ಕಲಬುರಗಿ:
ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಮಹಾದೇವಿ ಅಕ್ಕಗಳ ೧೫ನೇ ಸಮ್ಮೇಳನ 13, 14 ಡಿಸೆಂಬರ್ ನಡೆಯಲಿದೆ.
ಸಮ್ಮೇಳನದ ಅಂಗವಾಗಿ 11,12 ಡಿಸೆಂಬರ್ ಎರಡು ದಿನ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳು ಮತ್ತು ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸ್ಪರ್ಧೆಗಳು 11ರಂದು ವಚನ ಕಂಠಪಾಠ, ಶರಣರ ಜನಪದ ಹಾಡು, ಶರಣರ ವೇಷಭೂಷಣ, ವಚನ ಗಾಯನ, ಶರಣರ ಜನಪದ ಹಾಡಿನ ನೃತ್ಯ ನಡೆಯಲಿವೆ.
12ರಂದು ರಸಪ್ರಶ್ನೆ ಕಾರ್ಯಕ್ರಮ (ಶರಣರಿಗೆ ಸಂಬಂಧಿಸಿದ, ವಚನ ಸಾಹಿತ್ಯ ಕುರಿತು) ಒಂದು ನಿಮಿಷದ ಆಟಗಳು, ರಂಗೋಲಿ, ಚುರುಮುರಿಯ ಅಡುಗೆ ಮತ್ತು ಅಂತ್ಯಾಕ್ಷರಿ ಹಮ್ಮಿಕೊಳ್ಳಲಾಗಿದೆ ಎಂದು
ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ ತಿಳಿಸಿದ್ದಾರೆ.
ಸ್ಪರ್ಧೆಗಳು ನಡೆಯುವ ಸ್ಥಳ: ಬಸವ ಸಮಿತಿ, ಅನುಭವ ಮಂಟಪ, ಜಯನಗರ, ಕಲಬುರಗಿ, ಸಂಪರ್ಕ – 9343241412.
