ಹಾವೇರಿ:
ಇಲ್ಲಿನ ಬಸವ ಭವನದಲ್ಲಿ ಈಚೆಗೆ ನಡೆದ ವಾರದ ಶಿವಾನುಭವ ಕಾರ್ಯಕ್ರಮದಲ್ಲಿ ಶರಣ ಸಿದ್ದರಾಮೇಶ್ವರ ಹಾಗೂ ಶರಣ ಒಕ್ಕಲಿಗ ಮುದ್ದಣ್ಣ ಅವರ ಜಯಂತಿಯನ್ನು ಆಚರಿಸಲಾಯಿತು. ಬಸವ ಬಳಗದ ಅಧ್ಯಕ್ಷರು ಮತ್ತು ನಿವೃತ್ತ ನ್ಯಾಯಮೂರ್ತಿ ವಿ.ಜಿ. ಯಳಗೇರಿ ಅಧ್ಯಕ್ಷತೆ ವಹಿಸಿದ್ದರು.
ಜಗದೀಶ ಹತ್ತಿಕೋಟಿ ಕಾಯಕಯೋಗಿ ಶರಣ ಸಿದ್ಧರಾಮೇಶ್ವರರ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು. ಡಾ. ಶಿವರಾಜ ಕಾಯಕದ ಒಕ್ಕಲಿಗ ಮುದ್ದಣ್ಣ ಶರಣರ ಬಗ್ಗೆ ಮತ್ತು ಜೀವನ ಚರಿತ್ರೆಯನ್ನು ವಿಸ್ತಾರವಾಗಿ ಪ್ರಸ್ತುತಪಡಿಸಿದರು.
ಎಂ.ಬಿ. ಕಾಳೆ ಮತ್ತು ಶರಣ ಹಿಂಚಿಗೇರಿ ಶರಣರ ದಾಸೋಹ, ಕಾಯಕದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮೊದಲು ಸ್ವಾಗತ, ಬಸವ ಪ್ರಾರ್ಥನೆ, ಲಿಂಗಧ್ಯಾನ, ಎಲ್ಲರಿಂದ ವಚನ ಪಠಣ ನಡೆಯಿತು. ಪ್ರಾಸ್ತಾವಿಕವಾಗಿ ಶಿವಬಸಪ್ಪ ಮುದ್ದಿ ಮಾತನಾಡಿದರು.
ನಾಲ್ಕನೇ ತರಗತಿ ವಿದ್ಯಾರ್ಥಿ ದ್ರುವ ಕಾಯಕದ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ಕಡೆಕೊಪ್ಪ, ಬಸವ ಬಳಗದ ಸದಸ್ಯರಾದ ಯು.ಬಿ. ಪಂಪಣ್ಣ, ಶಿವಯೋಗಿ ಬೆನ್ನೂರ, ಕವಿತಾ ಕಾಯಕದ ಹಾಗೂ ಅನೇಕರಿದ್ದರು.
