ನೂತನ ಅನುಭವ ಮಂಟಪ ಜಾಗತಿಕ ಮಟ್ಟದ ಸ್ಮಾರಕವಾಗಲಿದೆ
ಬಸವ ಕಲ್ಯಾಣ
ಪಟ್ಟಣದಲ್ಲಿ ನಡೆಯುತ್ತಿರುವ ಅನುಭವ ಮಂಟಪ ನಿರ್ಮಾಣ ಕಾರ್ಯ ಕಾರ್ಯ ವೇಗವಾಗಿ ಸಾಗುತ್ತಿದ್ದು ಈಗಾಗಲೇ 60% ಕೆಲಸ ಮುಕ್ತಾಯಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಸೋಮವಾರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ನೂತನ ಅನುಭವ ಮಂಟಪ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪದ ನೆಲಮಹಡಿ ಸೇರಿದಂತೆ ಐದು ಅಂತಸ್ತಿನ ಕಟ್ಟಡಗಳು ಇದುವರೆಗೆ ಪೂರ್ಣಗೊಂಡಿದ್ದು, ಒಟ್ಟು ₹271 ಕೋಟಿ ಖರ್ಚಾಗಿದೆ, ಭೌತಿಕವಾಗಿ ಶೇ 60 ರಷ್ಟು ಪ್ರಗತಿಯಾಗಿದೆ. ಉಳಿದ ಕಾಮಗಾರಿ 2026ರೊಳಗೆ ಪೂರ್ಣಗೊಳ್ಳಲಿದೆ.
ಪರಿಷ್ಕೃತ ಮೊತ್ತ ₹742 ಕೋಟಿಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅನುಭವ ಮಂಟಪದ ಪ್ರಗತಿ ಕುರಿತಂತೆ ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದರು.

ಐಐಟಿ ವಿಜ್ಞಾನಿಗಳ ಸಹಕಾರದಿಂದ ಈ ಮಂಟಪದಲ್ಲಿ ಧ್ಯಾನ, ವಚನ ಪಠಣ ಇತ್ಯಾದಿಯಿಂದ ಮೆದುಳಿನ ಬದಲಾವಣೆಗಳ ಅಧ್ಯಯನ ನಡೆಯಲಿದೆ. ತಂತ್ರಜ್ಞಾನ ಮತ್ತು ಅಧ್ಯಾತ್ಮದ ಸಮನ್ವಯದ ಜಾಗತಿಕ ಮಾದರಿಯಾಗಿ ಈ ಮಂಟಪ ರೂಪುಗೊಳ್ಳಲಿದೆ.
ಬಸವಣ್ಣನವರ ದರ್ಶನ, ವಚನ ಮತ್ತು ಶರಣ ಸಂಸ್ಕೃತಿಯ ಸಾರವನ್ನು ಮುಂದಿನ ಪೀಳಿಗೆಗೆ ಪೂರೈಸುವ ನಿಜವಾದ ಜ್ಞಾನಮಂದಿರವೆಂದು ಇದು ಪರಿಗಣಿಸಲಿದೆ.
ನೂತನ ಅನುಭವ ಮಂಟಪ ಯೋಜನೆಯು ಜಾಗತಿಕ ಮಟ್ಟದ ಸ್ಮಾರಕವಾಗಲಿದ್ದು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ತೊಡಕು ಬಾರದಂತೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮುಂಜಾಗೃತೆ ವಹಿಸಬೇಕುʼ ಎಂದು ತಿಳಿಸಿದರು.
770 ಶರಣರ ವಚನಗಳನ್ನು 770 ಕಂಬಗಳಲ್ಲಿ ಕೆತ್ತುವಾಗ ವಚನಗಳನ್ನು ಹಾಗೂ ಚರಿತ್ರೆಗಳಲ್ಲಿ ಅಕ್ಷರಗಳ ಕೆತ್ತನೆಯಲ್ಲಿ ತಪ್ಪುಗಳು ಆಗದಂತೆ ಮುಂಜಾಗೃತೆ ವಹಿಸಬೇಕು. ಪ್ರತಿಯೊಬ್ಬ ಶರಣರ ವಚನಗಳನ್ನು ವಿದ್ವಾಂಸರಿಂದ ಪರಿಶೀಲಿಸತಕ್ಕದ್ದು.
157 ಶರಣರ ಕಿರು ಚಿತ್ರಗಳನ್ನು ಉನ್ನತ ಮಟ್ಟದ ತಜ್ಞರಿಂದ ನಿರ್ಮಿಸಲಾಗುತ್ತಿದೆ. ಶರಣ ಪರಂಪರೆಯ ಆಧಾರದ ಮೇಲೆ ವಿವಿಧ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗುವುದು. ಶರಣರ ರೂಪದ ರೊಬೊಟಿಕ್ಸ್‌ಗಳ ನಿರ್ಮಾಣ, ಶರಣ ಗ್ರಾಮ 7ಡಿ ಥಿಯೇಟರ್, ವಿಜ್ಞಾನ ಮ್ಯೂಸಿಯಂ ವೈಜ್ಞಾನಿಕ ಇಷ್ಟಲಿಂಗ ಶಿವಯೋಗದ ಗ್ಯಾಲರಿ ಸೇರಿದಂತೆ ವಿವಿಧ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರವಾಸಿಗರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತ್ರಿಸ್ಟಾರ್ ಹೋಟೆಲ್ ಕಟ್ಟಡದೊಳಗೆ ವಾಟರ ಬೋಟಿಂಗ್, ಲ್ಯಾಂಡ್ ಸ್ಕೇಪಿಂಗ್ ಕುರಿತ ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಅಪರ ಜಿಲ್ಲಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಜಗನ್ನಾಥ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಇನ್ನಷ್ಟು ಯುವಕರು ಜ್ಞಾನಿಗಳು ತೊಡಗಿಕೊಳ್ಳುವಂತೆ ಮತ್ತು ತಂತ್ರಜ್ಞಾನಗಳಿಂದ ಹೆಚ್ಚು ತತ್ವ ಸಿದ್ಧಾಂತಗಳನ್ನು ಅನುಭವಿಸುವ ಯೋಜನೆಗಳನ್ನು ಅಳವಡಿಸಬೇಕು.
ಈ 10 ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಬಸವ ತತ್ವ ಹೆಚ್ಚು ಪ್ರಚಾರವಾಗಿದ್ದು ಹೆಮ್ಮೆಯ ಸಂಗತಿ.
ಹಾಗೆಯೇ ಅನೇಕ ವೈಚಾರಿಕ
ಜನರು ಇದರಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ
ಅದ್ಭುತವಾದ ಕೆಲಸ ಶರಣು ಶರಣಾರ್ಥಿಗಳು 🙏🙏🙏