ಸವದತ್ತಿ
ಲಿಂಗಾಯತ ಧರ್ಮ ನಿಜಾಚರಣೆಯ, “ಅಂತ್ಯ ಸಂಸ್ಕಾರ”ವನ್ನು ವಚನತತ್ವ ಆಧಾರಿತವಾಗಿ ನೆರವೇರಿಸುವ ದಿನದ ಕಾರ್ಯಾಗಾರ ರವಿವಾರ ಮಲ್ಲೂರಿನಲ್ಲಿ ಯಶಸ್ವಿಯಾಗಿ ನಡೆಯಿತು.
ವಿಶ್ವಗುರು ಬಸವ ಸೋಶಿಯಲ್ ಫೌಂಡೇಶನ್ನಿನ ಆಶ್ರಯದಲ್ಲಿ ಮಲ್ಲೂರ ಅನುಭವ ಮಂಟಪದಲ್ಲಿ ಅನುಭಾವ, ಸಂವಾದ ಮತ್ತು ಪ್ರಾತ್ಯಕ್ಷಿಕೆ ಮೂಲಕ ನಿಜಾಚರಣೆಯ ಪರಿಚಯವನ್ನು ನೆರೆದ ಶರಣ, ಶರಣೆಯರಿಗೆ ಮಾಡಿಕೊಡಲಾಯಿತು.
ವಚನಮೂರ್ತಿಗಳಾದ ಎಂ.ಎಂ. ಸಂಗೊಳ್ಳಿ ಹಾಗೂ ಶಿವಾನಂದ ಅರಬಾವಿ ಶರಣರು ಮಾರ್ಗದರ್ಶನ ಮಾಡಿದರು.
ಮಲ್ಲೂರು, ಮಾಟೊಳ್ಳಿ, ಹೊಸೂರು, ಮೆಕಲಮರಡಿ, ಬೈಲಹೊಂಗಲ, ಸವದತ್ತಿ, ಗೋಕಾಕ ಮತ್ತೀತರ ಸ್ಥಳಗಳಿಂದ 60 ಜನ ಶರಣ, ಶರಣೆಯರು ಆಗಮಿಸಿದ್ದರು. ಎಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.


TAGGED:ನಿಜಾಚರಣೆ