ಹಜರತ್ ಸೈಯದ್ ಬಾದಷಾ ಹಾಗೂ ಶ್ರೀ ಶಿವಪ್ಪಜ್ಜನವರ ಉರುಸು ಪ್ರಯುಕ್ತ ಪಟ್ಟಣದಲ್ಲಿ “ಶರಣರ ನಡಿಗೆ ಭಾವೈಕ್ಯತೆಯ ಕಡೆಗೆ” ಕಾರ್ಯಕ್ರಮ ಬುಧವಾರ ನಡೆಯಿತು.
ಕಳ್ಳಿಪೇಟೆಯ ಹಿರೇಮಸೂತಿಯಿಂದ ಗಂಧವನ್ನು ಹೊತ್ತು ಅಜ್ಜನವರ ಮನೆಯ ಮಾರ್ಗವಾಗಿ ಸಾಗಿ, ಬಾಲನ್ ಬಂಡೆ ಕೋಟೆ ಮೇಲಿರುವ ಹಜರತ್ ಸೈಯದ್ ಬಾದಷಾ ದರ್ಗಾದವರೆಗೆ ಮೆರವಣಿಗೆ ನಡೆಯಿತು.
ನಂತರ ಸಂತ ಸೂಫಿ ಸೈಯದ್ ಬಾದಷಾ ದರ್ಗಾಕ್ಕೆ ಮತ್ತು ಪಕ್ಕದಲ್ಲಿದ್ದ ಶರಣ ಶಿವಯ್ಯಪ್ಪಜ್ಜನ ಗದ್ದುಗೆಗೆ ಹಿಂದು ಮುಸ್ಲಿಂ ಭಕ್ತರು ಭಾವೈಕ್ಯತೆಯಿಂದ ಪೂಜೆ ಸಲ್ಲಿಸಿದರು.
ಹಜರತ್ ಸೈಯದ್ ಸಾದಾತ ದರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾವೈಕ್ಯತೆ ನಡಿಗೆ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯುತ್ತದೆ.
“ನಾಡಿನಾದ್ಯಂತ ಸೌಹಾರ್ದ ಯಾತ್ರೆಯನ್ನು ಬಯಸುವ ಮತಾತೀತ ಮನಸ್ಸುಗಳಿವೆ. ಸ್ನೇಹ, ಪ್ರೇಮ, ಬಯಸುವವರು ನಮ್ಮೊಂದಿಗೆ ಕೈ ಜೋಡಿಸುತ್ತಾರೆ ಎಂಬ ವಿಶ್ವಾಸ ನಮಗಿದೆ,” ಎಂದು ನಡಿಗೆಯಲ್ಲಿ ಭಾಗವಹಿಸಿದ್ದ ನಿಡಿಗೋಳದ ಸೂಫಿ ಶರಣ ಹಜರತ್ ಸೈಯದ್ ಹುಸೇನ್ ಸಾಹೇಬ್ ಹೇಳಿದರು.
ದರ್ಗಾದ ಉರುಸು ಮತ್ತು ಮಹಾಪ್ರಸಾದ ದಾಸೋಹ ಗುರುವಾರ ನಡೆಯಿತು.
ದರ್ಗಾದ ಪೀಠಾಧಿಪತಿಗಳಾದ ಹಜರತ್ ಸೈಯದ್ ಮುಬಾರಕ್ ಬಾದಷಾ ಇವರ ನೇತೃತ್ವದಲ್ಲಿ, ಬಾದಾಮಿ ನವಗ್ರಹ ಹಿರೇಮಠದ ಪೂಜ್ಯ ಶಿವಪೂಜಾ ಶಿವಾಚಾರ್ಯಸ್ವಾಮಿ, ನವಲಗುಂದ ಗವಿಮಠದ ಪೂಜ್ಯ ಬಸವಲಿಂಗಸ್ವಾಮಿ, ವಿಜಯಪುರದ ಹಜರತ್ ಸೈಯದ್ ಮೊಹಮ್ಮದ್ ಗೇಸುದರಾಜ್ ಹುಸೇನಿ,
ಇಳಕಲ್ಲದ ಹಜರತ್ ಸೈಯದ್ ಷಾ ಮುರ್ತುಜಾ ಹುಸೇನಿ ಅಲ್ ಖಾದ್ರಿ ಅಲ್ ಮಾರೂಫ್ ಫೈಸಲ್ ಪಾಷಾ,
ನರಗುಂದ ಬೈರನಹಟ್ಟಿ ದೊರೆಸ್ವಾಮಿ ಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು, ಕೊಂಡಗೂಳಿಯ ಪ್ರಶಾಂತ ದೇವರು, ಸಿಂಧನೂರು ಚಿಂತಾಪಲ್ಲಿಯ ಗುರು ಡಾಕ್ಟರ್ ಗಫೂರ್ ತಾತನವರು, ಸಿಂಧನೂರು ಹಜರತ್ ಸೈಯದ್ ಷಾ ರಫಿಯುದ್ದಿನ ಖಾದ್ರಿ, ನೀಡಿಗೋಳ ಸೂಫಿ ಶರಣ ಹಜರತ್ ಸೈಯದ್ ಹುಸೇನಸಾಹೇಬ,
ನರಗುಂದ ಮೆಬುಸುಬಾನಿ ದರ್ಗಾದ ಹಜರತ್ ಬಾಬುಸಾಬ ಶರಣರು, ಅಸೂಟಿಯ ರೇವಣಸಿದ್ದ ಸ್ವಾಮಿಗಳು, ಬಾದಾಮಿಯ ಮುದುಕಯ್ಯ ಹಿರೇಮಠ ಸ್ವಾಮಿಗಳು, ಶರಣಯ್ಯ ಹಿರೇಮಠ ಸ್ವಾಮಿಗಳು ಹಾಗೂ ದರ್ಗಾದ ಮುತವಲ್ಲಿ ಜನಾಬ ಮೆಹಬೂಬಸಾಹೇಬ ಮುಲ್ಲಾ ಮತ್ತೀತರರು ಭಾವೈಕ್ಯತಾ ನಡಿಗೆಯಲ್ಲಿ ಹೆಜ್ಜೆ ಹಾಕಿದರು.
ಭಾವೈಕ್ಯತೆ ಚಿರಾಯು ಆಗಲಿ. ಶರಣು ಶರಣಾಥಿ೯ಗಳು ಸರ್ 🙏🙏