ನಿಜಗುಣಾನಂದ ಶ್ರೀ, ಮಲ್ಲಿಕಾರ್ಜುನ ಶ್ರೀಗಳಿಗೆ ‘ಬಸವ ಭಾನು’ ಪ್ರಶಸ್ತಿ

ಬಸವ ಮೀಡಿಯಾ
ಬಸವ ಮೀಡಿಯಾ

ಹಾರಕೂಡ (ಬಸವಕಲ್ಯಾಣ ತಾ.)

ಧಾರವಾಡದ ಮುರುಘಾಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಬೈಲೂರಿನ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ಹಾರಕೂಡಿನ ಶ್ರೀ ಸದ್ಗುರು ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ನೀಡುವ “ಬಸವ ಭಾನು” ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾರಕೂಡದ ಪರಮಪೂಜ್ಯ ಶ್ರೀ ಸದ್ಗುರು ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವ ಜನವರಿ 4 ರಿಂದ 6ರವರೆಗೆ ವೈಭವ ಪೂರ್ಣವಾಗಿ ನಡೆಯುತ್ತದೆ.

ಜನವರಿ 4 ಶನಿವಾರ ಸಂಜೆ 6 ಗಂಟೆಗೆ ರಥೋತ್ಸವ ಜರುಗಲಿದೆ. 7 ಗಂಟೆಗೆ ನಡೆಯುವ ಶಿವಾನುಭವ ಚಿಂತನ ಸಮಾರಂಭದಲ್ಲಿ ಪೂಜ್ಯ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪೂಜ್ಯ ನಿಜಗುಣಾನಂದ ಸ್ವಾಮಿಗಳಿಗೆ “ಬಸವ ಭಾನು” ಪ್ರಶಸ್ತಿಯನ್ನು ಹಿರೇಮಠದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿ ಸತ್ಕರಿಸುವರು. ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಆಳಂದ ಶಾಸಕ ಬಿ.ಆರ್. ಪಾಟೀಲ ಹಾಗೂ ಬೀದರ, ಕಲಬುರ್ಗಿ ಜಿಲ್ಲೆಯ ಶಾಸಕ-ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿರುವರು.

ಜಾತ್ರಾ ಮಹೋತ್ಸವದಂಗವಾಗಿ ಜನವರಿ 5ರಂದು ಜಂಗಿ ಪೈಲ್ವಾನರ ಥೇಟರ್ ಕುಸ್ತಿಗಳು ನಡೆಯಲಿವೆ. 6ರಂದು ಪಶು ಪ್ರದರ್ಶನ ನಡೆಯಲಿದೆ, ಉತ್ತಮ ತಳಿಗಳಿಗೆ ಬಹುಮಾನ ವಿತರಿಸಲಾಗುವುದು.

Share This Article
1 Comment
  • ಗುರು ವಿರಕ್ತರು ಬೇರೆಯಲ್ಲ. ಹಾಗೆ ಹೀಗೆ ಏನೇನೊ ಹೇಳಿ ಮತ್ತೆ ಕೇವಲ ಲಿಂಗಾಯತ ಧರ್ಮವನ್ನು ವೀರಶೈವ ಲಿಂಗಾಯತ ಮುಂತಾಗಿ ಕರೆದು ಮತ್ತೊಂದು ಬಾರಿ ಬಸವ ಧರ್ಮದ ಮೇಲೆ ಆಕ್ರಮಣ ನಡೆಯುವಂತೆ ಕಾಣಿತ್ತಿದೆ. ನಮಗೆ ಅಂದರೆ ಲಿಂಗಾಯತರಿಗೆ ಬಸವಣ್ಣನವರು ಮಾತ್ರ ಧರ್ಮಗುರು. ಈ ಪಂಚಾಚಾರ್ಯರು ಹುಟ್ಟಿಕೊಂಡಿದ್ದು ತದನಂತರದಲ್ಲಿ. ಅವರ ವೀರಶೈವ ಧರ್ಮ ಅವರಿಗಿರಲಿ ನಮ್ಮ ಲಿಂಗಾಯತ ಪದಕ್ಕೆ ಅವರು ಜೋತುಬೀಳುವದು ಬೇಡ. ಬಸವಣ್ಣನವರು ಧರ್ಮಗುರು ಎಂದು ಯಾರು ನಂಬುತ್ತಾರೋ ಅವರು ಮಾತ್ರ ಲಿಂಗಾಯತರು. ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *