ಗುಂಡ್ಲುಪೇಟೆಯಲ್ಲಿ ಮೊದಲ ಬಾರಿಗೆ ‘ಒಂದು ಗ್ರಾಮದಲ್ಲಿ ಒಂದು ಮಾಸ’ ಕಾರ್ಯಕ್ರಮ

ಬಿ. ಚನ್ನಪ್ಪ
ಬಿ. ಚನ್ನಪ್ಪ

ಗುಂಡ್ಲುಪೇಟೆ

ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಥಮ ಬಾರಿಗೆ ಮೂಡಗೂರಿನ ಉದ್ಧಾನೇಶ್ವರ ವಿರಕ್ತ ಮಠದ ಶ್ರೀ ಇಮ್ಮಡಿ ಉಧ್ದಾನಸ್ವಾಮೀಜಿಯವರು ‘ಒಂದು ಗ್ರಾಮದಲ್ಲಿ ಒಂದು ಮಾಸ’ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ತಾಲೂಕಿನ ಬರಟಹಳ್ಳಿ ಗ್ರಾಮದಲ್ಲಿ ಒಂದು ತಿಂಗಳ ಕಾಲ ಪ್ರವಚನ ನಡೆಸಿ ಗ್ರಾಮದ ಎಲ್ಲರಿಗೂ ಅಷ್ಟಾವರಣ, ಪಂಚಚಾರ, ಷಟ್ಸಸ್ಥಲ ಮತ್ತು ಇಷ್ಟಲಿಂಗಯೋಗದ ಸಿಧ್ದಿ ಮತ್ತು ವಚನಗಳ ಮಹತ್ವವನ್ನ ತಿಳಿಸಿದರು.

ನೂರಾರು ಭಕ್ತರಿಗೆ ಇಷ್ಟಲಿಂಗ ಧಾರಣೆ ಮಾಡಿ ಇಷ್ಟಲಿಂಗ ಪೂಜೆ, ಇಷ್ಟಲಿಂಗಯೋಗವನ್ನು ಮಾಡಿಸಿದರು. ಪ್ರತಿದಿನ ವಚನ ಪ್ರಾರ್ಥನೆ, ವಚನ ಭಜನೆ, ವಚನ ನಿರ್ವಚನ ಕಾರ್ಯಕ್ರಮಗಳೂ ನಡೆಯಿತು.

ಬರಟಹಳ್ಳಿ ಗ್ರಾಮದವರು ಸಂಭ್ರಮ ಸಡಗರಿಂದ ಶ್ರೀಗಳನ್ನು ಬರಮಾಡಿಕೊಂಡು ಊರನ್ನು ಸಿಂಗರಿಸಿ ಕಾರ್ಯಕ್ರಮ ನಡೆಸಿದರು. ಅಕ್ಕ ಪಕ್ಕದ ಗ್ರಾಮದವರು ವಿಶೇಷವಾಗಿ ವಿದ್ಯಾರ್ಥಿಗಳು, ಯುವಕರು, ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
1 Comment
  • ವರದಿಗೆ ಅನಂತ ಶರಣು..ಮೂಡಗೂರಿನ ಶ್ರೀಗಳು ಬಸವಾದಿಶರಣರ ವಿಚಾರಗಳನ್ನ ಅಧ್ಯಯನದ ನಂತರ ಬಸವಪ್ರಣೀತ ಲಿಂಗಾಯತ ಧರ್ಮದ ಕಾರ್ಯಗಳನ್ನ ಜನಸಾಮಾನ್ಯರಲ್ಲಿಗೆ ಕೊಂಡೊಯ್ಯುತ್ತಿರುವುದು ಸಂತಸತಂದಿದೆ.

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು