ಬೆಂಗಳೂರು
ಶಿವಯೋಗ (ಇಷ್ಟಲಿಂಗ) ಕುರಿತು ಕಾರ್ಯಗಾರವನ್ನು ಫೆಬ್ರವರಿ 2, 2025ರ ಒಂದು ದಿನ, ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ, ಜಯನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಾಗಾರವನ್ನು ಪೂಜ್ಯ ಶ್ರೀ ಶಿವರುದ್ರ ಸ್ವಾಮಿಗಳು ಬೇಲಿಮಠ ಇವರು ಉದ್ಘಾಟಿಸಲಿದ್ದಾರೆ.
ಗೋಷ್ಠಿ 1ರಲ್ಲಿ ಅನುಭಾವಿ ಪ್ರೊ. ಟಿ.ಆರ್. ಚಂದ್ರಶೇಖರ್ ಅವರು ‘ಶಿವಯೋಗ ಸಾಮಾಜಿಕ ಆಯಾಮಗಳು’ ಕುರಿತು ಮಾತನಾಡುವರು.
ಗೋಷ್ಠಿ 2ರಲ್ಲಿ ಪೂಜ್ಯ ಬಸವ ಯೋಗಿ ಪ್ರಭುಸ್ವಾಮಿಗಳು ‘ಶಿವಯೋಗ (ಇಷ್ಟಲಿಂಗ) – ಭಿನ್ನ ಧಾರ್ಮಿಕ ಪರಿಕಲ್ಪನೆ’ ಕುರಿತು ಮಾತನಾಡಲಿರುವರು.
ಗೋಷ್ಠಿ 3ರಲ್ಲಿ ಅನುಭಾವಿ ಪಿ. ರುದ್ರಪ್ಪ ಅವರು ‘ಶಿವಯೋಗ (ಇಷ್ಟಲಿಂಗ) ವೈಶಿಷ್ಟತೆ’ ಕುರಿತು ಮಾತನಾಡುವರು.
ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾಪ್ರಧಾನಕಾರ್ಯದರ್ಶಿ ಡಾ. ಎಸ್. ಎಂ. ಜಾಮದಾರ್ ಅವರು ಸಮಾರೋಪ ಭಾಷಣ ಮಾಡುತ್ತಾರೆ.
ಕಾರ್ಯಗಾರದಲ್ಲಿ ಉಪಹಾರ, ಪ್ರಸಾದ ವ್ಯವಸ್ಥೆ ಇರುತ್ತದೆ. ಭಾಗವಹಿಸುವವರು ಕ್ಯೂ.ಆರ್. ಕೋಡ್ ಸ್ಕ್ಯಾನ್ ಮಾಡಿ ಗೂಗಲ್ ಫಾರಂ ತುಂಬಿ ಹೆಸರು ನೊಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಬೆಂಗಳೂರು ಜಿಲ್ಲಾ ಅಧ್ಯಕ್ಷ ವೀರಭದ್ರಯ್ಯ ಹಾಗೂ ಪದಾಧಿಕಾರಿಗಳು ಸರ್ವರನ್ನು ಸ್ವಾಗತಿಸಿದ್ದಾರೆ.
