(ಕರ್ನಾಟಕ ಸರ್ಕಾರ ಜನವರಿ 18, 2024ರಂದು ಶಿವಮೊಗ್ಗದ ಹಳೆಯ ಜೈಲ್ ಆವರಣಕ್ಕೆ ‘ಅಲ್ಲಮಪ್ರಭು ಉದ್ಯಾನ’ ಎಂದು ನಾಮಕರಣ ಮಾಡಿತು.)
ಶಿವಮೊಗ್ಗ
ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ, ಶಿವಮೊಗ್ಗದ ಹಳೆಯ ಜೈಲ್ ಆವರಣಕ್ಕೆ ‘ಅಲ್ಲಮಪ್ರಭು ಉದ್ಯಾನವನ’ ಎಂದು ನಾಮಕರಣಗೊಂಡಿದ್ದಾಗಿಯೂ, ಅದರ ಬಗೆಗೆ ಅಲಕ್ಷ್ಯ ಹೊಂದಿ ಹಲವು ಸರಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ‘ಫ್ರೀಡಂ ಪಾರ್ಕ್’ ಎಂದೇ ಮುದ್ರಿಸಲಾಗುತ್ತಿದೆ. ಕೆಲವು ರಾಜಕಾರಣಿಗಳ ಸಾಮಾಜಿಕ ಜಾಲತಾಣಗಳಲ್ಲಿಯು ಕೂಡಾ ‘ಫ್ರೀಡಂ ಪಾರ್ಕ್’ ಎಂದೇ ಬಳಸಲಾಗುತ್ತಿದೆ.
ಇದು ಖಂಡನಾರ್ಹ. ಅಲ್ಲದೇ ಸರಕಾರ ತನ್ನ ನಿರ್ಧಾರವನ್ನು ತಾನೇ ಧಿಕ್ಕರಿಸಿದಂತಾಗುತ್ತದೆ. ಆದ್ದರಿಂದ ಇಂತಹ ತಪ್ಪುಗಳು ನಡೆಯದಂತೆ ಎಲ್ಲಾ ಇಲಾಖೆಗಳೂ ಎಚ್ಚರವಹಿಸಬೇಕಿದೆ. ಜೊತೆಗೆ, ಸರ್ಕಾರದ ವತಿಯಿಂದಲೇ ಸಾರ್ವಜನಿಕರಿಗೆ ಎದ್ದು ಕಾಣುವಂತೆ ನಾಲ್ಕೂ ದಿಕ್ಕಿಗೆ ನಾಮಫಲಕ ಹಾಕಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
ಇದೇ ರೀತಿಯಲ್ಲಿ ಶಿವಮೊಗ್ಗದಲ್ಲಿ ಹಲವು ವೃತ್ತಗಳಿಗೆ ಅಧಿಕೃತ ಹೆಸರುಗಳಿಂದ ಕರೆಯುವ ಬದಲಿಗೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದಾರೆ. ಉದಾಹರಣೆಗೆ, ಶಿವಶರಣೆ ಅಕ್ಕಮಹಾದೇವಿ ವೃತ್ತಕ್ಕೆ ಉಷಾನರ್ಸಿಂಗ್ ಹೋಂ ಸರ್ಕಲ್ ಎಂದೂ, ಸೀನಪ್ಪಶೆಟ್ಟಿ ವೃತ್ತಕ್ಕೆ ಗೋಪಿ ಸರ್ಕಲ್ ಎಂದೂ, ಶ್ರೀ ಬಸವೇಶ್ವರ ವೃತ್ತಕ್ಕೆ ಡಿವಿಎಸ್ ಸರ್ಕಲ್ ಎಂದೂ ಕರೆಯುತ್ತಿದ್ದು, ಇವುಗಳನ್ನು ಸರಿಯಾದ ಹೆಸರಿನಿಂದಲೇ ಕರೆಯುವುದನ್ನು ಸಾರ್ವಜನಿಕರು ರೂಢಿಸಿಕೊಳ್ಳಬೇಕಾಗಿದೆ.