ಆಳಂದ ಶಾಲಾ ಮಕ್ಕಳಿಂದ ಭಾವೈಕ್ಯತಾ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಆಳಂದ

ತ್ರಿವಿಧ ದಾಸೋಹಿಗಳು, ಕನ್ನಡದ ಕುಲಗುರುಗಳು, ಬಸವತತ್ವದ ದಂಡ ನಾಯಕರು, ಭಾರತ ಸರಕಾರದಿಂದ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶದ ಏಕತಾ ಪ್ರಶಸ್ತಿ ಪುರಸ್ಕೃತರಾದ ಪೂಜ್ಯಶ್ರೀ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ 76ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಹಾಗೂ ಮಕ್ಕಳಿಂದ ವಚನ ಸಾಂಸ್ಕೃತಿಕ ಸಮಾರಂಭ ನಡೆಯಿತು.

ಆಳಂದದಲ್ಲಿರುವ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪ ಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಅಂಗವಾಗಿ ವಿದ್ಯಾರ್ಥಿಗಳಿಂದ ವಚನ ನೃತ್ಯ ಗಾಯನ ಮತ್ತು ಶರಣ ಸಂಸ್ಕೃತಿ ಎತ್ತಿ ಹಿಡಿಯುವ ರೂಪಕಗಳನ್ನ ತುಂಬಾ ಅರ್ಥಪೂರ್ಣವಾಗಿ ನಡೆದವು.

ಕಾರ್ಯಕ್ರಮದ ನೇತೃತ್ವವನ್ನು ಅನುಭವ ಮಂಟಪದ ಸಂಚಾಲಕರಾದ ಶ್ರೀ ಕೋರಣೇಶ್ವರ ಸ್ವಾಮಿಗಳು ವಹಿಸಿ ಮಾತನಾಡಿದರು, ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಜಾತೀಯತೆ ವಿರುದ್ಧ, ಧರ್ಮಗಳ ಮಧ್ಯದ ಹಿಂಸಾತ್ಮಕವಾದಂತ ಸ್ಥಿತಿಯ ವಿರುದ್ಧ, ನಿರಕ್ಷರತೆ ಹಾಗೂ ಅಸಮಾನತೆಯ ವಿರುದ್ಧ ನಿಂತವರಾಗಿದ್ದರು. ಪ್ರಕೃತಿಯನ್ನ ಸಂರಕ್ಷಣೆ ಮಾಡುವುದರ ಪರ, ನಾಡು, ನುಡಿ, ನೆಲ, ಜಲ, ದುಡಿಯುವವರ ರೈತರ, ಮಕ್ಕಳ, ಮಹಿಳೆಯರ, ಶೋಷಿತರ ಪರ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರು ಚಿಂತನೆಯನ್ನು ಮಾಡಿದ್ದರು.

ಭಾವೈಕ್ಯ ಅನ್ನೋದು ಸುಮ್ಮನೆ ಬರೋದಿಲ್ಲ, ಜಾತಿ ಮತ ಪಂಥಗಳ ಕ್ಷುದ್ರತೆಗಳು ಸಮಾಜವನ್ನು ವಿಕ್ಷಿದ್ರಗೊಳಿಸುತ್ತವೆ, ಭಾವೈಕ್ಯ ಮತ್ತು ಸಹಕಾರಕ್ಕೆ ಮಠಗಳು ಶಕ್ತಿ ಕೇಂದ್ರ ಆಗಬೇಕು ಎಂದು ಹೇಳುತ್ತಿದ್ದರು ಎಂದು ಸ್ವಾಮೀಜಿ ಹೇಳಿದರು.

ಸಭೆಯ ಅಧ್ಯಕ್ಷತೆ ಶ್ರೀ ಶಿವನಗೌಡ ಪಾಟೀಲ್ ಜಿ ಟಿವಿ ಆಡಳಿತ ಮಂಡಳಿ ಜೇವರ್ಗಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳು ಶ್ರೀ ಶಿವಶರಣಪ್ಪ ಮೂಳೆಗಾಂವ ಜಂಟಿ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು, ಶ್ರೀ ಮಹದೇವ್ ದಿಡ್ಡಿಮನಿ ಆರಕ್ಷಕ ವೃತ್ತ ನಿರೀಕ್ಷಕರು ಸೇಡಂ, ಗುಪ್ತಲಿಂಗ ಪಾಟೀಲ್ ಅಧ್ಯಕ್ಷರು ನ್ಯಾಯವಾದಿಗಳ ಕಲ್ಬುರ್ಗಿ, ದಾಮೋದರ ಕುಲಕರ್ಣಿ ನಿವೃತ್ತ ಮುಖ್ಯೋಪಾಧ್ಯಾಯರು, ಆರಿಫ ಲೇಂಗಟಿ ಆಳಂದ, ಫಾದರ್ ಸಂತೋಷ್ ಬಾಪು ಶಾಂತಿಯ ವನ ಚರ್ಚ್ ಆಳಂದ, ಬಿಎಸ್ ಪಾಟೀಲ್ ಪ್ರಾಂಶುಪಾಲರು ಕಲ್ಬುರ್ಗಿ, ಭೀಮಶಂಕರ ಪಾಟೀಲ್ ದಣ್ಣೂರ ಹಾಗೂ
ಸ್ಥಳೀಯ ಆಡಳಿತ ಮಂಡಳಿಯ ಗುರುಶರಣ ಪಾಟೀಲ್ ಕೊರಳ್ಳಿ, ಡಾ. ಅಭಿನಂದನ್ ಬೇಡಗೆ, ರಾಜಶೇಖರ್ ಪಾಟೀಲ್ ಜಿಡಗಾ, ಮಲ್ಲಪ್ಪ ಹತ್ತರಕಿ, ಮಲ್ಲಿನಾಥ್ ಪರೇಣಿ, ಶಿವಾನಂದ ಹತ್ತಿ, ಮೇಲ್ಗಿರಪ್ಪ ವಾಲಿ, ರಾಜಶೇಖರ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *