ಇದು ರಾಜಕೀಯ ಸಮಾವೇಶ, ಧಾರ್ಮಿಕ ಸಮಾವೇಶವಲ್ಲ
ವಿಜಯಪುರ
ಬಬಲೇಶ್ವರದಲ್ಲಿ ನಾಳೆ ನಡೆಯಲಿರುವ ಹಿಂದೂ ಸಮಾವೇಶವನ್ನು ಮಠಾಧೀಶರು ಬಹಿಷ್ಕರಿಸಬೇಕೆಂದು ಜಿಲ್ಲಾ ಮಠಾಧೀಶರ ಒಕ್ಕೂಟದ ಪ್ರಮುಖರು ಮನವಿ ಮಾಡಿದ್ದಾರೆ.
ಇಂದು ನಗರದಲ್ಲಿ ಮಮದಾಪುರ ಮುರುಘರಾಜೇಂದ್ರ ಸ್ವಾಮೀಜಿ, ಮಸಬಿನಾಳ ಸಿದ್ದರಾಮ ಶಿವಯೋಗಿಗಳು ಮತ್ತು ಗುಣದಾಳ ಡಾ. ವಿವೇಕಾನಂದ ದೇವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಬಸವ ಸಂಸ್ಕೃತಿ ಅಭಿಯಾನದ ವಿರುದ್ಧ ಹಾಗೂ ಲಿಂಗಾಯತ ಸ್ವಾಮೀಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕನ್ನೇರಿ ಸ್ವಾಮಿಯ ಬೆಂಬಲಕ್ಕೆ ನಿಂತು ಬಬಲೇಶ್ವರದಲ್ಲಿ ಸಮಾವೇಶ ಮಾಡುವ ಮಾಡಲು ಹರಕತ್ತಾದರೂ ಏನಿತ್ತು ಎಂದು ಸಮಾವೇಶ ಆಯೋಜಿಸಿದರನ್ನು ಮುರುಘೇಂದ್ರ ಸ್ವಾಮೀಜಿ ಪ್ರಶ್ನಿಸಿದರು.
ಸಮಾವೇಶ ಮಾಡುವವರ ಉದ್ಧೇಶದಲ್ಲಿ ರಾಜಕಾರಣವೇ ಅಡಗಿದೆ. ಯಾವ ಧಾರ್ಮಿಕ ಕಾರಣವೂ ಕಂಡು ಬರುತ್ತಿಲ್ಲ. ಕೇವಲ ರಾಜಕೀಯ ಕಾರಣಕ್ಕೆ ನಡೆಯುತ್ತಿರುವ ಈ ಸಮಾವೇಶವನ್ನು ರದ್ದು ಪಡಿಸಬೇಕು. ಈ ಸಮಾವೇಶಕ್ಕೆ ಕೆಲ ಸಾಧುಗಳು ಮಾತ್ರ ಬರಬಹುದು. ನಿಜವಾದ ಮಠಾಧೀಶರಾದವರು ಯಾರೂ ಈ ಸಮಾವೇಶಕ್ಕೆ ಹೋಗುತ್ತಿಲ್ಲ ಮತ್ತು ಹೋಗಬಾರದು ಎಂದು ಮುರುಘೇಂದ್ರ ಸ್ವಾಮೀಜಿಗಳು ಆಗ್ರಹಿಸಿದರು.
ಕನ್ನೇರಿ ಶ್ರೀಗಳು ದ್ವೇಷ, ಸೇಡು ಮುಂದುವರಿಸುತ್ತಿದ್ದಾರೆ. ಸ್ವಾಮಿಗಳಾದವರಿಗೆ ಇದು ಸಲ್ಲದು. ಬಬಲೇಶ್ವರದಲ್ಲಿ ಹಿಂದೂ ಸಮಾವೇಶದ ಮೂಲಕ ಈ ದ್ವೇಷವನ್ನು ಅವರು ಮುಂದುವರಿಸುತ್ತಿದ್ದಾರೆ. ಹಿಂದೆ ಶಿವಯೋಗ ಮಂದಿರ, ಜಂಗಮರಿಗೂ ಹೀಗೆಯೇ ಕೆಟ್ಟದಾಗಿ ಬೈದಿದ್ದರು ಎಂದರು.
ಮಸಬಿನಾಳದ ಸಿದ್ಧರಾಮ ಶಿವಯೋಗಿಗಳು ಮಾತನಾಡಿ, ಬಸವಣ್ಣನವರ ಹೆಸರನ್ನು ಬಳಸಿಕೊಂಡು ಸಮಾವೇಶ ಮಾಡಲು ಹೊರಟಿರುವುದು ಬೇಸರದ ಸಂಗತಿ. ಹಿಂದೆ ಇರದಿದ್ದು ಈಗ ಬಸವಣ್ಣನವರ ಹೆಸರಿನಲ್ಲಿ ಹಿಂದೂ ಸಮಾವೇಶ ಯಾಕೆ? ಬಸವಣ್ಣನವರ ಹೆಸರಿನಲ್ಲಿ ಸಮಾವೇಶ ಮಾಡಲು ಇವರಿಗೇನು ಯೋಗ್ಯತೆಯಿದೆ ಎಂದು ಪ್ರಶ್ನಿಸಿದರು.
ಕನ್ನೇರಿ ಸ್ವಾಮಿ ಸಿದ್ದೇಶ್ವರ ಶ್ರೀಗಳು ನೀಡಿದ ಸಂಸ್ಕಾರಕ್ಕೆ ಧಕ್ಕೆ ತಂದು ಸಮಾಜದಲ್ಲಿ ಸ್ವಾಮೀಜಿಗಳಿಗೆ ಬೆಲೆ ಇಲ್ಲದಂತೆ ಮಾಡಲು ಹೊರಟ್ಟಿದ್ದಾರೆ. ಇಷ್ಟಕ್ಕೆ ಈ ಸಮಾವೇಶವನ್ನು ಕೈಬಿಟ್ಟು ಒಳ್ಳೆಯ ಮಾರ್ಗದಲ್ಲಿ ಸಾಗಿರಿ ಇಲ್ಲವಾದಲ್ಲಿ ನಾಡಿನ ಲಿಂಗಾಯತ ಮಠಾಧೀಶರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುಣದಾಳದ ಡಾ. ವಿವೇಕಾನಂದ ದೇವರು ಮಾತನಾಡಿ, ದೊಡ್ಡ ಮಠಾಧೀಶರು ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಿದ್ದರೆ ನಮ್ಮಂಥಹ ಕಿರಿ ಮಠಾಧೀಶರು ಅವರಿಂದ ಏನನ್ನು ಕಲಿಯಬೇಕು? ಅವಾಚ್ಯ ಪದಬಳಕೆ ಸ್ವಾಮೀಜಿಗಳಿಗೆ ಶೋಭೆ ತರುವುದಿಲ್ಲ. ಇಂತವರನ್ನು ಬೆಂಬಲಿಸಿದರೆ ಸ್ವಾಮೀಜಿಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ.
ಬಸವಾದಿ ಶರಣರ ‘ಹಿಂದೂ’ ಸಮಾವೇಶ, ಇದರಲ್ಲಿ ಹಿಂದೂ ಪದ ಸೇರಿಸಿದ್ದು ಯಾಕೆ ಎಂಬುದೇ ಪ್ರಶ್ನೆ. ಬೇಲಿನೇ ಎದ್ದು ಹೊಲ ಮೇದಂತೆ ಆಗಿದೆ.
ವಿಜಯಪುರ ಶಾಸಕ ಬಸನಗೌಡ ಯತ್ನಾಳ ಹಿಂದೂ ಸಮಾವೇಶವನ್ನು ಬಹಿಷ್ಕರಿಸುವುದಾಗಿ ಆಗಲೇ ಘೋಷಿಸಿದ್ದಾರೆ.

ಈ ನಿಮ್ಮ ಅಭಿಮಾನ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಠಾಧೀಶರಿಗೆ ತಮ್ಮ ಬೆಂಬಲವಿದೆ ಶರಣು ಶರಣಾರ್ಥಿ
ಸೂಲೆಬೆಲೆ ಮತ್ತು ಕನ್ನೇರಿ ಶ್ರೀಗಳು ಹಾಗೂ ಸಂಘ ಪರಿವಾರದವರಿಗೆ ಇಷ್ಟು ವರ್ಷಗಳವರೆಗೆ ಶರಣರು ,ಶರಣರ ಸಂಸ್ಕ್ರತಿ ಜ್ಙಾಪಕ ಬರದೆ ಈಗ ಏಕಾಏಕಿ ಶರಣರ ಸಂಸ್ಕ್ರತಿಯ ಮೇಲೆ ಪ್ರೀತಿ ಉಕ್ಕಿ ಬಂದಿರುವುದು ಯಾಕೆ ?? ಶರಣರು ಹಿಂದೂಗಳು ಅಂತ ಈಗ ಅರ್ಥವಾಯಿತೆ ಇವರಿಗೆ. ಶರಣರ ಮೇಲೆ ದಬ್ಬಾಳಿಕೆ ನಡೆಸಿದಾಗ ಶರಣರು ನಮ್ಮವರೇ ಎಂದು ಆಗ ಅರ್ಥವಾಗಿರಲಿಲ್ಲವೇ ?
ಇವರ ರಾಜಕೀಯದ ಬೂಟಾಟಿಕೆ ಬಗ್ಗೆ ಲಿಂಗಾಯತರು ಎಚ್ಚೆತ್ತು ಕೊಳ್ಳಬೇಕು..ಕರ್ನಾಟಕದಲ್ಲಿ ಲಿಂಗಾಯತ ಧರ್ಮದ ಪರ ಎದೆ ಕೊಟ್ಟು ನಿಂತ ಎಂ.ಬಿ.ಪಾಟೀಲರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ವೀರಶೈವ ಲಿಂಗಾಯತ ಧರ್ಮ ಎಂಬ ನಿರ್ಣಯ ತೆಗೆದುಕೊಂಡ ನಿರ್ಧಾರ ಇವರಿಗೆ ನುಂಗಲಾರದ ತುತ್ತಾಗಿ ಶಾಮನೂರು ಶಿವಶಂಕರಪ್ಪನವರು ಮತ್ತು ಈಶ್ವರ ಖಂಡ್ರೆ ವಿರುದ್ಧ ಇವರ ನಡೆಯಾಗಿದೆ. ಒಂದು ವೇಳೆ ಇವರಿಗೆ ಲಿಂಗಾಯತರು ಸಫೋರ್ಟ್ ಮಾಡಿದರೆ ಲಿಂಗಾಯತರು, ಲಿಂಗಾಯತ ರಾಜಕೀಯ ಮುಖಂಡರು ತಮ್ಮ ತಲೆ ಮೇಲೆ ತಾವೇ ಚಪ್ಪಲಿ ಎಳೆದುಕೊಂಡಂತೆ. ಇವರಿಗೆ ಸಪೋರ್ಟ್ ಮಾಡುವ ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಬುದ್ದಿ ಬರಬೇಕಿದೆ
ಸಾಷ್ಟಾಂಗ ಪ್ರಣಾಮಗಳು ಬುದ್ಧಿ . ನಿಮ್ಮ ಮಾತುಗಳು ಸದಸದ್ ವಿವೇಕದ ಮಾತುಗಳು. ಸಂದರ್ಭಕ್ಕ, ಸಮಯೋಚಿತ ಮಾತನಾಡಿದ್ದೀರಿ. ಶರಣು ಶರಣಾರ್ಥಿಗಳು.
ಇದು ರಾಜಕೀಯ ಸಮಾವೇಶ, ಹಿಂದು ಹೆಸರಿನ ಲೇಪನ ಅಳವಡಿಸಿಕೊಂಡು, ಎಲ್ಲಾ ಹಿಂದೂಗಳು ಸೇರಿ ಅಲ್ಫಸಂಖ್ಯೆತರ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿ ಹಿಂದೂಗಳ ಜನಸಂಖ್ಯೆ ಹೆಚ್ಚು ಹೆಚ್ಚು ಮಾಡುವ ಪ್ರಯತ್ನ ವಿದ್ದರೆ, ಎಲ್ಲಾ ಹಿಂದೂಗಳು ಭಾಗವಹಿಸಿ ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಹೆಜ್ಜೆ ಇಡಬೇಕು. ಇದು ಸಮಾಜ ಇಬ್ಬಾಗ ಮಾಡುವ ಸಮಾವೇಶ ವಿದ್ದರೆ, ಇದಕ್ಕೆ ಬೆಂಬಲ ಕೊಡುವುದು ಸಲ್ಲದು