ಜಹೀರಾಬಾದ (ತೆಲಂಗಾಣ)
ನಗರದಲ್ಲಿ ಶರಣ ಮಾಸದ ಅಂಗವಾಗಿ, ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತಾಜಿ ಅವರ, ‘ಬಸವಾದಿ ಶರಣರ ಜೀವನ ದರ್ಶನ ಪ್ರವಚನ’ ಕಾರ್ಯಕ್ರಮ ಆರಂಭಗೊಂಡಿತು.
ಬುಧವಾರ ಲಿಂಗಾಯತ ಸಮಾಜದ ಅಧ್ಯಕ್ಷ ರಾಜಶೇಖರ ಶೇಟ್ಕಾರ್ ಸೇರಿದಂತೆ ಸಮಾಜದ ಮುಖಂಡರು ಬಸವೇಶ್ವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಪ್ರವಚನ ಉದ್ಘಾಟಿಸಿದರು.

ವೇದಿಕೆ ಮೇಲೆ ಪೂಜ್ಯ ಬಸವೇಶ್ವರಿ ಮಾತಾಜಿ, ಬಸವರಾಜ ಮಠಪತಿ, ಸುಭಾಷ ರೇಕೋಗಿ, ಸಂಗಪ್ಪ ಉಳ್ಳಾಗಡ್ಡಿ, ಅಶೋಕಕುಮಾರ ಬಶೆಟ್ಟಿ ಮತ್ತಿತರರು ಇದ್ದರು.
ಜುಲೈ 30ರಿಂದ ಆಗಸ್ಟ್ 23ರವರೆಗೆ ಲಿಂಗಾಯತ ಸಮಾಜದ ವತಿಯಿಂದ ಪ್ರವಚನ ನಡೆಯಲಿದೆ. ಲಿಂಗಾಯತ ಸಮಾಜ, ಅಣ್ಣನ ಬಳಗ, ಹಾಗೂ ಅಕ್ಕನ ಬಳಗದ ನೂರಾರು ಶರಣ ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿದಿನ ಸಂಜೆ 7ರಿಂದ 8.30ರವರೆಗೆ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಪ್ರವಚನ ನಡೆಯುವದು.