ಬೆಂಗಳೂರು
ಲಿಂಗಾಯತ ಸಮಾಜದ ಪ್ರತಿನಿಧಿಗಳು ಗುರವಾರ ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ತರೀಕೆರೆಯಲ್ಲಿರುವ 12ನೇ ಶತಮಾನದ ಶಿವಶರಣೆ ಅಕ್ಕನಾಗಮ್ಮನವರ ಲಿಂಗೈಕ್ಯ ಶಿಲಾಮಂಟಪವನ್ನು ರಾಜ್ಯದ ಸಂರಕ್ಷಿತ ಸ್ಮಾರಕವೆಂದು ಘೋಷಿಸಲು ಮನವಿ ಮಾಡಿಕೊಂಡರು.
ಸರ್ವೇ ನಂಬರ್ 89/3 ರ 1.02 ಎಕರೆ ಜಾಗವನ್ನು ಭೂಸ್ವಾಧೀನ ಪಡೆಯುವಂತೆ ಸರಕಾರದ ಆದೇಶ ಹೊರಡಿಸುವಂತೆಯೂ ಕೇಳಿಕೊಳ್ಳಲಾಯಿತು. ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿದ ತಂಡ:
- ನಾಡೋಜ ಡಾ ಗೊ. ರು. ಚನ್ನಬಸಪ್ಪ. ಶರಣ ಸಾಹಿತ್ಯ ಚಿಂತಕರು. ಬೆಂಗಳೂರು
- ಅರವಿಂದ ಜತ್ತಿ ಅಧ್ಯಕ್ಷರು ಬಸವ ಸಮಿತಿ ಬೆಂಗಳೂರು
- ಪೂಜ್ಯ ಗಂಗಾ ಮಾತಾಜಿ ಬಸವ ಧರ್ಮ ಪೀಠ ಬೆಂಗಳೂರು
- ಪೂಜ್ಯ ಶ್ರೀ ಬಸವಯೋಗಿ ಸ್ವಾಮೀಜಿ ಬಸವ ಗಂಗೋತ್ರಿ ಕುಂಬಳಗೂಡು ಮಠ ಬೆಂಗಳೂರು
- ಪ್ರೊ ವೀರಭದ್ರಯ್ಯ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು
- ಅಶೋಕ್ ದೋಮಲೂರು ಸಂಶೋದಕರು ಅಧ್ಯಯನ ತಾಳೆಯೊಲೆ ಹಸ್ತಪ್ರತಿ ಡಿಜಿಟಲೀಕರಣ ಕೇಂದ್ರ ಬೆಂಗಳೂರು
- ಬಸವರಾಜ್ ವೀರ ಮಾತೆ ಅಕ್ಕನಾಗಲಾಂಬಿಕೆ ಲಿಂಗೈಕ್ಯ ಕ್ಷೇತ್ರಾಭಿವೃದ್ದಿ ಸಮಿತಿ(ರಿ) ತರೀಕೆರೆ
- ನಾಗರಾಜು ವೀರ ಮಾತೆ ಅಕ್ಕನಾಗಲಾಂಬಿಕೆ ಲಿಂಗೈಕ್ಯ ಕ್ಷೇತ್ರಾಭಿವೃದ್ದಿ ಸಮಿತಿ(ರಿ) ತರೀಕೆರೆ
- ಸೋಮಶೇಖರಪ್ಪ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು
- ಕೃಪಾಶಂಕರ್ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು