ಬಾಗಲಕೋಟೆ ಗ್ರಾಮಗಳಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ನಿರ್ಣಯ

ಬಾಗಲಕೋಟೆ

ಸೆಪ್ಟೆಂಬರ್ 10ರಂದು ಬಾಗಲಕೋಟೆ ನಗರಕ್ಕೆ ಬರುವ ಬಸವ ಸಂಸ್ಕೃತಿ ಅಭಿಯಾನವನ್ನು ಸಡಗರದಿಂದ ಬರಮಾಡಿಕೊಂಡು, ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಗುರುವಾರ ಚರಂತೇಶ್ವರ ಮಠದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ದರಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ, ಬಸವಕೇಂದ್ರ ಮತ್ತಿತರ ಬಸವಪರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾವಹಿಸಿದ್ದರು.

ಜಿಲ್ಲೆಯ ವಿರಕ್ತಮಠದ ಸ್ವಾಮೀಜಿಗಳನ್ನು ಭೇಟಿಯಾಗಿ ಅವರನ್ನು ಅಭಿಯಾನದಲ್ಲಿ ತೊಡಗಿಸಲು, ಎಲ್ಲಾ ತಾಲ್ಲೂಕುಗಳ ಗ್ರಾಮಗಳನ್ನು ಸಂಪರ್ಕಿಸಿ ಜನರಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು, ಅಭಿಯಾನಕ್ಕೆ ಬೇಕಾದ ಸಂಪನ್ಮೂಲವನ್ನು ಜಿಲ್ಲಾ ಮತ್ತು ತಾಲೂಕು ಘಟಕಗಳಿಂದ ಸಂಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

180
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...

ಇದೇ ಸಂದರ್ಭದಲ್ಲಿ ಬಾಗಲಕೋಟೆ, ಜಮಖಂಡಿ, ಹುನಗುಂದ, ಗುಳೇದಗುಡ್ಡ ತಾಲ್ಲೂಕ ಸಂಘಟನೆಗಳವರು ದಾಸೋಹ ನೀಡುವ ವಾಗ್ದಾನ ಮಾಡಿದರು. ಭಾಗವಹಿಸಿದ ಮಠಾಧೀಶರು ಸಹ ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಗೆ ಬೇಕಾದ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.

ಸಭೆಯ ಸಾನಿಧ್ಯವನ್ನು ಬಾಗಲಕೋಟೆ ಚರಂತಿಮಠದ ಪೂಜ್ಯ ಪ್ರಭುಸ್ವಾಮಿಗಳು ವಹಿಸಿದ್ದರು. ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮಿಗಳು, ಶಿರೂರ ಮಹಾಂತ ತೀರ್ಥದ ಪೂಜ್ಯ ಬಸಲಿಂಗ ಸ್ವಾಮೀಜಿ, ಕಮತಗಿ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ, ಜಮಖಂಡಿ ಓಲೇಮಠದ ಪೂಜ್ಯ ಆನಂದ ದೇವರು ಸಮ್ಮುಖ ವಹಿಸಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಶರಣ ಅಶೋಕ ಬರಗುಂಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ಜಿಲ್ಲಾ ಕಾರ್ಯದರ್ಶಿ ರವಿ ಯಡಹಳ್ಳಿ, ಜಿಲ್ಲಾ ಖಜಾಂಚಿ ಶ್ರೀಶೈಲ ಕರಿಶಂಕರಿ, ಜಿಲ್ಲಾ ಮಹಿಳಾ ಘಟಕದ ಜ್ಯೋತಿ ಕುಮಟಗಿ, ವಿದ್ಯಾ ಹೂಗಾರ, ಹುನಗುಂದ ತಾಲ್ಲೂಕು ಅಧ್ಯಕ್ಷ ಶಂಕ್ರಪ್ಪ ಕಡಿವಾಲ, ಮಹಾಂತೇಶ ಪರುತಿ, ಅಶೋಕ ಬಾವಿಕಟ್ಟಿ, ಎಂ.ಎಸ್. ಪಾಟೀಲ, ಜಮಖಂಡಿ ತಾಲ್ಲೂಕು ಅಧ್ಯಕ್ಷ ಸಿ.ಎಸ್. ಬಾಂಗಿ, ಅಣ್ಣಪ್ಪ ಜಗದೇವ, ಗುಳೇದಗುಡ್ಡ ತಾಲ್ಲೂಕು ಉಪಾಧ್ಯಕ್ಷ ಪುತ್ರಪ್ಪ ಬೀಳಗಿ, ಕಾರ್ಯದರ್ಶಿ ಶ್ರೀಕಾಂತ ಗಡೇದ, ಸಂಜಯ ಬರಗುಂಡಿ, ಚಂದ್ರಶೇಖರ ತೆಗ್ಗಿ, ಬಸವರಾಜ ಇಲಾಳಶೆಟ್ಟರ ಸೇರಿದಂತೆ ಜಿಲ್ಲೆಯ ಬಸವಪರ ಸಂಘಟನೆಗಳ 50ಕ್ಕೂ ಹೆಚ್ಚು ಶರಣ ಶರಣೆಯರು ಸಭೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *