ರಬಕವಿ ಬನಹಟ್ಟಿ:
‘ಪುಣ್ಯದಿಂದಲೇ ಜೀವನವು ಪ್ರಾಪ್ತಿಯಾಗುತ್ತದೆ. ಇಂಥ ಜೀವನವನ್ನು ಭಗವಂತ ಮೆಚ್ಚುವಂತೆ ಬದುಕಬೇಕು. ಬಸವಾದಿ ಶರಣರ ವಚನದಂತೆ ಬದುಕಿದರೆ ಅದುವೇ ಸಾರ್ಥಕ ಜೀವನ’ ಎಂದು ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.
ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಮಂಗಳವಾರ ಉದ‍್ಘಾಟಿಸಿ ಮಾತನಾಡಿದರು.
‘ನಾವು ಕಳೆದ ಬದುಕಿಗೆ ಬಹುಮಾನವೇ ಮರಣ. ನಾವು ಜೀವಿಸಿದಂತೆ ನಮಗೆ ಮರಣ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.
ಹುಬ್ಬಳ್ಳಿಯ ಶಾಂತಾಶ್ರಮದ ರಾಮಕೃಷ್ಣ ದೇವರು ಮಾತನಾಡಿ, ‘ಶರಣರ ವಚನಗಳು ಒಡೆದ ಮನಸ್ಸುಗಳನ್ನು ಮತ್ತು ಸಮಾಜಗಳನ್ನು ಒಂದೂಗೂಡಿಸುತ್ತವೆ’ ಎಂದರು.
ಬುದ್ದಪ್ಪ ಕುಂದಗೋಳ, ಮುರಿಗೆಪ್ಪ ಮಿರ್ಜಿ, ರಾಮಣ್ಣ ಕುಲಗೋಡ, ಶಿವಾನಂದ ದಾಶ್ಯಾಳ, ಮಹಾದೇವ ಕವಿಶೆಟ್ಟಿ, ಮಾರುತಿ ಗಂಥಡೆ, ವಜ್ರಕಾಂತ ಕಮತಗಿ ಮತ್ತಿತರರು ಇದ್ದರು.