ಬಸವಕಲ್ಯಾಣ
ಬಸವಕಲ್ಯಾಣದಲ್ಲಿ ನಡೆಯುವ 45ನೆಯ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ಯ ನವಂಬರ್ 11ರಿಂದ 2ರವರೆಗೆ ಸಾಮೂಹಿಕ ವಚನ ಪಾರಾಯಣ ನಡೆಯುತ್ತಿದೆ.
ಇತ್ತೀಚೆಗೆ ಕಾರ್ಯಕ್ರಮ ನಡೆಯುವ ಉದ್ಘಾಟನೆ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಉದ್ಘಾಟನೆ ನೆರವೇರಿಸಿ ಬೆಂಗಳೂರು ಜಿಲ್ಲಾ ನ್ಯಾಯಧೀಶರಾದ ಶರಣ ಮಲ್ಲಿಕಾರ್ಜುನ ನಾಗರಾಳೆ ಅವರು ವಚನಗಳು ಆರೋಗ್ಯಕರ ಸಮಾಜಕ್ಕೆ ಕಾನೂನು ಇದ್ದ ಹಾಗೆ ಪಾರಾಯಣ ಮಾಡುವ ಜೊತೆಗೆ ವಚನಗಳ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.
ಪೂಜ್ಯ ಶ್ರೀ ಡಾ.ಶಿವಾನಂದ ಮಹಾಸ್ವಾಮಿಗಳು ಹುಲಸೂರು, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ, ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಬಸವಕಲ್ಯಾಣ, ಪೂಜ್ಯ ಶ್ರೀ
ಬಸವಪ್ರಭು ಮಹಾಸ್ವಾಮಿಗಳು ಗೋರ್ಟಾ, ಪೂಜ್ಯ ಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು
ಕಾಖಂಡಕಿ, ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಗಳು
ಬೇಲೂರು, ಪೂಜ್ಯ ಶ್ರೀ ಬಸವದೇವರು, ಪೂಜ್ಯ ಶ್ರೀ ಪ್ರಕಾಶದೇವರು, ಪೂಜ್ಯ ಶ್ರೀ ಲೋಕೇಶ
ಗುರೂಜಿ, ಪೂಜ್ಯ ಶ್ರೀ ಸುಗುಣಾದೇವಿತಾಯಿ, ಪೂಜ್ಯ ಶ್ರೀ ಹಾಲಮ್ಮತಾಯಿ, ಪೂಜ್ಯ ಶ್ರೀ ಸತ್ಯಕ್ಕ ತಾಯಿ ಸಮ್ಮುಖ ವಹಿಸಿದ್ದರು.
ಸಾಮೂಹಿಕ ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷ, ಡಾ.ಸಂಗೀತಾ ಮಂಠಾಳೆ ಅವರು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರೊ.ಮೀನಾಕ್ಷ ಬಿರಾದಾರ ಶರಣು ಸಮರ್ಪಣೆ ಮಾಡಿದರು. ಶರಣ ರಾಜು ಜುಬರೆ ನಿರೂಪಿಸಿದರು. ಶರಣೆ ಲಲಿತಾ ಜಗನ್ನಾಥ ಪರತಾಪೂರೆ ಅವರಿಂದ ಪ್ರಸಾದ ದಾಸೋಹ ನಡೆಯಿತು.