‘ಅಶುಭ ಸಮಯ’ ಬದಿಗೊತ್ತಿ ಮೈಸೂರಿನಲ್ಲಿ ನೂತನ ವಕೀಲ ಕಚೇರಿ ಶುರು

ಪ್ರಸನ್ನ. ಎಸ್. ಎಂ
ಪ್ರಸನ್ನ. ಎಸ್. ಎಂ

ನಿಜಾಚರಣೆ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರ, ಸಂವಿಧಾನಕ್ಕೆ ಪುಷ್ಪಾರ್ಚನೆ

ಮೈಸೂರು

ನಗರದ ವಕೀಲ ತೋಂಟದಾರ್ಯ ಕೆ.ಎಸ್ (ಅಭಿ) ಬಸವಣ್ಣನವರ ಭಾವಚಿತ್ರಕ್ಕೆ ಮತ್ತು ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ನೂತನ ಕಛೇರಿಯನ್ನು ಇಂದು ಪ್ರಾರಂಭಿಸಿದರು.

ಅಗ್ರಹಾರದಲ್ಲಿರುವ ಅನಾಥಾಲಯ ಬಿಲ್ಡಿಂಗ್ ನಲ್ಲಿ ನಡೆದ ನಿಜಾಚರಣೆ ಕಾರ್ಯಕ್ರಮವನ್ನು ಪೂಜ್ಯ ಬಸವಯೋಗಿ ಪ್ರಭು ಸ್ವಾಮೀಜಿಗಳು ನಡೆಸಿಕೊಟ್ಟರು. ವಚನ ಪಠಣೆಯ ಮೂಲಕ ವಕೀಲ ತೋಂಟದಾರ್ಯರವರಿಗೆ ಪುಷ್ಪಾರ್ಚನೆ ಮಾಡಿ ಅವರು ವಕೀಲ ವೃತ್ತಿಯನ್ನು ಯಶಸ್ವಿಯಾಗಿ ನಡೆ‌ಸಿಕೊಂಡು ಹೋಗಲೆಂದು ಹಾರೈಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪೂಜ್ಯ ಬಸವಯೋಗಿ ಪ್ರಭುಗಳು, ಎಂ ಎಲ್ ಸಿ ವಿನಯ್, ಹಿರಿಯ ವಕೀಲ ಸುರೇಶ್ , ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಉಷಾ, ಪ್ರೊ ನಾಗೇಂದ್ರ ಮೂರ್ತಿ, ತೋಂಟದಾರ್ಯರವರು ಅವರ ತಂದೆ ತಾಯಿ ನಾಗರಾಜು ಮತ್ತು ಶಿವನಂಜಮ್ಮನವರು ಇದ್ದರು.

ಪೂಜ್ಯ ಬಸವಯೋಗಿ ಪ್ರಭುಗಳು ಮಾತಾಡಿ ಇಂದು ಹುಣ್ಣಿಮೆ (ಡಿಸೆಂಬರ್ 15) ಮತ್ತು ಮೂಲ ಕಾಲವೆಂದು ಜನ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಬಸವಾದಿ ಶರಣರ ಆಶಯದಂತೆ ಮೌಢ್ಯ ಮತ್ತು ಕಂದಾಚಾರಗಳನ್ನು ಬದಿಗೊತ್ತಿ ವಕೀಲ ತೋಂಟದಾರ್ಯವರು ತಮ್ಮ ಕಛೇರಿಯನ್ನು ಪ್ರಾರಂಭ ಮಾಡುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು.

ಲಗ್ನವೆಲ್ಲಿಯದೋ, ವಿಘ್ನವೆಲ್ಲಿಯದೋ ವಚನವನ್ನು ಹೇಳಿ ನೊಂದು ಬಂದಿರುವವರೆಗೆ ಮುಖ್ಯವಾಗಿ ಬಡವರಿಗೆ ಸಹಾಯ ಮಾಡಲಿ ಎಂದು ಹಾರೈಸಿದರು .

ಹಿರಿಯ ವಕೀಲ ಸುರೇಶ್ ಮತ್ತು ಎಂ. ಎಲ್. ಸಿ ವಿನಯ್ ರವರು ಮಾತನಾಡಿ ವಕೀಲ ತೋಂಟದಾರ್ಯ ರವರಿಗೆ ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲೆಂದು ಹಾರೈಸಿದರು.

ಸರಗೂರಿನ ಬಸವತತ್ವ ಪ್ರಚಾರಕರಾದ ಶಿವಶಂಕರಪ್ಪ ಪ್ರಧಾನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಂದವರಿಗೆ ಬೆಳಗಿನ ಉಪಹಾರವನ್ನು ಏರ್ಪಡಿಸಲಾಗಿತ್ತು. ಮೂಲತಃ ಹೆಚ್.ಡಿ. ಕೋಟೆ ತಾಲ್ಲೂಕಿನ ಕಂಚಮಳ್ಳಿ ಗ್ರಾಮದವರಾದ ತೋಂಟದಾರ್ಯರ ಬಂಧುಮಿತ್ರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತೋಂಟದಾರ್ಯರ ಜಂಗಮವಾಣಿ – 99026 37327

Share This Article
4 Comments
  • ನಿನ್ನ ವೃತ್ತಿ ಜೀವನ ಆದರ್ಶವಾಗಿರಲಿ ಉನ್ನತ ವ್ಯಾಸಂಗ ಉತ್ತಮ ಜ್ಞಾನ ನಿನ್ನನ್ನು ಖ್ಯಾತ ವಕೀಲ ಸ್ಥಾನಕ್ಕೆ ತರಲಿ ಎಂದು ಹಾರೈಸುವೆ

    • ಸದಾ ನಿಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ ನಾವಿರುತ್ತೆವೆ ಸರ್🙏🏽

Leave a Reply

Your email address will not be published. Required fields are marked *