ಜನಸಾಮಾನ್ಯರ ಆತ್ಮೋದ್ಧಾರಕ್ಕೆ ಹುಟ್ಟಿದ್ದು ವಚನ ಸಾಹಿತ್ಯ

ನ್ಯಾಮತಿ:
ನಾವು ಬಸವಣ್ಣನವರ ಭಾವಚಿತ್ರ ಪೂಜೆ ಮಾಡುವುದರಿಂದ ಅವರನ್ನು ನಾವು ದೊಡ್ಡವರನ್ನಾಗಿ ಮಾಡುವುದಿಲ್ಲ ಬದಲಾಗಿ ನಾವು ದೊಡ್ಡವರಾಗುತ್ತೇವೆ. ಅವರ ಸ್ಮರಣೆ ಮಾಡಿ, ಅವರು ಹೇಳಿದ ತತ್ವಗಳನ್ನು ಮೈಗೂಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು
ರಾಷ್ಟ್ರೀಯ ಬಸವದಳದ ಭದ್ರಾವತಿ ಬಸವ ಮಂಟಪದ ಸುಮಾ ಸುನೀಲ್ ಹೇಳಿದರು.

ತಾಲೂಕಿನ ಮದನಬಾವಿ ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಮತ್ತು ಗ್ರಾಮದ ಬಸವಾಭಿಮಾನಿಗಳಿಂದ ಈಚೆಗೆ ನಡೆದ ವಚನ ಕಾರ್ತಿಕ ಕಾರ್ಯಕ್ರಮದಲ್ಲಿ ಶರಣರ ಕುರಿತು ಅನುಭಾವ ನೀಡುತ್ತಿದ್ದರು.

ಬಸವಾದಿ ಶರಣರನ್ನು ನೆನೆಯುವುದು, ಅವರಂತೆ ನುಡಿದು ನಡೆಯುವುದೇ ನಮಗೆ ಪುಣ್ಯದ ಕೆಲಸ ಎಂದು ಅಥಣಿ ಶಿವಯೋಗಿಗಳು ಹೇಳುತ್ತಿದ್ದರು. 12ನೇ ಶತಮಾನ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಕಾಲ. ಅಂದೇ ಬಸವಣ್ಣನವರು ಹೆಣ್ಣಿಗೆ ಸ್ವಾತಂತ್ರ್ಯ ಸಿಗುವಂತೆ ಮಾಡಿದರು ಎಂದರು.

ಕಸಾಪ ಹೊನ್ನಾಳಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ. ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕನ್ನಡ ಸಾಹಿತ್ಯವು ಅಕ್ಷರವನ್ನು ಕಂಡದ್ದು 450ನೇ ಇಸ್ವಿಯಲ್ಲಿ, ಅಂದರೆ ಐದನೇ ಶತಮಾನದ ಶಾಸನಗಳಲ್ಲಿ. ಅಲ್ಲಿಂದ ಒಂಭತ್ತನೇ ಶತಮಾನದವರೆಗೂ ಕನ್ನಡ ಸಾಹಿತ್ಯ ಬೆಳೆಯಲೇ ಇಲ್ಲ. 10ನೇ ಶತಮಾನದಲ್ಲಿ ಓತಪ್ರೇತವಾಗಿ ಬೆಳೆಯಿತು.

ಅಂದು ರಚಿಸಿದ ಸಾಹಿತ್ಯ ಜೈನ ಕವಿಗಳದ್ದು, ಅತ್ಯಂತ ಕಷ್ಟಕರವಾಗಿದ್ದು ಅರ್ಥವಾಗುತ್ತಿದ್ದಿಲ್ಲ. ಜನಸಾಮಾನ್ಯರ ಆತ್ಮೋದ್ಧಾರದ ಬಗ್ಗೆ ಯಾರೂ ಚಿಂತನೆ ಮಾಡುತ್ತಿರಲಿಲ್ಲ. ಆ ಸಂದರ್ಭದಲ್ಲಿ ವಚನಗಳು ಹುಟ್ಟಿಕೊಂಡವು ಎಂದರು.

ಶರಣ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಶಿವಯೋಗಿ, ಗ್ರಾಮದ ಹಿರಿಯರಾದ ನಂಜಪ್ಪಗೌಡ, ಕಾಡಪ್ಪ, ಸಹಶಿಕ್ಷಕರಾದ ರವಿಕುಮಾರ, ಸಿದ್ದಪ್ಪ, ಉಪನ್ಯಾಸಕ ಕರಿಬಸಪ್ಪ, ಜನಪದ ಕಲಾವಿದ ಬಸವರಾಜಪ್ಪ, ಎನ್‌.ಜಿ. ದೇವರಾಜ, ಕಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಬಿ.ಜಿ. ಚೈತ್ರಾ ತಿಪ್ಪೇಸ್ವಾಮಿ, ಸಂಚಾಲಕ ದಾನಿಹಳ್ಳಿ ಪಾಲಾಕ್ಷಪ್ಪ, ವೀರಭದ್ರೇಶ್ವರ ಜನಪದ ಸ್ವಸಹಾಯ ಕಲಾತಂಡ ಮತ್ತು ಶ್ರೀರಂಗನಾಥ ಜನಪದ ಕಲಾತಂಡ, ಸುರಹೊನ್ನೆ ಬಸವೇಶ್ವರ ಮಹಿಳಾ ಭಜನಾ ಸಂಘ, ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ವಚನ ಭಜನೆ ನಡೆಸಿಕೊಟ್ಟರು. ಶರಣ-ಶರಣೆಯರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *