚಾರ ಮಾಡಿದ್ರೆ ಸಹಿಸಲ್ಲ ಇದೆ ಇವರ ಬಸವ ತತ್ವ ನೋಡಿ , ಜನರು ಮೂರ್ಕರಲ್ಲ , ನಿಮ್ಮ ತಾಲಿಬಾನಿ ಆಟ ಜಾಸ್ತಿ ದಿನ ನದಿಯೊಲ್ಲ,

    • ನಿತೀಶ್ ಅವರೇ ಶರಣು ಶರಣಾರ್ಥಿಗಳು. ನಾವು ಲಿಂಗಾಯತರು ಬಸವಣ್ಣನವರ ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಪ್ರಚಾರ ಮಾಡುತ್ತೇವೆ. ಪಂಚಪೀಠಾಧೀಶ್ವರರು ಅವರ ಸಂಘ ಸಮ್ಮೇಳನದಲ್ಲಿ ಬಸವಣ್ಣನವರ ಬಗ್ಗೆ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಒಪ್ಪಲಾಗುವುದಿಲ್ಲ. ಅದಕ್ಕೆ ಆಕ್ಷೇಪಣೆಯ ಹೊರತು ಪಂಚಪೀಠಾಧೀಶ್ವರರು ರೇಣುಕಾಚಾರ್ಯರ ವಿಚಾರಧಾರೆಗಳನ್ನು ಪ್ರಚಾರ ಮಾಡಿದರೆ ನಾವು ಯಾರು ಆಕ್ಷೇಪಿಸುವುದಿಲ್ಲ ಬಸವಣ್ಣನವರ ವಿಚಾರಗಳನ್ನು ತಪ್ಪು ತಪ್ಪಾಗಿ ಪ್ರಚಾರ ಮಾಡಿದರೆ ಅದಕ್ಕೆ ನಮ್ಮ ಆಕ್ಷೇಪಣೆ ಇರುತ್ತದೆ

      • ನೋಡಿ sir ಕ್ರಿಯೆಕೆ ಪ್ರತಿಕ್ರಿಯೆ ಆಗಿರುತ್ತದೆ , ಹಾಗಂತ ನೀವು ಸರಿ ಅವ್ರು ಸರಿ ಇಲ್ಲ, ಅವ್ರು ತಪ್ಪಾಗಿ ಹೇಳಿದ್ದಾರೆ, ನಾನು ಸರಿ ಹೇಳಿದೇವೆ ಅನ್ನೂ ವಾದ ಕೇಳಲು ಯಾರೂ ಧದರಿಲ್ಲ , ಅವರವರ ಪ್ರತಿಷ್ಠೆಗೆ ಅಷ್ಟೇ ಮಾಡುತ್ತಿರುವುದು

      • ಮತ್ತೇಕೆ ಆಕ್ಷೇಪಣೆ ಅವ್ರು ಅಡ್ಡ ಪಲ್ಲಕ್ಕಿ ಊತ್ಸವ ಮಾಡಲಿ ಬಿಡಿ

  • ಈ‌ ನಿತೀಶ್ ಲಿಂಗಾಯತರಿಗೆ ತಾಲಿಬಾನಿ ಅಂತಿದಾನೆ ಎಂದರೆ ಅವನು ಬೇರೆ ಯಾರೂ ಇರಲ್ಲ , ಇಲ್ಲೇ ವೀರಶೈವರೇ ಆಗಿರುತ್ತಾನೆ ಅವನು ಯಾವುದೇ ಧರ್ಮ,ಪಂಥ ,ಭಿನ್ನ ಸಿಧ್ದಾಂತ ಭಿನ್ನ ಪಕ್ಷದವರೇ ಆಗಿರಲಿ ಲಿಂಗಾಯತ ರನ್ನು ತಾಲಿಬಾನು ಎನ್ನುವುದು ಅಕ್ಷಮ್ಯ ಹಾಗಿದ್ದರೆ ವೀರಶೈವರಿಗೆ ರಕ್ತಹೀರುವ ISIS ಕಟ್ಟರ್ ಪಂಥಿಗಳು ಎಂದರೆ ಹೇಗಿರುತ್ತೆ ? ಈ ರೀತಿಯ ಭಾಷೆ ಪ್ರಯೋಗ ಸರಿಯಾ ?

    • @ನೋಡಿ ಶರಣರೇ ಈ ಶಾಂತಕುಮಾರ್, ವೀರಶೈವ ವಿರೋಧಿಗಳು ಅಂಥ ಆಯಿತು, ಕಲ್ಪನೆಗೂ ಮೆಚಬೇಕೂ , ವಿರೋಧ ಮಾತಾಡಿದ ತಕ್ಷಣ ವೀರಶೈವರು ಅನ್ನೋದು , ಇವರ ಬಸವ ತತ್ವ ಸಂಸ್ಕೃತಿ , ಅವರೇನೋ ಅಡ್ಡಪಲಕಿ ಊತ್ಸವ ಮಾಡಿಕೊಳ್ಳುತ್ತಾರೆ ಅಂತೇ ಮಾಡ್ಕೊಳ್ಳಿ ಬಿಡಿ, ನೀವು ಬಸವ ತತ್ವ ಅಂಥ ಪ್ರಚಾರ ಮಾಡುತಿರಲ್ಲ ಹಾಗೇನೇ , ಎಲ್ಲರಿಗೂ ಎಲ್ಲಾ ಹಕ್ಕುಗಳು ಇವೆ , ಇನ್ನೊಬ್ಬರ ನಿಂದನೆ ಬಿಟ್ಟು ನಿಮ್ಮ ಕಾಯಕ ಮಾಡಿ ನಮ್ಮ ಬಸವಣ್ಣ ನವರ ಹೆಸರು ಉಳಿಸಿ

Leave a Reply

Your email address will not be published. Required fields are marked *