ಅಲ್ಲಮರ ವಚನಗಳ ಚಿಂತನೆ ಬದುಕಿನ ದಿಕ್ಕು ಬದಲಿಸಬಲ್ಲದು

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ 321ನೆಯ ಮಾಸಿಕ ಶರಣ ಸಂಗಮ ಹಾಗೂ ಯೋಮಕಾಯಸಿದ್ಧ ಅಲ್ಲಮಪ್ರಭುದೇವರ ಜಯಂತ್ಯುತ್ಸವ ನಡೆಯಿತು.

ಕಾರ್ಯಕ್ರಮದ ಸಮ್ಮುಖ ವಹಿಸಿ ಪೂಜ್ಯ ಶಿವಬಸವ ಸ್ವಾಮಿಗಳು ಮಾತನಾಡುತ್ತ, ಅಲ್ಲಮಪ್ರಭುಗಳು 12ನೆಯ ಶತಮಾನದ ಮಹಾನ್ ದಾರ್ಶನಿಕರಾಗಿದ್ದರು. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೊದಲನೆಯ ಅಧ್ಯಕ್ಷರಾಗಿ ಅವರು ಮಾಡಿದ ಕಾರ್ಯ ಐತಿಹಾಸಿಕವಾಗಿದೆ.

ಶೂನ್ಯಪೀಠದ ಮೊದಲ ಅಧ್ಯಕ್ಷರಾಗಿ ಅಂಗಾಯತ ಸಿದ್ಧಾಂತಕ್ಕೆ ತಾತ್ವಿಕ ಅದಿಷ್ಠಾನ ನೀಡಿದರು. ಅವರ ವಚನಗಳು ಬೆಡಗಿನ ರೂಪದಲ್ಲಿ ಇದ್ದು ಅದರಲ್ಲಿ ಜಗತ್ತಿನ ತತ್ವಜ್ಞಾನದ ಚಿಂತನೆಗಳು ಅಡಗಿವೆ.

ಅಲ್ಲಮಪ್ರಭುಗಳು ಆ ಕಾಲದ ಶ್ರೇಷ್ಠ ಅನುಭಾವಿಗಳಾಗಿ, ಜ್ಞಾನಿಗಳಾಗಿ  ಜಗತ್ತನ್ನು ಸುತ್ತಾಡಿದರು. ಕಲ್ಯಾಣಕ್ಕೆ ಆಗಮಿಸಿ ಬಸವಣ್ಣನವರ ಕಾರ್ಯವನ್ನು ನೋಡಿ ಅತ್ಯಂತ ಸಂತೋಷಪಟ್ಟು ಕೈಗೂಡಿಸಿದರು.

ಬಸವಣ್ಣನವರ ಕುರಿತು ಅನೇಕ ವಚನಗಳಲ್ಲಿ ಪ್ರಭುಗಳು ಅಭಿಮಾನದ ಮಾತುಗಳು ಆಡಿದ್ದಾರೆ. ಅವರ ವಚನಗಳ ಚಿಂತನೆ ನಮ್ಮೆಲ್ಲರ ಜೀವನದ ದಿಕ್ಕು ಬದಲಾಯಿಸುತ್ತದೆ ಎಂದರು.

ಮಲ್ಲಮ್ಮ ಆರ್. ಪಾಟೀಲ ಅವರಿಂದ ಬಸವಗುರು ಪೂಜೆ ನಡೆಯಿತು. ಧನರಾಜ ವಾಲೆ ದಾಡಗಿ ಧರ್ಮಗ್ರಂಥ ಪಠಣ ಮಾಡಿದರು. ರಾಜು ನಿರೂಪಿಸಿದರು. ಗುರುಪ್ರಸಾದ ಶಾಲೆಯ ಮಕ್ಕಳು ವಚನ ನೃತ್ಯ ಮಾಡಿದರು. ಶಾಂತಯ್ಯ ಸ್ವಾಮಿ ಶರಣು ಸಮರ್ಪಣೆ ಸಲ್ಲಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *