ಭಾನುವಾರ ಜೆಎಲ್ಎಂ ಇಳಕಲ್ ಘಟಕದ ಉದ್ಘಾಟನೆ, ‘ಮಿಥ್ಯ ಸತ್ಯ’ ಲೋಕಾರ್ಪಣೆ

ಇಳಕಲ್ಲ

‘ಜಾಗತಿಕ ಲಿಂಗಾಯತ ಮಹಾಸಭಾದ ಇಳಕಲ್ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ‘ವಚನ ದರ್ಶನ – ಮಿಥ್ಯ ವಿರುದ್ಧ ಸತ್ಯ’ ಪುಸ್ತಕದ ಲೋಕಾರ್ಪಣೆ ಸಮಾರಂಭ ಇದೇ 20, ಭಾನುವಾರದಂದು ಇಲ್ಲಿಯ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ನಡೆಯಲಿದೆ’ ಎಂದು ಇಳಕಲ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಬೆಳವಣಿಕಿ ತಿಳಿಸಿದ್ದಾರೆ.

ಸಮಾರಂಭದ ಸಾನ್ನಿಧ್ಯವನ್ನು ವಿಜಯ ಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಶ್ರೀಗಳು ಹಾಗೂ ಶಿರೂರ ಮಹಾಂತ ತೀರ್ಥದ ಪೂಜ್ಯ ಬಸವಲಿಂಗ ಶ್ರೀಗಳು ವಹಿಸುವರು. ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಶಿವಾನಂದ ಜಾಮದಾರ ನೂತನ ತಾಲ್ಲೂಕು ಘಟಕವನ್ನು ಉದ್ಘಾಟಿಸುವರು. ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬರಗುಂಡಿ ಅಧ್ಯಕ್ಷತೆ ವಹಿಸುವರು.

ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ವಚನ ದರ್ಶನ – ಮಿಥ್ಯ ವಿರುದ್ಧ ಸತ್ಯ’ ಪುಸ್ತಕದ ಸಂಪಾದಕ ಟಿ.ಆರ್. ಚಂದ್ರಶೇಖರ ಪುಸ್ತಕದ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಯಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ, ರಾಜ್ಯ ಘಟಕದ ಕಾರ್ಯದರ್ಶಿ ಮಹಾಂತೇಶ ಪಾಟೀಲ, ಹಿರಿಯರಾದ ಜಿ.ಪಿ. ಪಾಟೀಲ, ಎಂ.ವಿ. ಪಾಟೀಲ, ನಾಗಪ್ಪ ಕನ್ನೂರ, ಗುರಣ್ಣ ಮರಟದ, ಮಹೇಶಪ್ಪ ಸಜ್ಜನ ಆಗಮಿಸುವರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ, ಹುನಗುಂದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್. ಕಡಿವಾಲ, ಹುನಗುಂದ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ ಭಾವಿಕಟ್ಟಿ, ಗುಳೆದಗುಡ್ಡ ತಾಲ್ಲೂಕು ಘಟಕದ ಅಧ್ಯಕ್ಷ ರಾಚಪ್ಪ ಕೆರೂರ, ಜಮಖಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಬಾಂಗಿ ಪಾಲ್ಗೊಳ್ಳುವರು ಎಂದು ಇಳಕಲ್ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರ ತೋಟದ, ಖಜಾಂಚಿ ಮೋಹನ ಅಕ್ಕಿ ಮತ್ತಿತರರು ತಿಳಿಸಿದ್ದಾರೆ.

ಮಹಿಳಾ ಘಟಕದ ಪದಾಧಿಕಾರಿಗಳು :
ಸವಿತಾ ಶಿವರುದ್ರಪ್ಪ ಗೊಂಗಡಶೆಟ್ಟಿ (ಅಧ್ಯಕ್ಷರು), ಮಂಜುಳಾ ತೋಟಗೇರ (ಪ್ರಧಾನ ಕಾರ್ಯದರ್ಶಿ) ಭಾಗ್ಯಶ್ರೀ ಬೆಳವಣಿಕಿ (ಖಜಾಂಚಿ), ಸುನಿತಾ ಅಕ್ಕಿ, ಭಾಗ್ಯಶ್ರೀ ಬೆಳವಣಕಿ, ಗೀತಾ ಅರವಿಂದ ಕೊಡಗಲಿ, ಡಾ. ಶುಭಾರಾಣಿ ಕಡಪಟ್ಟಿ, ಸ್ಮಿತಾ ಮುತ್ತೂರು (ಉಪಾಧ್ಯಕ್ಷರು), ಅನಿತಾ ಅಕ್ಕಿ, ವಿದ್ಯಾ ಸಜ್ಜನ, ವಿಶಾಲಾ ಶೆಟ್ಟರ್ (ಸಹಕಾರ್ಯದರ್ಶಿಗಳು) ಸವಿತಾ ಶಿವಬಲ್, ಡಾ. ಶೋಭಾ ನಾಡಗೌಡ್ರ, ವೀರಮ್ಮ ಕುಂಬಾರ, ವಿಜಯಲಕ್ಷ್ಮೀ ಸಂಗಮೇಶ ರೇವಡಿ, ಪ್ರತಿಭಾ ಅಲೆಗಾವಿ, ಮಹೇಶ್ವರಿ ಮಂಗಳೂರ, ಸುಜಾತಾ ಮಹಾಂತೇಶ ಅಂಗಡಿ, ರೇಷ್ಮಾ ಗದ್ದಿ, ರಾಜೇಶ್ವರಿ ಪ್ರಭು ಹರಿಹರ, ನಿರ್ಮಲಾ ಕರಡಿ, ಲಕ್ಷ್ಮೀ ಕುಟಗಮರಿ, ಸಾವಿತ್ರಿ ಬೆಲ್ಲದ, ಸವಿತಾ ಹಿರೇಮಠ (ನಿರ್ದೇಶಕರು).

ಇಳಕಲ್ ತಾಲ್ಲೂಕು ಘಟಕದ ಪದಾಧಿಕಾರಿಗಳು :
ಮಂಜುನಾಥ ಬೆಳವಣಕಿ (ಅಧ್ಯಕ್ಷರು), ಶಂಕರ ತೋಟದ (ಪ್ರಧಾನ ಕಾರ್ಯದರ್ಶಿ), ಮೋಹನ ಅಕ್ಕಿ (ಖಜಾಂಚಿ), ಸಂಗಣ್ಣ ಗದ್ದಿ, ಬಸವರಾಜ ಅ. ನಾಡಗೌಡ, ಮಹಾಬಳೇಶ ಮರಟದ, ಮಲ್ಲಿಕಾರ್ಜುನ ಅಗ್ನಿ, ಡಾ.ಮಹಾಂತೇಶ ಅಕ್ಕಿ, ಸಂಗಣ್ಣ ಕಂಪ್ಲಿ (ಉಪಾಧ್ಯಕ್ಷರು), ಮಲ್ಲಯ್ಯ ಗಣಾಚಾರಿ, ಮಹಾಂತೇಶ ಹೊಳಿ, ಯಮನೂರ ಹಂಚಿನಾಳ, ನಾಗರಾಜ ಕಳ್ಳಿಗುಡ್ಡ (ಸಹ ಕಾರ್ಯದರ್ಶಿಗಳು), ಗಂಗಾಧರ ಶೆಟ್ಟರ್, ಮಹಾಂತೇಶ ಪಾಟೀಲ (ಜಿಎಂಇ), ರಾಜಶೇಖರ ಕಲ್ಮಠ, ಟಿ.ಎಚ್. ಹೂಗಾರ, ಚಂದ್ರಶೇಖರ ಸಜ್ಜನ, ಶರಣಪ್ಪ ಆಮದಿಹಾಳ, ಮಹಾಂತೇಶ ಸಮಾಳದ, ಪ್ರೊ.ಹೇಮಂತ ಭೂತನಾಳ, ಶಿವಪ್ಪ ಜೀರಗಿ. ವಿಜಯ ವೈ. ತುಂಬದ, ಲಿಂಗರಾಜ ಕುಂಬಾರ, ವೀರೇಶ ಮಡಿವಾಳರ, ದೊಡ್ಡಪ್ಪ ಹಡಪದ, ಈರಪ್ಪ ರುಮಾಲದ, ಪ್ರಸನ್ನಕುಮಾರ ಬಾಗಲಕೋಟೆ, ಎಂ.ಆರ್. ಪಾಟೀಲ, ಕೂಡ್ಲೆಪ್ಪ ಕೂಡ್ಲೆಪ್ಪನವರ, ಮಹಾಂತೇಶ ಪಾಟೀಲ, ಬಿ.ಆರ್. ಮಾದರ, ಅಶೋಕ ಬೇವಿನಮಟ್ಟಿ (ನಿರ್ದೇಶಕರು).

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *