ಬದಾಮಿ
ಬಾಗಲಕೋಟೆ ಜಿಲ್ಲಾ ಲಿಂಗಾಯತ ಶಿವಸಿಂಪಿ ಸಮಾವೇಶ-2025, ಕುಲಗುರು ಶ್ರೀ ಶಿವದಾಸಿಮಯ್ಯ ಅವರ ಜಯಂತೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಮಾರ್ಚ್ 9, 2025 ರವಿವಾರ ಬೆಳಿಗ್ಗೆ 10 ಗಂಟೆಗೆ ಬದಾಮಿ ಪಟ್ಟಣದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ, ಬಸವ ಮಂಟಪದಲ್ಲಿ ನಡೆಯಲಿದೆ.
ಅಂದು ಮುಂಜಾನೆ 8 ಗಂಟೆಗೆ ಕುಲಗುರು ಶ್ರೀ ಶಿವದಾಸಿಮ್ಮಯ್ಯನವರ ಅಲಂಕೃತ ಭಾವಚಿತ್ರ ಹಾಗೂ ಕುಂಭ ಮೆರವಣಿಗೆಯು ಸಕಲ ವಾದ್ಯ ಮೇಳದೊಂದಿಗೆ ಶ್ರೀ ಶಿವಾನಂದ ಮಠದಿಂದ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವ ಮಂಟಪ ತಲುಪುವುದು.
11ಗಂಟೆಗೆ ಸಭಾ ಕಾರ್ಯಕ್ರಮ ಜರುಗುವವು. ದಾವಣಗೆರೆ ಬಸವತತ್ವ ಚಿಂತಕ, ನಿವೃತ್ತ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಜವಳಿ ಅವರಿಂದ ಶ್ರೀ ಶಿವದಾಸಿಮಯ್ಯ ಚಾರಿತ್ರಿಕ ಅವಲೋಕನ ಉಪನ್ಯಾಸ, ಅಶೋಕ ದೊಮ್ಮಲೂರು ಅವರು ಶರಣರ ಸಂಶೋಧನೆ ಹಾಗೂ ತಾಡೋಲೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಮಾರಂಭದ ದಿವ್ಯಸಾನಿಧ್ಯವನ್ನು ಹಾವೇರಿ, ಹುಕ್ಕೇರಿ ಮಠದ ಪೂಜ್ಯ ಸದಾಶಿವ ಮಹಾಸ್ವಾಮಿಗಳು, ಸಾನಿಧ್ಯವನ್ನು ಬಾದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಬದಾಮಿ ಶಾಸಕ ಭೀಮಶೇನ ಚಿಮ್ಮನಕಟ್ಟಿ ಮಾಡಲಿದ್ದು, ಅಧ್ಯಕ್ಷತೆಯನ್ನು ಶಿವಸಿಂಪಿ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾದ ನಾಗಪ್ಪ ಶಿವಣಗಿ ವಹಿಸಲಿದ್ದಾರೆ.
ಮುಖ್ಯಅತಿಥಿ, ಅತಿಥಿ, ವಿಶೇಷ ಆಮಂತ್ರಿತರು ಉಪಸ್ಥಿತರಿರಲಿದ್ದಾರೆ. ಸಮಾಜದ ಸರ್ವರಿಗೂ ಸ್ವಾಗತ ಕೋರಲಾಗಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IxxC2m7AXyW84KPf73t5iL


🙏🙏🙏🙏🙏🙏