ಅಕ್ಕಮಹಾದೇವಿಯ ಬದುಕು ಮಹೋನ್ನತ: ದಾಕ್ಷಾಯಿಣಿ ಎಸ್. ಅಪ್ಪ

ಅಕ್ಕಮಹಾದೇವಿ ಜಯಂತಿ, ಅಕ್ಕ ಪ್ರಶಸ್ತಿ ಪ್ರದಾನ

ಕಲಬುರಗಿ:

ಜ್ಞಾನ, ತ್ಯಾಗ, ಭಕ್ತಿಗೆ ಭೂಷಣವಾಗಿರುವ ಶರಣೆ ಅಕ್ಕಮಹಾದೇವಿಯ ಬದುಕು ಮಹೋನ್ನತವಾದುದು ಎಂದು ಶರಣಬಸವೇಶ್ವರ ಸಂಸ್ಥಾನದ ಡಾ. ದಾಕ್ಷಾಯಿಣಿ ಎಸ್. ಅಪ್ಪ ನುಡಿದರು.

ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದ ಡಾ. ಶರಣಬಸವೇಶ್ವರ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ಈಚೆಗೆ ನಡೆದ ವೈರಾಗ್ಯನಿಧಿ ಅಕ್ಕ ಮಹಾದೇವಿ ಜಯಂತಿ ಹಾಗೂ ಜಾಗತಿಕ ಮಹಿಳಾ ಶಕ್ತಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತ, ಅಕ್ಕ ಸ್ತ್ರೀ ಕುಲಕ್ಕೆ ಮಹಿಳಾ ಜಾಗೃತಿ, ಪ್ರೋತ್ಸಾಹ, ಪ್ರೇರಣೆಗೆ ಇಂದಿಗೂ ಸಾಕ್ಷಿಯಾಗಿದ್ದಾರೆ ಎಂದರು.

ಕೌಶಿಕನ ಕಾಮುಕ ಕಣ್ಣಿಗೆ ಬಿದ್ದ ಅಕ್ಕ ದಿಗಂಬರೆಯಾಗಿ ಚನ್ನಮಲ್ಲಿಕಾರ್ಜುನನ ಹುಡುಕುತ್ತ ಹೊರಟು ಅನುಭಾವ ಮಂಟಪದ ಶೂನ್ಯ ಪೀಠಾಧ್ಯಕ್ಷ ಅಲ್ಲಮನ ಅಗ್ನಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸ್ತ್ರೀ ಕುಲಕ್ಕೆ ತಿಲಕರೆನಿಸಿಕೊಂಡರು ಎಂದು ತಿಳಿಸಿದರು.

ಸಿಯುಕೆ ಪ್ರಾಧ್ಯಾಪಕಿ ಪ್ರೊ. ಶಿವಗಂಗಾ ರುಮ್ಮಾ ವಿಶೇಷ ಉಪನ್ಯಾಸ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ನಳಿನಿ ಮಹಾಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ. ಶೆಟಗಾರ ವೇದಿಕೆಯಲ್ಲಿದ್ದರು. ಡಾ. ಸುಲೇಖಾ ಮಾಲಿಪಾಟೀಲ ನಿರೂಪಿಸಿದರು. ನಂತರ ಜರುಗಿದ ಸಮಾರೋಪ ಸಮಾರಂಭದಲ್ಲಿ ಪ್ರಭುಶ್ರೀ ತಾಯಿ, ಡಾ. ವಿಲಾಸವತಿ ಖೂಬಾ ಇತರರು ಭಾಗವಹಿಸಿದ್ದರು.

ಬಸವ ಸೇವಾ ಪ್ರತಿಷ್ಠಾನದ ರಾಜಶೇಖರ ಯಂಕಂಚಿ, ಬಸವ ಕೇಂದ್ರದ ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ, ಬಸವರಾಜ ಧೂಳಾಗುಂಡಿ, ವಿಶ್ವನಾಥ ಮಂಗಲಗಿ, ಪ್ರಸನ್ನ ವಾಂಜರಖೇಡ, ಡಾ. ಶಾಂತಾ ಮಠ, ಡಾ. ಶಾಂತಾ ಅಸ್ಟಿಗೆ, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಡಾ. ಶಕುಂತಲಾ ದುರಗಿ, ಡಾ.‌ ಚಿತ್ಕಳಾ ಮಠಪತಿ, ಡಾ. ಜಯಶ್ರೀ ದಂಡೆ, ಸಾಕ್ಷಿ ಸತ್ಯಂಪೇಟೆ, ಛಾಯಾ ಪಟ್ಟಣಶೆಟ್ಟಿ, ಶಾರದಾ ಜಂಬಲದಿನ್ನಿ ಇತರರಿದ್ದರು.

ಪ್ರಶಸ್ತಿ ಪುರಸ್ಕೃತರು:

ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ

(ವೈದ್ಯಕೀಯ), ಅಮರೇಶ್ವರಿ ಬಾಬುರಾವ

ಚಿಂಚನಸೂರ (ಉದ್ಯಮ), ಸುರೇಖಾ

ರಾಜಕುಮಾರ (ಕೃಷಿ), ಡಾ. ಫರ್ವೀನ್

ಸುಲ್ತಾನಾ (ಸಾಹಿತ್ಯ), ಮಾಲಾ ಕಣ್ಣಿ

(ಸಾಮಾಜಿಕ). ಹೀಗೆ ವಿವಿಧ ಕ್ಷೇತ್ರದ ಸಾಧಕರಿಗೆ ಜಾಗತಿಕ ಮಹಿಳಾ ಶಕ್ತಿ ಅಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *