ಅನುಭವ ಮಂಟಪ
ಅನುಭವ ಮಂಟಪಕ್ಕೆ ಮರುಹುಟ್ಟು ನೀಡಿದ ಸಿದ್ದಲಿಂಗಯತಿಗಳು
ಆಂತರಿಕ ವಿರೋಧಕ್ಕೆ ಬಲಿಯಾದ ಅನುಭವ ಮಂಟಪ
ಆಗಮಿಕ ಶೈವರ ವಿರೋಧದಿಂದ ಸ್ಥಗಿತಕೊಂಡಿದ್ದ ಅನುಭವ ಮಂಟಪಕ್ಕೆ ಮರುಹುಟ್ಟು ನೀಡಿದವರು ೧೬ನೇ ಶತಮಾನದಲ್ಲಿ ಬಂದ ಎಡೆಯೂರು ಸಿದ್ದಲಿಂಗಯತಿಗಳು.
ಮೂಲ ಅನುಭವ ಮಂಟಪ ಕಲ್ಯಾಣಕ್ಕೆ ಸೀಮಿತವಾಗಿತ್ತು. ಸಿದ್ದಲಿಂಗಯತಿಗಳು ಅದನ್ನು ಒಂದು ಸಂಚಾರಿ ವೇದಿಕೆಯಾಗಿ ಪರಿವರ್ತಿಸಿ ವಿವಿಧ ರೀತಿಯಲ್ಲಿ ಜನರಿಗೆ ತಲುಪಿಸಿದರು.
ಎಡೆಯೂರು, ಹಂಪಿ, ಕಲ್ಯಾಣ, ಚೆನ್ನಪಟ್ಟಣ, ಕಗ್ಗೆರೆ, ಹುಲಿಯೂರು, ಉಳವಿಗಳಂತಹ ಕನಿಷ್ಠ ೩೫ ಸ್ಥಳಗಳಲ್ಲಿ ಚರ್ಚಾಗೋಷ್ಠಿಗಳನ್ನು ನಡೆಸಿ ದ್ವಿತೀಯ ಅಲ್ಲಮರೆನಿಸಿಕೊಂಡರು.
ಅನುಭವ ಮಂಟಪದ ವ್ಯಕ್ತಿ ರೂಪವಾಗಿ ೭೦೦ ವಿರಕ್ತರನ್ನು ಸಿದ್ದಪಡಿಸಿ ಅವರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುವಂತೆ ಮಾಡಿದರು. ಇದರಿಂದ ಬಸವ ಸಂದೇಶ ದಿಕ್ಕು ದಿಕ್ಕುಗಳಲ್ಲಿ ಹರಡಿತು.
ಅನುಭವ ಮಂಟಪದ ಪರಿಕಲ್ಪನೆಯನ್ನು ಪಸರಿಸಲು ಸಾಹಿತ್ಯವನ್ನೂ ಬಳಸಿಕೊಂಡರು. ಇದರಿಂದ ಅನುಭವ ಮಂಟಪದ ಸಂಸ್ಕೃತಿ, ಸಿದ್ಧಾಂತ ಕಾಲಾತೀತವಾಗಿ ಜನರ ಮನಸ್ಸಿನಲ್ಲಿ ನೆಲೆ ನಿಂತಿತು.
ಅನುಭವ ಮಂಟಪದ ಗ್ರಂಥ ರೂಪವೇ ವಚನಗಳನ್ನು ಸಂವಾದಗಳಾಗಿ ಹೆಣೆದ ಶೂನ್ಯ ಸಂಪಾದನೆ. ಇದರ ನಾಲಕ್ಕು ಕೃತಿಗಳಲ್ಲಿ ಮೂರನ್ನು ರಚಿಸಿದ್ದು ಅವರ ಶಿಷ್ಯ ಪರಂಪರೆಯವರೇ.
(‘ಅನುಭವ ಮಂಟಪ: ಹುಟ್ಟು-ಮರುಹುಟ್ಟು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ 4)