ರಾಣೇಬೆನ್ನೂರು:
ಬಸವ ಬೆಳಗು ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭವು ಡಿಸೆಂಬರ್ 22ರಂದು ಬೆಳಿಗ್ಗೆ 10.30ಗಂಟೆಗೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆಯಲಿದೆ.
ಡಾ. ಮೃತ್ಯುಂಜಯ ರುಮಾಲೆ, ಬಂಡ್ರಿ ಲಿಂಗಪ್ಪ, ಎ.ಎಂ. ಕೃಪಾಶಂಕರ ಅವರಿಗೆ ಪ್ರಶಸ್ತಿಗಳನ್ನು ಆಡಳಿತಾಧಿಕಾರಿ ಡಾ. ಆರ್. ಎಂ. ಕುಬೇರಪ್ಪ ಅವರು ಪ್ರದಾನ ಮಾಡುವರು.
ಡಾ. ಕಾಂತೇಶ ರೆಡ್ಡಿ ಗೋಡಿಹಾಳ ಅವರ ‘ಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನ’ ಮತ್ತು ಡಾ. ಜೆ.ಎಸ್. ಪಾಟೀಲ ಅವರ ‘ಲಿಂಗಾಯತ ಮುಖಾಮುಖಿ’ ಪುಸ್ತಕಗಳನ್ನು ಹಿರಿಯ ವಿದ್ವಾಂಸರಾದ ಡಾ. ಬಿ.ವಿ. ಶಿರೂರ ಬಿಡುಗಡೆಗೊಳಿಸುವರು.
ಸಾನಿಧ್ಯವನ್ನು ಸಂಡೂರಿನ ಪೂಜ್ಯ ಪ್ರಭು ಮಹಾಸ್ವಾಮಿಗಳು ವಹಿಸುವರು. ರಾಣೇಬೆನ್ನೂರು ಶಾಸಕರಾದ ಪ್ರಕಾಶ ಕೋಳಿವಾಡ ಅವರು ಸಮಾರಂಭ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ವಹಿಸುವರು.
ಪ್ರಭುದೇವರ ಸಂಸ್ಥಾನ ವಿರಕ್ತಮಠ ಸಂಡೂರು ಮತ್ತು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಈ ಸಮಾರಂಭ ನಡೆಯಲಿದೆ.


