ಗೋಕರ್ಣ
ಆಧುನಿಕ ವಿಜ್ಞಾನ ಒಪ್ಪಿಕೊಳ್ಳದಿದ್ದರೂ, ಜ್ಯೋತಿಷ್ಯ ಪರಿಪೂರ್ಣ ವಿಜ್ಞಾನ. “ನಮ್ಮ ಪರಂಪರೆಯಲ್ಲಿ ಇದನ್ನು ನಿರೂಪಿಸುವ ಜ್ಞಾನ ಅಡಕವಾಗಿವೆ,” ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಸೋಮವಾರ ನುಡಿದರು.
ಭೂಮಿಯಲ್ಲಿ ನಿಂತು ನನ್ನ ಸುತ್ತಲೂ ಏನು ಕಾಣುತ್ತದೆ ಎಂದು ತಿಳಿದುಕೊಳ್ಳುವ ಮೂಲಕ ಕಾಲದ ಭಾಷೆಯನ್ನು ತಿಳಿದುಕೊಳ್ಳಬಹುದು. ಚಂದ್ರ ಗ್ರಹ ಎಂದು ಜ್ಯೋತಿಷ್ಯ ಹೇಳಿದರೆ, ಉಪಗ್ರಹ ಎಂದು ವೈಜ್ಞಾನಿಕ ಪರಿಭಾಷೆ ಹೇಳುತ್ತದೆ. ಆದರೆ ಚಂದ್ರ ನಮ್ಮ ಬದುಕಿನ ಮೇಲೆ ನೇರ ಪ್ರಭಾವ ಬೀರುವುದರಿಂದ ಗ್ರಹ ಎಂದೇ ಜ್ಯೋತಿಷ್ಯದಲ್ಲಿ ಉಲ್ಲೇಖವಿದೆ ಎಂದು ಹೇಳಿದರು ಎಂದು ಕನ್ನಡ ಪ್ರಭಾ ವರದಿಮಾಡಿದೆ.
ಇಡೀ 360 ಡಿಗ್ರಿ ಪರಿಧಿಯನ್ನು 12 ವಿಭಾಗ ಮಾಡಿದರೆ ತಲಾ 30 ಡಿಗ್ರಿ ಆಗುತ್ತದೆ. ಅದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳು ಎನಿಸುತ್ತವೆ. ಆಯಾ ಗ್ರಹಗಳು ಬೇರೆ ಬೇರೆ ರಾಶಿಯಲ್ಲಿ ನಿಂತಾಗ ಬೇರೆ ಬೇರೆ ಫಲಗಳನ್ನು ನೀಡುತ್ತದೆ.
ಸ್ವಕ್ಷೇತ್ರದಲ್ಲಿ ಆಯಾ ಗ್ರಹಗಳಿಗೆ ಬಲ ಹೆಚ್ಚು, ಮಿತ್ರ ಕ್ಷೇತ್ರಗಳಲ್ಲಿ ಬಂದರೆ ಸ್ವಲ್ಪ ಬಲವಿದೆ. ಆದರೆ ಶತ್ರು ಮನೆಗಳಲ್ಲಿ ಬಂದರೆ ಫಲ ಕಡಿಮೆ ಎಂದು ವಿಶ್ಲೇಷಿಸಿದರು.
ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು, ಭಿಕ್ಷಾಸೇವೆ ಸ್ವೀಕರಿಸಿ ಸರಣಿಯ ಪ್ರವಚನ ‘ಕಾಲ’ ನಡೆಸಿಕೊಟ್ಟರು.