ಬೆಂಗಳೂರು
ಬೆಂಗಳೂರಿನಲ್ಲಿ ಹಲವಾರು ಬಸವ ಸಂಘಟನೆಗಳಿವೆ, ಅವುಗಳೆಲ್ಲಾ ಒಂದು ಒಕ್ಕೊಟ ರಚಿಸಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ರವಿವಾರ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಘಟಕದ ಆಶ್ರಯದಲ್ಲಿ ಸುತ್ತೂರೇಶ್ವರ ಸಭಾಮಂಟಪದಲ್ಲಿ ನಡೆದ ಒಂದು ದಿನದ ಶಿವಯೋಗ ಕಾರ್ಯಗಾರದ ಸಮಾರೋಪದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಕ್ಕೊಟದಿಂದ ಯಾವ ಸಂಘಟನೆಯ ಸ್ವಾಯತತ್ತೆಗೂ ತೊಂದರೆಯಾಗಬಾರದು, ಎಲ್ಲರೂ ತಾವು ಆಗಲೇ ಮಾಡುತ್ತಿರುವ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು, ಜೊತೆಗೆ ಒಕ್ಕೊಟದ ವತಿಯಿಂದ ಕೆಲವು ಸಾಮಾನ್ಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ನಗರದ ಹಲವಾರು ಸಂಘಟನೆಗಳ ಮುಖಂಡರು ಹಾಜರಿದ್ದರು.
ಬೆಳಗ್ಗೆ ಬೇಲಿಮಠದ ಪೂಜ್ಯ ಶಿವರುದ್ರ ಮಹಾಸ್ವಾಮಿಗಳು ಕಾರ್ಯಗಾರವನ್ನು ಉದ್ಘಾಟಿಸಿದರು.

ಕಲ್ಯಾಣದ ಅನುಭವ ಮಂಟಪದ ಮುವತ್ತಾರು ವರ್ಷಗಳಲ್ಲಿ 770 ಅಮರ ಗಣಂಗಳು ಬಸವಣ್ಣನವರ ನೇತೃತ್ವದಲ್ಲಿ ತಯಾರಾದರು. ಅದರಲ್ಲಿ ಕಸಗೂಡಿಸುವ ಸತ್ಯಕ್ಕನಂತವರು ಮಹಾಲಿಂಗದ ಎತ್ತರಕ್ಕೆ ಏರಿದರು, ಆದರೆ ಈಗ ಇಲ್ಲಿಯವರೆಗೆ ಒಬ್ಬ ಸತ್ಯಕ್ಜ, ಒಬ್ಬ ಮಸಣಮ್ಮ, ಒಬ್ಬ ಧೂಳಯ್ಯ ಅಂತವರನ್ನು ತಯಾರು ಮಾಡಲು ನಮಗೆ ಸಾಧ್ಯವಾಗಿಲ್ಲ. ಇದಕ್ಕೆ ನಾವು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಕಾರ್ಯಗಾರದ ಮೊದಲನೇ ಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಟಿ. ಆರ್. ಚಂದ್ರಶೇಖರ ಮಾತನಾಡಿ, ಇಷ್ಟಲಿಂಗದ ಅವಿಷ್ಕಾರ ಒಂದು ಧರ್ಮ ಜಗತ್ತಿನ ಎಲ್ಲ ಜೀವಿಗಳಿಗೆ, ಜಾತಿ ಕುಲ ಲಿಂಗ ಭೇದ ಅಳಿಸಿ ಹಾಕಿ ಎಲ್ಲರಿಗೂ ಸಿಗುವಂತೆ ಮುಕ್ತ ಅವಕಾಶ ಮಾಡಿಕೊಟ್ಟಿತು ಎಂದರು.

ಕಾರ್ಯಗಾರದ ಎರಡನೇ ಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಪೂಜ್ಯ ಬಸವಯೋಗಿ ಸ್ವಾಮಿಗಳು ಶಿವಯೋಗ ಒಂದು ವಿಭಿನ್ನ ಆರಾಧನ ಮಾರ್ಗವಾಗಿದ್ದು, ಅದು ಶರಣರು ಕೊಟ್ಟ ಒಂದು ವಿಶೇಷ ಕೊಡುಗೆ ಎಂದು ತಿಳಿಸಿದರು.

ಮೂರನೇ ಗೋಷ್ಠಿಯಲ್ಲಿ ವಿಷಯ ಹಂಚಿಕೊಂಡ ಪಿ. ರುದ್ರಪ್ಪನವರು, ಧಾರ್ಮಿಕ ಇತಿಹಾಸದಲ್ಲಿ ಶರಣರು ಕೊಡಮಾಡಿದ ಇಷ್ಟಲಿಂಗ ಯೋಗ ಮಾರ್ಗ ಅತ್ಯಂತ ಶ್ರೇಷ್ಠವಾದುದು. ಬಸವ ಪೂರ್ವದಲ್ಲಿ ಇಂದ್ರಿಯಗಳು ಮಾನವನ ದಾರಿತಪ್ಪಿಸುವ ಸಾಧನೆಗಳೆಂದು ಪರಿಗಣಿಸಿ, ಅವುಗಳನ್ನು ಹತ್ತಿಕ್ಕಿ ಸಾಧನ ಮಾಡುವ ಮಾರ್ಗ ಪ್ರಚಲಿತವಿತ್ತು. ಆದರೆ ಶರಣರು, ಇಷ್ಟಲಿಂಗದ ಮೂಲಕ ಇಂದ್ರಿಯಗಳನ್ನೇ ಶುದ್ಧಗೊಳಿಸಿ, ಪರಿಯಾಣ (ಉಣ್ಣುವ ತಟ್ಟೆ ) ಮಾಡಿಕೊಂಡು ಶಿವನೊಡನೆ ಸಹಭೋಜನ ಮಾಡಿದರು. ಇಷ್ಟಲಿಂಗ ಯೋಗ ಬದುಕಿನ ದುರಿತಗಳನ್ನು ದೂರ ಮಾಡುವ ಮಾರ್ಗ, ಅದು ಪ್ರಕೃತಿಯ ಅಂತಿಮ ಸತ್ಯವಾದ ಸಾವನ್ನು ಸಹಿತ ಮೀರುವ ಶಕ್ತಿಯನ್ನ ಸಾಧಕನಿಗೆ ನೀಡುತ್ತದೆ, ಹಾಗಾಗಿ ಆ ಹಂತ ಮುಟ್ಟಿದ ಸರ್ವ ಜಾತಿ ವರ್ಣ ವರ್ಗದ ಜನರು ಆ ಹಂತಕ್ಕೆ ಏರಿದರು. ಇದು ಬಸವಣ್ಣನವರ ಮಹಾ ಮಾರ್ಗವಾಗಿತ್ತು ಎಂದು ತಿಳಿಸಿ, ಲಿಂಗಾಯತ ಧರ್ಮದ ಅಡಿಗಲ್ಲು ಎಂದರೆ ಇಷ್ಟಲಿಂಗ ಎಂದು ತಿಳಿಸಿದರು.

ಸುಮಾರು ೨೫೦ ಜನ ಭಾಗವಹಿಸಿದ ಕಾರ್ಯಾಗಾರ ಯಶಸ್ವೀಯಾಗಿ ನಡೆಯಿತು ಎಂದು ಮಹಾಸಭಾ ಬೆಂಗಳೂರು ಘಟಕದ ಅಧ್ಯಕ್ಷ ಪ್ರೊಫೆಸ್ಸರ್ ವೀರಭದ್ರಯ್ಯ ಹೇಳಿದರು. ಕಾರ್ಯಕ್ರಮದ ನಿರೂಪಣೆ ಖಜಾಂಚಿ ರೇಣುಕಯ್ಯ ಮಾಡಿದರು. ನಿಜಗುಣ ಮೂರ್ತಿ ಸ್ವಾಗತ ಕೋರಿದರು. ನಿಜಗುಣ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಿರೂಪಣೆ ಖಜಾಂಚಿ ರೇಣುಕಯ್ಯ ಮಾಡಿದರು. ನಿಜಗುಣ ಮೂರ್ತಿ ಸ್ವಾಗತ ಕೋರಿದರು.
ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಅನೇಕಾನೇಕ ಬಸವ ಪರ ಸಂಘಟನೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಆಯಾ ಸಂಘಟನೆಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಈಗಿರುವಂತೆಯೇ ಎಂದಿನಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟು ಜಾಲಿಮ ಅಡಿ ಎಲ್ಲ ಸಂಘಟನೆಗಳ ಒಕ್ಕೂಟವನ್ನು ರಚಿಸಿ ಈ ಮಹಾನಗರದಲ್ಲಿ ಬಸವಧರ್ಮ ಮಾನ್ಯತೆ ಬಗ್ಗೆ ಒಂದಾಗಿ ಸಂಘಟಿತವಾಗಿ ನಿಲ್ಲಬೇಕಾದ ತುರ್ತು ಅಗತ್ಯವಿದೆ. ಮಾನ್ಯ ಜಮಾದಾರ್ ಸರ್ ರವರ ಮಾರ್ಗದರ್ಶನದ ಅಡಿಯಲ್ಲಿ ಎಲ್ಲರೂ ಒಗ್ಗೂಡಿ ಮುಂದಿನ ಹೋರಾಟ ಹಾಗೂ ತತ್ವ ಪ್ರಸಾರದ ಬಗ್ಗೆ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಬಹುದಾಗಿದೆ. ಈ ಸಂಬಂಧ ನಗರದ ಎಲ್ಲ ಬಸವ ಪರ ಸಂಘಟನೆಗಳು ಜಾಲಿಮದೊಂದಿಗೆ ಸಹಕರಿಸಿದರೆ ಸಂಘಟನೆ ಬಲಪಡಿಸುವುದು ಕಷ್ಟವೇನಲ್ಲ. ಜಾಮದಾರ್ ಸರ್ ರವರ ಆಶಯಗಳನ್ನು ಕಾರ್ಯಾನುಷ್ಠಾನಗೊಳಿಸುವ ಸಂಬಂಧ ನಗರದಲ್ಲಿರುವ ಎಲ್ಲ ಬಸವ ಪರ ಸಂಘಟನೆಗಳು ಅವರವರ ವಿಳಾಸ ಮತ್ತು ದೂರವಾಣಿ ಸಂಪರ್ಕ ಸಂಖ್ಯೆಗಳನ್ನು ಬೆಂಗಳೂರು ಜಿಲ್ಲಾ ಘಟಕದ ಸಕ್ರಿಯ ಸದಸ್ಯರಾದ ಶ್ರೀ ಕ್ರುಪಾಶಂಕರ್ ದೂರವಾಣಿ ಸಂಖ್ಯೆ: 9663205083 ಇಲ್ಲಿಗೆ ಕ್ರುಪೆ ಮಾಡಿ ಕಳುಹಿಸುವಿರಾ? ಪ್ಲೀಸ್
ವಿವಿಧ ಪ್ರದೇಶ ಗಳಲ್ಲಿ ಇರುವ ಬಸವ ಪರ ಸಂಘಟನೆಗಳ ವಿವರಗಳನ್ನು ಕೃಡಿಕರಿಸಿ, ಎಲ್ಲಾ ಸಂಘಟನೆ ಗಳ ಒಕ್ಕೂಟ ರಚಿಸುವ ಮುನ್ನ, ಒಂದು ಪೂರ್ವಭಾವಿ ಸಭೆ ಕರೆದು,, ಒಕ್ಕೂಟ ರಚನೆಯ ಉದ್ದೇಶಗಳನ್ನು ವಿವರಿಸಿ, ಚರ್ಚಿಸಿ ಮುಂದುವರೆದು ಒಕ್ಕೂಟ ರಚನೆಗೆ ಮುಂದುವರೆಯಬೇಕು.
ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಿ ಶರಣರ ಸಂದೇಶಗಳನ್ನು ಜನಮಾನಸದೊಳಗೆ ನೆಲೆ ನಿಲ್ಲುವಂತೆ ಮಾಡಬೇಕು.
ಶರಣು ಶರಣಾರ್ಥಿಗಳು 🙏