‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಭಿತ್ತಿಪತ್ರ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಡಿಸೆಂಬರ್ 19 ರಾಜ್ಯದಾದ್ಯಂತ ಚಿತ್ರ ತೆರೆ ಕಾಣಲಿದೆ

ಬೀದರ್

ಜಿಲ್ಲಾ ಬಸವ ಕೇಂದ್ರದ ಶರಣ ಸಂಗಮ ಕಾರ್ಯಕ್ರಮದಲ್ಲಿ ರವಿವಾರ ‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಭಿತ್ತಿಪತ್ರ ಬಿಡುಗಡೆಯಾಯಿತು.

ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ‘ಶರಣರು ವರ್ಗ, ವರ್ಣ, ಜಾತಿ ಭೇದ ಅಳಿಸಿದರು. ಆ ಪ್ರಭಾವವೇ ಅಕ್ಕ ಮಹಾದೇವಿಯನ್ನು ರೂಪಿಸಿತು. ಇಂತಹ ಅಕ್ಕನ ಬಗ್ಗೆ ನಿರ್ಮಾಪಕ, ನಿರ್ದೇಶಕ ಬಿ.ಜೆ ವಿಷ್ಣುಕಾಂತ ಅವರು ಚಲನಚಿತ್ರ ಮಾಡಿರುವುದು ಶ್ಲಾಘನಾರ್ಹ. ಈ ಸಿನಿಮಾದಲ್ಲಿ ಹಲವು ಕಲಾವಿದರು ಬೀದರನವರಿರುವುದು ವಿಶೇಷ ಸಂಗತಿ,’ ಎಂದರು.

ಭರತ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ಚಿತ್ರ ರಾಜ್ಯದಾದ್ಯಂತ ಡಿಸೆಂಬರ್ 19 ತೆರೆ ಕಾಣಲಿದೆ ಎಂದು ವಿಷ್ಣುಕಾಂತ ಹೇಳಿದರು.

‘ಬೀದರ್ ಜಿಲ್ಲೆ ಸೇರಿ ಶ್ರೀಶೈಲಂನಲ್ಲಿ ಸುಮಾರು 6 ತಿಂಗಳ ಕಾಲ ನಿರಂತರವಾಗಿ ಚಿತ್ರ ಚಿತ್ರೀಕರಣಗೊಂಡಿದ್ದು, 45 ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಾನು ಬೀದರ್ ಜಿಲ್ಲೆಯವನು ಆಗಿರುವ ಕಾರಣಕ್ಕೆ ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇನೆʼ ಎಂದು ತಿಳಿಸಿದರು.

ಬೀದರ್‌ನ ಸುಲೇಕ್ಷಾ ಕೈರಾ ಅಕ್ಕಮಹಾದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಸರಾಂತ ನಟರಾದ ಸುಚೀಂದ್ರ ಪ್ರಸಾದ, ವೈಜಿನಾಥ ಬಿರಾದಾರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಭಕ್ತಿ ಪ್ರಧಾನವಾಗಿರುವ ಚಿತ್ರದಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿ ಅವರುಗಳು ಬರೆದಿರುವ ವಚನಗಳನ್ನು ಬಳಸಿಕೊಳ್ಳಲಾಗಿದೆ.

ʼರಾಜ್ಯದ 100ಕ್ಕೂ ಅಧಿಕ ಚಿತ್ರ ಮಂದಿರ ಸೇರಿ ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಗೊಳ್ಳಲಿದೆ.

ಸುರಕ್ಷಾ ಕೈರ 2018 ರಲ್ಲಿ ತೆರೆ ಕಂಡಿದ್ದ ‘ಸೇಡು’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದವರು. ಸ್ನೇಹಿತ, ವಿದ್ಯಾ ಗಣೇಶ್, ಅಂದುಕೊಂಡಗಲ್ಲಾ ಜೀವನ, ಎಬಿ ಪಾಸಿಟಿವ್, ಮರಳಿ ಬಾ ಮನ್ವಂತರವೇ… ಸೇರಿದಂತೆ ಹಲವಾರು ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
1 Comment

Leave a Reply

Your email address will not be published. Required fields are marked *