ನೂರಾರು ವಚನಗಳನ್ನು ನೆನಪಿನಿಂದ ಹೇಳಿದ ಸ್ಪರ್ಧಾಳುಗಳು
ಬಸವಕಲ್ಯಾಣ
ಇಲ್ಲಿ ನಡೆದ ರಾಜ್ಯಮಟ್ಟದ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯಲ್ಲಿ ನೂರಾರು ವಚನಗಳನ್ನು ಹೇಳಿದ ಸ್ಪರ್ಧಾಳುಗಳಿಂದ ಪ್ರೇಕ್ಷಕರು ಬೆರಗಾಗಿದ್ದಾರೆ.
816 ವಚನಗಳು ಹೇಳಿದ ಶಿವರಾಜ ಪಾಟೀಲ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಬಾಗಲಕೋಟ ಜಿಲ್ಲೆಯ ಸವದಿ ಗ್ರಾಮದ ಭಾಲ್ಕಿ ಹಿರೇಮಠ ಸಂಸ್ಥಾನದ ಪ್ರಸಾದ ನಿಲಯದ ವಿದ್ಯಾರ್ಥಿ. ಬೀದರ ಜಿಲ್ಲೆಯ ಹುಮನಾಬಾದದ ಡಾ.ಕಲ್ಯಾಣಮ್ಮ ರಾಮೇಶಚಂದ್ರ ಮಟ್ಟಿ 505 ವಚನಗಳು ಹೇಳಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಬೀದರನ ಬಸವಗಿರಿಯ ಚೆನ್ನಬಸವಣ್ಣ 433 ವಚನಗಳು ಹೇಳಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-2024ರ ನಿಮಿತ್ಯ ಹಮ್ಮಿಕೊಂಡಿರುವ
ಸ್ಪರ್ಧೆ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಂಗಳೂರು ಬೆಳಗಾವಿ, ಧಾರವಾಡ, ಬಾಗಲಕೋಟೆ, ರಾಯಚೂರು, ಕಲಬುರಗಿ, ಬೀದರ ಮುಂತಾದ ಜಿಲ್ಲೆಗಳಿಂದ 108 ಸ್ಪರ್ಧಾಳುಗಳು ಆಗಮಿಸಿದ್ದರು. ಇವರಲ್ಲಿ 20 ವಿದ್ಯಾರ್ಥಿಗಳು 200ಕ್ಕಿಂತಲೂ ಹೆಚ್ಚಿನ ವಚನಗಳನ್ನು, 35 ವಿದ್ಯಾರ್ಥಿಗಳು ನೂರಕ್ಕಿಂತಲೂ ಹೆಚ್ಚಿನ ವಚನಗಳನ್ನು ಹೇಳಿ ಪ್ರೇಕ್ಷಕರಲ್ಲಿ ಬೆರಗು ಮೂಡಿಸಿದರು.
ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ವಚನ ಪುಸ್ತಕ ನೀಡಲಾಯಿತು.
ವಿಜೇತರಾದವರಿಗೆ 2024 ನವೆಂಬರ್ 23 ಮತ್ತು 24 ರಂದು ನಡೆಯುವ 45ನೇ ಶರಣ ಕಮ್ಮಟ ಹಾಗೂ
ಅನುಭವಮಂಟಪ ಉತ್ಸವದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅನುಭವಮಂಟಪದ
ಕಾರ್ಯದರ್ಶಿ ಡಾ.ಎಸ್.ಬಿ. ದುರ್ಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಥಮ ಬಹುಮಾನ ರೂ.20,000, ದ್ವಿತೀಯ ಬಹುಮಾನ 15,000, ತೃತೀಯ ಬಹುಮಾನ 10,000 ಶರಣೆ ಸುಶೀಲಾದೇವಿ ಬಿ.ವಿ. ಪಟೇಲ್ ಚಾರಿಟೇಬಲ್ ಟ್ರಸ್ಟ್ ಬಸವಲ್ಯಾಣ ಇವರ ದಾಸೋಹತ್ವದಲ್ಲಿ ನೀಡಲಾಗುವುದು.
ವಚನ ಸ್ಪದೆ೯ಯಲ್ಲಿ ಜಯಲ್ಲಿ ಬಹುಮಾನ ಪಡೆದ ಎಲ್ಲರಿಗೂ ಅನಂತ ಶರಣುಗಳು🙏🙏
ಶರಣು ಶರಣಾರ್ಥಿಗಳು. ನಿಜಕ್ಕೂ ಇವರ ಸಾಧನೆ ಅಮೋಘವಾದುದು. ಇವರಿಗಿರುವ ಆಸಕ್ತಿ ಶ್ರದ್ದೆ ಎಲ್ಲರಲ್ಲಿಯೂ ಅಚ್ಚರಿ ಮೂಡಿಸುವಂತಿದೆ. ಅಷ್ಟೊಂದು ವಚನಗಳನ್ನು ಕಂಠಪಾಠ ಮಾಡಿ ಹೇಳಿದ ಇವರ ಜ್ಞಾಪಕ ಶಕ್ತಿಗೆ ಗೌರವದ ಶರಣು ಶರಣಾರ್ಥಿಗಳು. ಇವರ ಆಸಕ್ತಿ ಕುಂದದಿ ಇನ್ನೂ ಹೆಚ್ಚು ಹೆಚ್ಚು ಮುಂದುವರೆಯಲಿ. ಗುರು ಬಸವಾದಿ ಶರಣರ ಕೃಪೆ ಸದಾ ಇವರಿಗಿರಲಿ ಎಂದು ಪ್ರಾರ್ಥಿಸುವೆ. ಸಕಲ ಜೀವಾತ್ಮರಿಗೆ ಲೇಸಾಗಲಿ.