ಕನ್ನೇರಿ ಶ್ರೀ ರಾಜಕೀಯ ಪಕ್ಷ ಸೇರಿ ಎರಡನೆ ಯೋಗಿಯಾಗುವ ಗುರಿ ಹೊಂದಿದ್ದಾರೆ.
ಬಸವ ಕಲ್ಯಾಣ
ಹಿಂದುತ್ವದ ನಾಜಿ ಎಂದೇ ಕುಖ್ಯಾತಿ ಪಡೆದಿರುವ ಕನ್ನೇರಿ ಮಠದ ಶ್ರೀಗಳು ಸುವರ್ಣ ನ್ಯೂಸ್ ಡಿಬೇಟ್ ಒಂದರಲ್ಲಿ ಬಸವ ತತ್ವದವರನ್ನು ತಾಲಿಬಾನಿಗಳಿಗೆ ಹೋಲಿಸಿ ಮಾತನಾಡಿರುವುದು ಅಕ್ಷಮ್ಯ ಅಪರಾಧ.
ಈ ಹೇಳಿಕೆಯಿಂದ ಬಸವ ತತ್ವದವರು ವಿಚಲಿತರಾಗುವರೆಂದು ತಿಳಿದಿದ್ದರೆ ಅದು ಅವರ ಭ್ರಮೆ. ಇಂತಹ ಹೇಳಿಕೆಯಿಂದ ಬಸವ ತತ್ವದವರು ಇನ್ನಷ್ಟು ಗಟ್ಟಿಗೊಳ್ಳುತ್ತಾರೆ. ಸರ್ವರನ್ನೂ ಗೌರವಿಸುವ ಮತ್ತು ಇಂಬಿಟ್ಟುಕೊಳ್ಳುವ ಸಂಸ್ಕೃತಿ ಬಸವ ತತ್ವ ಸಂಸ್ಕೃತಿಯಾಗಿದೆ. ವೈದಿಕ ಸಂಸ್ಕೃತಿಯು ಜಾತಿ, ವರ್ಣ, ಲಿಂಗ ತಾರತಮ್ಯ ಅನುಸರಿಸಿ ಬೇಧಗಳನ್ನು ಸೃಷ್ಟಿಸುತ್ತದೆ.
“ಗೂಗೆ ಕಣ್ಣು ಕಾಣಲರಿಯದೆ ರವಿಯ ಬೈಯುವಂತೆ” ಬಸವತತ್ವ ಬೆಳೆಯುತ್ತಿರುವುದನ್ನು ಮತ್ತು ವಿರಕ್ತ ಮಠಾದೀಶರು ಬಸವತತ್ವದ ಕಡೆ ವಾಲುತ್ತಿರುವದನ್ನು ಸಹಿಸದೆ ವಿಹ್ವಲಗೊಂಡ ಶ್ರೀಗಳು ಗೂಗೆಯಂತಾಗಿದ್ದಾರೆ.
ತತ್ವ ನಿಷ್ಟ ಬಸವ ತತ್ವದವರನ್ನು ತಾಲಿಬಾನ್ ಎಂದು ಕರೆಯುವ ಸ್ವಾಮಿಗಳು ಸಮಾಜದಲ್ಲಿ ಮೌಡ್ಯವನ್ನು ಬಿತ್ತಿ, ಮನುಸಂಸ್ಕೃತಿ ಬೆಳೆಸುತ್ತಿರುವುದನ್ನು ನೋಡಿದರೆ ಇವರನ್ನು ಭಯೋತ್ಪಾದಕರೆಂದು ನಾವೇಕೆ ಕರೆಯಬಾರದು?
ಬಸವಣ್ಣನವರ ತತ್ವದ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ ಶ್ರೀಗಳು ಬಸವ ತತ್ವ ಹಿನ್ನೆಲೆ ಹೊಂದಿದ ಕಾಡಸಿದ್ಧೇಶ್ವರ ಮಠ ತೊರೆದು ವೈದಿಕ ಧರ್ಮದ ಯಾವುದಾದರು ಮಠ ಸೇರಬೇಕು.
ಮಾತೆತ್ತಿದರೆ ಹಿಂದೂ ಸನಾತನ ಸಂಸ್ಕೃತಿ ಶ್ರೇಷ್ಟತೆ ಬಗ್ಗೆ ಮಾತನಾಡುವ ಕನ್ನೇರಿ ಮಠದ ಸ್ವಾಮಿಗಳು; ದಿನ ಬೆಳಗಾದರೆ ಬಸವಣ್ಣನವರನ್ನು ಮತ್ತು ಅವರ ತತ್ವದ ವಾರಸುದಾರರನ್ನು ಬೈಯುವ ಕೆಟ್ಟ ಚಾಳಿ ಕೂಡಿಸಿಕೊಂಡಿರುವುದರ ಹಿಂದೆ ರಾಜಕೀಯ ಪಕ್ಷ ಸೇರಿ ಎರಡನೆ ಯೋಗಿಯಾಗುವ ಗುರಿ ಹೊಂದಿದ್ದಾರೆ.
ಬಸವಣ್ಣನವರನ್ನು ಮತ್ತು ಅವರ ತತ್ವವನ್ನು ಅವಮಾನಿಸುವ ಯಾವುದೇ ವ್ಯಕ್ತಿಗೆ ಉಳಿಗಾಲವಿಲ್ಲ. “ವಿನಾಶ ಕಾಲೇ ವಿಪರೀತ ಬುದ್ದಿ” ಎಂಬ ಗಾದೆ ಮಾತು ಕನ್ನೇರಿ ಮಠದ ಶ್ರೀಗಳಿಗೆ ಅನ್ವಯಿಸುತ್ತದೆ. ಬಸವ ತತ್ವ ನಿಷ್ಟರು ತಾಲಿಬಾನಿಗಳಲ್ಲ; ಮಾನವತಾವಾದಿಗಳು.
ಕಣೀರಿ ಶ್ರೀಗಳು ಬಸವ ತತ್ವದಿಂದ ವಿಮುಖರಾಗಿ ಕಂದಾಚಾರ ಮೌಢ್ಯತೆಗಳ ಹತ್ತಿರ ಸುಳಿಯುತ್ತಿದ್ದಾರೆ
ಬಸವಾಯತರನ್ನು ನಿಂದಿಸುವ & ಕೆರಳುವಂತೆ ಮಾಡುವ ಇವರು ಹೆಳಿಕೆ ಯಾವುದೋ ದುರುದ್ದೆಶದಿಂದ ಇದರಲ್ಲಿದೆ ಯಂಬುದು ಬಸವಾಯತರಿಗೆ ಅಥ೯ವಾಗಿದೆ .
ಬಸವ ಧರ್ಮೀಯರು “ಬಸವ ತಾಲಿಬಾನಿಗಳು” ಅನ್ನುವ ಕನ್ನೇರಿ ಮಠಾಧೀಶರ ಹೇಳಿಕೆ ಅಕ್ಷಮ್ಯ ಅಪರಾಧ ಅಷ್ಟೇ ಅಲ್ಲ ಅದು “ಧರ್ಮ ನಿಂದನೆಗೆ” ಸಮನಾದುದು. ಇವರ ಈ ಹೇಳಿಕೆಯನ್ನು ಬಲವಾಗಿ ಖಂಡಿಸಿ ತತ್ತಕ್ಷಣ ಹಿಂಪಡೆಯುವಂತೆ ಒತ್ತಾಯಿಸುತ್ತೇನೆ. ಅವರ ಹಿನ್ನೆಲೆ ಮತ್ತು ಮಠದ ಇತಿಹಾಸ ತಿಳಿಯದೆ ಇಂತಹ ಮಾತನಾಡಿದ್ದಾರೆ. ಇತಿಹಾಸ ತಿಳಿಯದವ ಹೊಸ ಇತಿಹಾಸ ಸೃಷ್ಟಿಸಲಾರ. ಇಂತಹ ಅವಮಾನ ಬಸವಾಭಿಮಾನಿಗಳು ಮತ್ತು ಬಸವ ಧರ್ಮೀಯರು ಸಹಿಸಬಾರದು.
” ಸುಮಾರು ೫-೬ ನೂರು ವರ್ಷಗಳ ಹಿಂದೆ ಆಗಿ ಹೋದ ಕಾಡಸಿದ್ದೇಶ್ವರರು ಲಿಂಗ ಪೂಜಾನಿಷ್ಠರು, ಶ್ರೇಷ್ಠ ವಚನಕಾರರೂ ಹೌದು . ಅಲ್ಲಮಪ್ರಭುಗಳ ಶೂನ್ಯಪೀಠದ ಬಳಿವಿಡಿದು ಬಂದ ಮಹಾ ಮಹಿಮರು . ಅಂತಹ ಪೀಠದ ಸ್ವಾಮೀಜಿ ಬಸವಾದಿ ಶರಣರ ತತ್ವ ನಿಷ್ಠಾವಂತರಿಗೆ ಬಿರು ನುಡಿಗಳನ್ನಾಡುವ ಕಾರಣವಾದರೂ ಏನು ? ಅವರು ನಿಮಗೆ ಮಾಡಿದ್ದಾದರೂ ಏನು ? ನಿಮಗಿರುವ ಅಧಿಕಾರವಾದರು ಏನು ? ಮಹಾನ್ ದಾರ್ಶನಿಕ, ಮಹಾ ಮಾನವತಾವಾದಿ, ವಿಶ್ವಮಾನ್ಯ ತತ್ವಗಳನ್ನು ಬಿತ್ತಿ ಬೆಳೆದ ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯ ಹಾಗೂ ವಿಶ್ವದ ಶ್ರೇಷ್ಠ ಕಾನೂನು ತಜ್ಞ(ಪಂಡಿತ), ಮಹಾ ಮಾನವತಾವಾದಿ , ನೋವನ್ನೇ ಹಾಸಿ ಹೊದ್ದು ಬೆಳೆದು, ಕೊನೆಗೆ ನೀವು ನಮ್ಮ ಮೇಲೆ ಹೇರಲು ಹೊರಟಿರುವ ಹಿಂದೂ ಮುಖವಾಡದ ಬ್ರಾಹ್ಮಣ ಧರ್ಮವನ್ನು ತೆಜಿಸಿ ಸಮಾನತೆ ಸಾರಿದ ಬೌದ್ಧ ಧರ್ಮವನ್ನು ಸ್ವೀಕರಿಸಿದ ಭಾರತದ ಸಂವಿಧಾನ ಶಿಲ್ಪಿ , ರಾಷ್ಟ್ರ ಗುರು ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದಂತೆ ನಡೆದುಕೊಳ್ಳುತ್ತಿರುವ ಲಿಂಗಾಯತ ಧರ್ಮಿಯರಿಗೆ ಇಲ್ಲೇ ಹುಟ್ಟಿ ಬೆಳೆದು, ನಮ್ಮ ಪೀಠದ ಮೇಲೆ ಕುಳಿತು ನಮಗೆ ಧಮಕೀ ಹಾಕುವ ಅಧಿಕಾರ ನಿಮಗಿಲ್ಲ ಬುದ್ಧಿ . ಅದೃಶ್ಯ ಕಾಡಸಿದ್ದೇಶ್ವರ ಪೀಠಕ್ಕೆ ಭಕ್ತಿಯ ಶರಣು ಶರಣಾರ್ಥಿಗಳು 🌹🙏🇮🇳🙏🙏 ಆ ಪೀಠದ ಮೇಲೆ ಕುಳಿತು ತಮಗೂ ಶರಣು ಶರಣಾರ್ಥಿಗಳು 🌹🙏🙏. ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಗೆ ಭಕ್ತಿಯ ಶರಣು ಶರಣಾರ್ಥಿಗಳು 🌹🙏🙏🇮🇳🙏🙏.
ಸಾವಯವ ಹೆಸರಿನಲ್ಲಿ ದೊಡ್ಡ ವಾಣಿಜ್ಯ ನಡೆಸಿದ ಸ್ವಾಮಿ ಹಣೆಯ ಮೇಲೆ ವಿಭೂತಿಯ ಬಿಟ್ಟು ಹೆಂಗಸರಂತೆ ಕುಂಕುಮ ಇಡುವ ಇವ ಆಂತರಿಕ ಗೆದ್ದ ಲು ಹುಳ.
ಇದೇ ರೀತಿ ಇನ್ನೂ ಅನೇಕ ಬಸವತತ್ವನಿಷ್ಟ ಸ್ವಾಮಿಗಳು ಹೇಳಿಕೆ ಕೊಡಬೇಕು. ಅವರ ಉದ್ದೇಶ ವೈಧಿಕತೆಯನ್ನು ಬೆಳೆಸುವದೇ ಆಗಿದೆ ಎಂದು ಎಲ್ಲಾ ಲಿಂಗಾಯತರು ಅರಿಯಬೇಕಾದ ಅವಶ್ಯಕತೆ ಇದೆ. ಹೀಗೆ ಬಿಟ್ಟರೆ ಇವರ ಗುಂಪು ಒಬ್ಬೊಬ್ಬರಾಗಿ ಗೂಬೆ ಬುದ್ದಿ ತೋರಿಸಿ ಜನಸಾಮಾನ್ಯರಿಗೆ ಶರಣರ ಆಶಯಗಳನ್ನು ತಿಳಿಯದಂತೆ ಮಾಡುವ ತಮ್ಮ ಅಜೆಂಡಾ ಮುನ್ನೆಲೆಗೆ ತರುತ್ತಾರೆ.