ಬೆಂಗಳೂರಿನ ಅತ್ತಿಬೆಲೆಯಲ್ಲಿ ಸಂಭ್ರಮದ ನಿಜಾಚರಣೆ ಗುರುಪ್ರವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ನಗರದ ಅತ್ತಿಬೆಲೆ ನಿವಾಸಿಗಳಾದ ಶರಣ ದಂಪತಿ ವರದಾನೇಶ್ವರಿ ಹಾಗೂ ಪ್ರಭುದೇವ ಮಾಸೂರು ಅವರ ನೂತನ ಮನೆಯ ಗುರುಪ್ರವೇಶವು ಬಸವತತ್ವದ ಅಡಿಯಲ್ಲಿ ಈಚೆಗೆ ನಡೆಯಿತು.

ಮೊದಲಿಗೆ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆಯನ್ನು ಮನೆಯ ಮಕ್ಕಳಾದ ಅಮೋಘ ಮಾಡಿದರು. ನಂತರ ಷಟಸ್ಥಲ ಧ್ವಜಾರೋಹಣ ಮತ್ತು ಅದರ ಅಗತ್ಯತೆಯ ಬಗ್ಗೆ ಕ್ರಿಯಾಮೂರ್ತಿಗಳಾದ ಶಿದ್ದಲಿಂಗೇಶ ನಾಶಿ ಅವರು ವಿವರಿಸಿದ ನಂತರ ಶರಣ ದಂಪತಿಗಳಾದ ಸರ್ವಮಂಗಳಾ ಹಾಗೂ ಮಡಿವಾಳಪ್ಪ ಮಾಸೂರು ಅವರು ಧ್ವಜಾರೋಹಣ ಮಾಡಿದರು. ನಂತರ ಧ್ವಜಗೀತೆಯನ್ನು ಹಾಡಲಾಯಿತು.

ಪ್ರಭುದೇವ ಮಾಸೂರು ಅವರು ಧರ್ಮ ಸಂವಿಧಾನವನ್ನು ಬೋಧಿಸಿದರು. ನಂತರದಲ್ಲಿ ನೆರೆದ ಎಲ್ಲ ಶರಣರು ವಚನ ಗ್ರಂಥವನ್ನು ತಲೆಯಮೇಲೆ ಹೊತ್ತುಕೊಂಡು, ಮಾಸೂರು ದಂಪತಿ ಬಸವ ಭಾವಚಿತ್ರವನ್ನು ಹಿಡಿದುಕೊಂಡು, ಬಸವಾದಿ ಶರಣರಿಗೆ ಜಯಘೋಷ ಹಾಕುತ್ತ ಮನೆ ಪ್ರವೇಶ ಮಾಡಲಾಯಿತು.

ನಂತರ ಮನೆಯಲ್ಲಿ ನಾಶಿ ಅವರು ಬಸವಾದಿ ಶರಣರ ಶಿವಯೋಗ ಮತ್ತು ಇಷ್ಟಲಿಂಗ ಪೂಜೆಯ ಬಗ್ಗೆ ವಿವರಿಸುತ್ತಾ, ಶಿವಯೋಗವನ್ನು ನಡೆಸಿಕೊಟ್ಟರು.

ಆಯುರ್ವೇದ ವೈದ್ಯ ದಂಪತಿಗಳಾದ ನಾಗರತ್ನ ಮತ್ತು ಅಜಯ್ ವಾಲಿಶೆಟ್ಟರ ಅವರು ಕಾರ್ಯಕ್ರಮ ನಿರ್ವಹಿಸಿದರು. ವಿಹಾನ ಮಾಸೂರ ಇಂಗ್ಲಿಷನಲ್ಲಿ ವಚನ ಹೇಳಿದರು. ಮಕ್ಕಳಾದ ಸಾರ್ಥಕ, ಅಮೋಘ, ಆದಿತಿ, ವಿಶ್ವನಾಥ ವಚನ ಹೇಳಿ ವಿಶ್ಲೇಷಣೆ ಮಾಡಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತು.

ಹಾವೇರಿಯ ಬಸವ ಬಳಗದ ಗಂಗಣ್ಣ ಮಾಸೂರ, ಅಶೋಕ ಶೇಬಣ್ಣವರ, ಸುಜಾತಾ ಶೇಬಣ್ಣವರ, ಪ್ರಕಾಶ ದಾನಮ್ಮ ವಾಲಿ ಉಪಸ್ಥಿತರಿದ್ದರು.

ವರದಾನೇಶ್ವರಿ ಅವರು ಶರಣು ಸಮರ್ಪಣೆ ಮಾಡಿದರು. ಬಂಧು ಮಿತ್ರರು ಪ್ರಸಾದ ಮಾಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
3 Comments
  • ಈ ನಿಮ್ಮ ಕಾರ್ಯಗಳು ಬಸವಾದಿ ಶರಣರಿಗೆ ಹಾಗೂ ಅವರ ತ್ಯಾಗಕ್ಕೆ ಕೃತಜ್ಞತೆ ಹಾಗೂ ನೀವು ಮಾಡಿದ ಕಾರ್ಯವು ನಮ್ಮೆಲ್ಲರಿಗೆ ಸ್ಪೂರ್ತಿದಾಯಕ ಅಪ್ಪ ಬಸವಣ್ಣನವರು ತಮ್ಮೆಲ್ಲ ಇಷ್ಟಾರ್ಥ ಸಿದ್ದಿಗಳನ್ನು ನೆರವೇರಿಸಲೆಂದು ಸೃಷ್ಟಿಕರ್ತ ಲಿಂಗ ದೇವರಲ್ಲಿ ಬೇಡಿಕೊಳ್ಳುತ್ತೇನೆ

  • ಈ ನಿಮ್ಮ ಕಾರ್ಯಗಳು ಬಸವಾದಿ ಶರಣರಿಗೆ ಹಾಗೂ ಅವರ ತ್ಯಾಗಕ್ಕೆ ಕೃತಜ್ಞತೆ ಹಾಗೂ ನೀವು ಮಾಡಿದ ಕಾರ್ಯವು ನಮ್ಮೆಲ್ಲರಿಗೆ ಸ್ಪೂರ್ತಿದಾಯಕ ಅಪ್ಪ ಬಸವಣ್ಣನವರು ತಮ್ಮೆಲ್ಲ ಇಷ್ಟಾರ್ಥ ಸಿದ್ದಿಗಳನ್ನು ನೆರವೇರಿಸಲೆಂದು ಸೃಷ್ಟಿಕರ್ತ ಲಿಂಗ ದೇವರಲ್ಲಿ ಬೇಡಿಕೊಳ್ಳುತ್ತೇನೆ ಶರಣು ಶರಣಾರ್ಥಿ

    • ಬಸವ ಧ್ವಜಾ ಹಾರುತ್ತಿದೆ ಜಗದಗಲ. ಬಸವ ಜ್ಯೋತಿ ಬೆಳಗುತ್ತಿದೆ ಜಗದಲ್ಲೆಲ್ಲಾ

Leave a Reply

Your email address will not be published. Required fields are marked *