ಯಳಂದೂರು
ದಕ್ಷಿಣ ಕರ್ನಾಟಕದ ತುದಿಯಲ್ಲಿರುವ ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ರವಿವಾರ ಲೇಟ್ ಪುಟ್ಟಣ್ಣನವರ ಧರ್ಮಪತ್ನಿ ಕಾಳಮ್ಮನವರ ಮಗ ಸೊಸೆಯವರಾದ ಶ್ರೀಮತಿ ರಾಣಿ ಮತ್ತು ಮಲ್ಲೇಶ್. ಪಿ ಅವರ ನೂತನ ಮನೆಯ ಗುರು ಪ್ರವೇಶವ ಬಸವತತ್ವದ ಅನುಸಾರವಾಗಿ ನಡೆಯಿತು.
ವಿಶ್ವಬಸವಸೇನೆ ಸಹಯೋಗದಿಂದ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರದ ಮತ್ತು ವಚನಗಳ ಪುಸ್ತಕಗಳ ಸಮೇತ ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.
ನಂತರ ಬಸವಗೀತೆ ಹಾಡುವ ಮುಖಾಂತರ ಷಟ್ಸ್ಥಲ ಬಸವ ಧ್ವಜಾರೋಹಣ ಜರುಗಿತು. ಶ್ರೀಬಸವಯೋಗಿಪ್ರಭು ಸ್ವಾಮೀಜಿ ರವರು ಮನೆಯವರಾದ ಕಾಳಮ್ಮ ಮತ್ತು ಮಗ ಮಲ್ಲೇಶ್ ರವರಿಗೆ ಇಷ್ಟಲಿಂಗ ಪೂಜೆ ಮಾಡುವ ಬಗ್ಗೆ ವಿಚಾರವನ್ನು ತಿಳಿಸಿ ಕೊಟ್ಟು ಬಸವಾದಿ ಶರಣರ ವಿಚಾರಗಳನ್ನು ವಚನಗಳ ಆಧಾರದ ಮುಖಾಂತರ ಹೇಳಿದರು. ಮನೆಯವರಿಗೆ ಗುರುಗಳು ಮತ್ತು ಬಸವಭಕ್ತರು ಪುಷ್ಪಾರ್ಚನೆಯನ್ನು ಮಾಡಿದರು.
ಚೌಹಳ್ಳಿ ಲಿಂಗರಾಜಣ್ಣರವರು ಲಿಂಗಾಯತ ತತ್ವದ ವಿಚಾರವಾಗಿ ಮೂಢನಂಬಿಕೆ ಕಂದಾಚಾರಗಳ ಬಗ್ಗೆ ವಿವರವಾಗಿ ವೇದಿಕೆಯಲ್ಲಿ ಮಾತನಾಡಿದರು. ನಂಜನಗೂಡಿನ ನಂದಿಶ್ ಮಾಸ್ಟರ್ ರವರು ತಮ್ಮ ಅನುಭಾವದ ಮಾತುಗಳನ್ನು ನುಡಿದರು.
ವಿಶ್ವಬಸವ ಸೇನೆಯ ಅಧ್ಯಕ್ಷರಾದ ಬಸವಯೋಗಶ್, ಚೆನ್ನವಡೆಯನಪುರ ಚನ್ನಪ್ಪಣ್ಣ , ಮಹೇಶ್ ಕಲ್ಪುರ, ಹಂಗಳಪುರ ಸುರೇಶಣ್ಣ,ತಲಕಾಡು ಸಂತೋಷ, ,ನೇರಳೆ ಸುರೇಶ,ಮುದ್ದಳ್ಳಿ ಅಶೋಕಣ್ಣ,ಚಿಗುರು ನಂಜುಂಡಸ್ವಾಮಿ,ಅಂಬಳೆ ಗಿರೀಶ್,ಕುಲಗಾಣ ರಾಜು, ಜ್ಯೋತಿ ಸುರೇಶ್, ಮಮತಾ ಮಂಜುನಾಥ್, ಮಂಗಳಮ್ಮ ಮಲ್ಲಪ್ಪ ,ಊರಿನ ಹಿರಿಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಗುರುಪ್ರವೇಶ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.