ಹಾವೇರಿ
ನಿಜಶರಣ ಅಂಬಿಗ ಚೌಡಯ್ಯನವರ ಗುರುಪೀಠದ ವತಿಯಿಂದ ಜನವರಿ 14 ಹಾಗೂ 15ರಂದು 7ನೇ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025, ವಚನ ಗ್ರಂಥ ಮಹಾರಥೋತ್ಸವ ನರಸೀಪುರದಲ್ಲಿ ನಡೆಯಲಿದೆ.
ಜನವರಿ 14 ರಂದು ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ ಕಾರ್ಯಕ್ರಮ, ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಪೂಜೆ, ಸಾಮೂಹಿಕ ರಕ್ತದಾನ ಶಿಬಿರ, ಸಾಮೂಹಿಕ ಸರಳ ವಿವಾಹ ಮಹೋತ್ಸವ ಮತ್ತು ಲಿಂಗೈಕ್ಯ ಪೂಜ್ಯ ಸದ್ಗುರು ಶಾಂತಮುನಿ ಮಹಾಸ್ವಾಮಿಗಳವರ 9ನೇ ಸ್ಮರಣೋತ್ಸವ, ರಾಜ್ಯಮಟ್ಟದ ವಚನ ಕಂಠ ಪಾಠ ಸ್ಪರ್ಧೆ, ಪ್ರಪ್ರಥಮ ಗಂಗಾರತಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನಿಜಶರಣ ಅಂಬಿಗರ ಚೌಡಯ್ಯನವರ ಜೀವನದಾರಿತ ದೃಶ್ಯಾವಳಿ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.

15ರ ಬುಧವಾರದಂದು ಧರ್ಮ ದ್ವಜಾರೋಹಣ, ಧರ್ಮ ಸಭೆ, ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತೋತ್ಸವ, ಜಗದ್ಗುರು ಪೂಜ್ಯ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳವರ 9ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ, ವಚನ ಗ್ರಂಥ ಮಹಾರಥೋತ್ಸವ ಜರುಗಲಿವೆ.

ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಹಾಗೂ ಕರ್ನಾಟಕ ರಾಜ್ಯ ಗಂಗಾಮತ (ಕೋಲಿ) ಸಮಾಜ ಸಕಲರಿಗೂ ಸ್ವಾಗತ ಕೋರಿವೆ.
