ಬಾಗಲಕೋಟೆ ತೊರೆದು ಮಹಾರಾಷ್ಟ್ರಕ್ಕೆ ಮರಳಿದ ಕನ್ನೇರಿ ಸ್ವಾಮಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಾಗಲಕೋಟೆ

ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಶನಿವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆ ತೊರೆದಿದ್ದಾರೆ.

ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಶಾಖಾ ಮಠದಿಂದ ಬೆಳಿಗ್ಗೆ ಪೂಜೆ ‌ಮುಗಿಸಿಕೊಂಡು ಕನ್ನೇರಿಗೆ ಹೊರಟರು ಎಂದು ತಿಳಿದು ಬಂದಿದೆ.

ಶುಕ್ರವಾರ ಮಠಕ್ಕೆ ಬಂದಿದ್ದ ಸ್ವಾಮಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಒಂದು ಗಂಟೆಯಲ್ಲಿ ಹೊರಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಆದೇಶ ಹೊರಡಿಸಿದ್ದರು.

ವಿಜಯಪುರಕ್ಕೆ ಬಾಗಲಕೋಟೆ ಜಿಲ್ಲೆ ಹೊಂದಿಕೊಂಡಿರುವುದರಿಂದ ಇಲ್ಲಿಯೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಪರಿಗಣಿಸಿದ್ದರು.

ಆದೇಶದ ವಿಷಯ ತಿಳಿಸಲು ಹೋಗಿದ್ದ ಬೀಳಗಿ ತಹಶೀಲ್ದಾರ್ ವಿನೋದ ಅವರಿಗೆ, ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ. ಜೈಲಿಗೆ ಕಳುಹಿಸುವುದಾದರೆ ಕಳುಹಿಸಿ ಎಂದಿದ್ದರು.

ಆದರೆ, ಶನಿವಾರ ಬೆಳಗ್ಗೆ ಸ್ವಾಮೀಜಿಗಳು ಮಠವನ್ನು ತೊರೆದು ಮಹಾರಾಷ್ಟ್ರದ ಕಡೆಗೆ ತೆರಳಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಈ ಮಧ್ಯೆ, ಹಲವು ಬಿಜೆಪಿ ನಾಯಕರು ಸ್ವಾಮೀಜಿಗಳಿಗೆ ಬೆಂಬಲ ಸೂಚಿಸಿದ್ದರು. ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ ಹಾಗೂ ಶಾಸಕ ಸಿದ್ದು ಸವದಿ ಅವರು ಮಠಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

ಇದಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಜಗದೀಶ ಶೆಟ್ಟರ್ ಅವರು ದೂರವಾಣಿ ಮೂಲಕ ಸ್ವಾಮೀಜಿಗಳೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿತ್ತು.

“ನಾನು ಕೊಲೆ ಅಥವಾ ಸುಲಿಗೆ ಮಾಡಿಲ್ಲ. ನನ್ನದೇ ಮಠದಲ್ಲಿ ವಾಸ್ತವ್ಯ ಹೂಡಲು ಸರ್ಕಾರ ಬಿಡುತ್ತಿಲ್ಲ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣವಿದೆ. ಸಂವಿಧಾನದ ಹೆಸರಿನಲ್ಲಿ ಆಡಳಿತ ನಡೆಸುವವರೇ ಅದರ ಕತ್ತು ಹಿಸುಕುತ್ತಿದ್ದಾರೆ,” ಎಂದು ಕನ್ನೇರಿ ಸ್ವಾಮಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
4 Comments
  • ಹೊಲಸು ಬೈಗಳನ್ನು ಬಯ್ಯಲು ಬಿಟ್ಟರೆ ಪ್ರಜಾಪ್ರಭುತ್ವವಾ ? ಸ್ವಾಮಿ

  • ನೀವು ಬೇರೆಯವರ ಕತ್ತು ಹಿಸುಕಿದರೆ.ಸರ್ಕಾರ ಅದನ್ನು ನೋಡುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ ಸ್ವಾಮೀಜಿ. ಇದು ಪ್ರಜಾಪ್ರಭುತ್ವ, ನಿಮಗಿರುವಷ್ಟು ಎಲ್ಲಾ ತರಹದ ಸ್ವಾತಂತ್ರ್ಯ.ಎಲ್ಲರಿಗೂ ಇರುತ್ತದೆ. ಎಲ್ಲರ ಸ್ವಾತಂತ್ರ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ನೀವು ಉಪಯೋಗಿಸಿದ ಭಾಷೆಯನ್ನೇ ಎಲ್ಲರೂ ಒಬ್ಬರ.ಮೇಲೊಬ್ಬರು ಆಡುಭಾಷೆ ಅಂತ ಉಪಯೋಗಿಸಲು ಮತ್ತು ಅದರ ಕೋಪ ತಾಪದಲ್ಲಿ.ಕೆಲವರಾದರೂ ಮಾತನ್ನು ಕೃತಿಗೆ ಇಳಿಸಿದರೆ ಎಂತಹ ಅನಾಹುತ ಆಗಬಹುದು ಅನ್ನುವುದನ್ನು ಚಿಂತಿಸಿ. ನಿಮ್ಮ ಬಳಿ ಬರುವ ರಾಜಕಾರಣಿಗಳನ್ನು ನಂಬಿ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ. ಬೇರೆಯವರಿಗೆ ಗೌರವ ಕೊಟ್ಟು ನೀವೂ ಗೌರವ ಪಡೆಯಿರಿ. ಇಂತಹ ನಾಟಕಗಳನ್ನು ಬಿಡಿ. ಯಾರ್ಯಾರೋ ಎಲ್ಲಿಯೂ ಮಾತನಾಡಿದ್ದನ್ನು ಸುಳ್ಳುಹೇಳಿ ಭಕ್ತರ ದಿಕ್ಕು ತಪ್ಪಿಸಬೇಡಿ. ಇಲ್ಲಪ್ಪಾ ಮಾತನಾಡುವ ಭರದಲ್ಲಿ ಬಾಯ್ತಪ್ಪು ಬಂದಿದೆ ಕ್ಷಮಿಸಿ ಅಥವಾ ಮರೆತುಬಿಡಿ ಎಂದು ಒಂದು ಮಾತು ಹೇಳಿದ್ದರೆ ಎಲ್ಲವೂ ಮುಗಿದು ಬಿಡುತ್ತಿತ್ತಲ್ಲ. ಅಶ್ಲೀಲ ಮತ್ತು ಅಸಂವಿಧಾನಿಕ ಮಾತನ್ನು ಆಡಿರುವ ನೀವು, ನಿಮ್ಮ ರಾಜಕೀಯ ಭಕ್ತರು ಅದನ್ನೇ ಸಮರ್ಥಿಸಿಕೊಳ್ಳುವಾಗ ಸರ್ಕಾರಕ್ಕೆ ಬೇರೆ ಏನು ದಾರಿಯಿದೆ? ಜೊತೆಗೆ ಪರಿಸ್ಥಿತಿ.ಇಷ್ಟೊಂದು ಸೂಕ್ಷ್ಮವಿರುವಾಗ ಪುನಃ ಈ ಹಿಂದೆ ನೀಡಿದ್ದ ಹೇಳಿಕೆ “ಬಸವ ತಾಲಿಬಾನಿಗಳು” ಅನ್ನುವುದನ್ನು ನಿಮ್ಮ ಟಿವಿ ಸಂದರ್ಶನಗಳಲ್ಲಿ ಉಪಯೋಗಿಸುತ್ತಿದ್ದೀರ. ಇದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆಯೇ ಹೊರತು, ತಿಳಿಗೊಳಿಸುವುದಿಲ್ಲ. ನಿಮ್ಮ ಮಾತುಗಳನ್ನು ನಾಗರಿಕ ಸಮಾಜದಲ್ಲಿ ಬದುಕುತ್ತಿರುವವರು ಯಾರೂ ಒಪ್ಪಲು ಸಾಧ್ಯವಿಲ್ಲ. ಸುಳ್ಳು ಮತ್ತು ಅಪಪ್ರಚಾರ ನಿಲ್ಲಿಸಿ, ಮಾಡಿರುವ ತಪ್ಪನ್ನು ಒಪ್ಪಿಕೊಂಡು ಇನ್ನುಮುಂದೆ ಅಂತಹ ಮಾತುಗಳನ್ನು ಆಡುವುದಿಲ್ಲ ಎಂದು ಹೇಳಿ ಸಮಸ್ಯೆಯನ್ನು ಬಗೆಹರಿಸಿ. ಈ ಸಮಸ್ಯೆಯನ್ನು ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಪರಿಹರಿಸಲು ಸಾಧ್ಯವಿಲ್ಲ. ಇಲ್ಲವಾದಲ್ಲಿ ಸರ್ಕಾರ ಸಂವಿಧಾನದಡಿಯಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮುಂದುವರಿಸಬೇಕಾಗುತ್ತದೆ. ನೀವು ಎಷ್ಟೇ ದೊಡ್ಡ ಮಠಾಧಿಪತಿಗಳಾಗಿದ್ದರೂ.ಸಂವಿಧಾನಕ್ಕಿಂತ ದೊಡ್ಡವರಲ್ಲ ಅನ್ನುವುದನ್ನು ಮರೆಯಬೇಡಿ. ಶರಣು ಶರಣಾರ್ಥಿ 🙏

  • ಈ ಕವಿತೊಟ್ಟು ತಾನು ನಡೆಯುವ ಎಲ್ಲಾ ನುಡಿಗಳು ಸಾತ್ವಿಕವಾಗಿ ಸಂವಿಧಾನಿಕವಾಗಿ ಇರಬೇಕಾಗಿತ್ತು ತಾನು ಹಾಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ಸರ್ಕಾರಕ್ಕೆ ಸಾಂವಿಧಾನಿಕವಾಗಿ ನಡೆದುಕೊಳ್ಳುತ್ತಲೆಯನ್ನು ಸಂದೇಶವನ್ನು ಕೊಡಲು ಹೊರಟಿದ್ದಾನೆ ಈ ನಾಯಿ ಸ್ವಾಮಿ ಇವರ ಹಿಂದೆ ಎಲ್ಲ ಸಂವಿಧಾನವನ್ನು ವಿರೋಧಿಸುವ ಶಕ್ತಿಗಳೇ ಇವನಿಗೆ ಬೆಂಬಲವಾಗಿ ನಿಂತಿವೆ

Leave a Reply

Your email address will not be published. Required fields are marked *