ಈ ವರ್ಷದ ಬಸವ ಭೂಷಣ ಪ್ರಶಸ್ತಿ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಶರಣ ಶಂಕರ ಗುಡಸ ಅವರಿಗೆ ನೀಡಲಾಗುತ್ತಿದೆಯೆಂದು ಬಸವ ಸಮಿತಿ ಹೇಳಿದೆ.
7 ಜನವರಿ 1967ರಂದು ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಜನಿಸಿದ ಶಂಕರ ಬಸವಣ್ಣೆಪ್ಪ ಗುಡಸ ಅವರದು ಮಹುಮುಖಿ ವ್ಯಕ್ತಿತ್ವ.
ಅವರು ಐದು ವರ್ಷಗಳ ಕಾಲ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿ,ಕಾರಣಾಂತರಗಳಿಂದ ಮರಳಿ ಬೆಳಗಾವಿಗೆ ಬಂದು,ತಂದೆಯ ಉದ್ಯೋಗವನ್ನು ಮುಂದುವರಿಸಿದರು.ಹೊನಗಾ ಇಂಡಸ್ಟ್ರಿಯಲ್ ಪ್ರದೇಶದಲ್ಲಿ 1997ರಲ್ಲಿ ಇಡೀ ಭಾರತ ದೇಶದಲ್ಲಿಯೇ ಮೊದಲ ಚುರುಮುರಿ ತಯಾರಿಸುವ ಕಾರ್ಖಾನೆ ಪರಿಚಯಿಸಿದರು. ಈ ಉದ್ಯೋಗದ ಮೂಲಕ ಅನೇಕ ಬಡ ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟರು.
ಧಾರ್ಮಿಕ ಸೇವೆ:-
ಧರ್ಮ ಗುರು ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ ಧರ್ಮದ ಶುದ್ಧ ಆಚರಣೆಗಳೆ ಇವರ ಜೀವಾಳ.
ಕಣ್ಮುರೆಯಾಗುತ್ತಿರುವ ಸಂಕ್ರಮಣ ಸಂದರ್ಭದಲ್ಲಿ.ನಿಜವಾದ ಬಸವ ತತ್ವದ ಅರಿವು ಇಲ್ಲದ ಕಾರಣ,ಜನರಲ್ಲಿ ಬಸವ ತತ್ವದ ನಿಜವಾದ ಅರಿವು ಮೂಡಿಸುವುದು.
ಲಿಂಗಾಯತರು ಸಂಘಟಿತರಾದರೆ ಏನನ್ನಾದರೂ ಸಾಧಿಸಬಲ್ಲರು ಎಂಬುದನ್ನು ಗಮನದಲ್ಲಿಟ್ಟುಕೊಂಡು 2004ರಲ್ಲಿ ಲಿಂಗಾಯತ ಸಂಘಟನೆ ಎಂಬ ಸಂಸ್ಥೆಯನ್ನು ಗೆಳೆಯರ ಬಳಗದೊಂದಿಗೆ ಸ್ಥಾಪಿಸಿ 15 ವರ್ಷ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.ಇದರ ಅಡಿಯಲ್ಲಿ ಮೂಢನಂಬಿಕೆ ಅಂದಶ್ರದ್ಧೆ ಕಂದಾಚಾರಗಳ ಆಚರಣೆ ಕಾರಣವಾಗಿ ನಮ್ಮ ಜನರಲ್ಲಿ ಅಜ್ಞಾನ ಅನಕ್ಷರತೆ ಇನ್ನೂ ತಾಂಡವಾಡುತ್ತಿದೆ ಇದನ್ನು ಮನಗಂಡ ಶಂಕರ ಗುಡಸ ಅಂತ ಶ್ರದ್ಧೆ ನಿರ್ಮೂಲನೆಗೆ ತಮ್ಮದೇ ಆದ ಕೆಲವು ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ.ಪ್ರತಿ ವರ್ಷ ನಾಗರ ಪಂಚಮಿ ದಿನ ಬಸವ ಪಂಚಮಿ ಆಚರಿಸಿ ಕಲ್ಲ ನಾಗರಹಕ್ಕೆ ಹಾಲನ್ನು ಹಾಕಿ ಹಾಳು ಮಾಡದೆ, ಅನಾಥ ಬೋಡ ಮಕ್ಕಳಿಗೆ ಹಾಲು ಹಣ್ಣು ವಿತರಿಸಿ ಮೂಢನಂಬಿಕೆಗಳಿಗೆ ತಿಲಾಂಜಲಿ ಇಡುವ ಕಾರ್ಯ ಮಾಡುತ್ತಾ ಬಂದಿದ್ದಾರೆ.
2006 ರಿಂದ ಬೆಳಗಾವಿಯ ಮಹೇಶ್ವರಿ ಅನ್ನ ಮಕ್ಕಳ ಶಾಲೆಯಲ್ಲಿ ಬಸವ ಪಂಚಮಿಯನ್ನು ಅತ್ಯಂತ ವಿದಾಯಕವಾಗಿ ಆಚರಿಸಿ ಅಲ್ಲಿಯ ಎಲ್ಲ ಮಕ್ಕಳಿಗೆ ಹಾಲು ಹಣ್ಣು ವಿತರಿಸುತ್ತಾರೆ,ನಾಗರ ಪಂಚಮಿಗೆ ಹೀಗೆ ಹೊಸ ಅರ್ಥ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ.
ವಚನ ಪಿತಾಮಹರಾದ ಡಾ.ಫ.ಗು.ಹಳಕಟ್ಟಿ ಅವರ ಸ್ಮರಣೆ ಸದಾ ಕಾಲ ಇರಲೆಂಬ ಉದ್ದೇಶದಿಂದ 2010ರಲ್ಲಿ ಮಹಾಂತೇಶ ನಗರದಲ್ಲಿ ವಚನ ಪಿತಾಮಹರಾದ ಡಾ.ಫ.ಗು.ಹಳಕಟ್ಟಿ ಸಮುದಾಯ ಭವನ ನಿರ್ಮಿಸಿದರು. ಈ ಭವನದಲ್ಲಿ ಪ್ರತಿ ರವಿವಾರ ಸಾಮೂಹಿಕ ಪ್ರಾರ್ಥನೆ ವಿಶೇಷ ಉಪನ್ಯಾಸ ಚರ್ಚೆ ಸಂವಾದ ಕಾರ್ಯಕ್ರಮಗಳನ್ನು ನಿತ್ಯ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
2017ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟ ಪ್ರಾರಂಭವಾದಾಗ,ಬೆಳಗಾವಿ ಜಿಲ್ಲೆಯಲ್ಲಿ ಶಂಕರ ಗುಡಸ ಅವರು ರಾಷ್ಟ್ರೀಯ ಬಸವ ದಳ ಲಿಂಗಾಯತ ಸಂಘಟನೆ ಇದೇ ರೀತಿ ಅನೇಕ ಬಸವಪರ ಸಂಘಟನೆಗಳ ಜೊತೆ ಸೇರಿ ಗ್ರಾಮೀಣ ಪ್ರದೇಶದ ಎಲ್ಲಾ ಲಿಂಗಾಯತರಲ್ಲಿ ಜಾಗೃತಿ ಮೂಡಿಸಿ 22 ಆಗಸ್ಟ್ 2017 ರಂದು ಬೆಳಗಾವಿ ಮಹಾ ನಗರದಲ್ಲಿ ಬೃಹತ್ ಸಮಾವೇಶದ ಯಶಸ್ವಿಗೆ ಅತ್ಯಂತ ಪ್ರಾಮಾಣಿಕವಾಗಿ ಈ ಹೋರಾಟದಲ್ಲಿ ಅವರು ಭಾಗವಹಿಸಿದರು. ಕರ್ನಾಟಕ ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಲಿಂಗಾಯತ ಸಮಾಜಕ್ಕೆ ಸಂಬಂಧಪಟ್ಟಂತೆ ಹೋರಾಟ ಸಮಾವೇಶ ಸಮ್ಮೇಳನಗಳು ಜರುಗಿದರು ಅವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ.ಇವರು ಉದ್ಯೋಗದ ಜೊತೆ ಕೃಷಿ ಕಾರ್ಯಗಳಲ್ಲಿ ಸಲ ಸಕ್ರಿಯರು.
2019ರಲ್ಲಿ ಚನ್ನ ಫೌಂಡೇಶನ್ ಎಂಬ ತಮ್ಮದೇ ಆದ ಹೊಸ ಸಂಸ್ಥೆಯನ್ನು ಸ್ಥಾಪಿಸಿ ಬೆಳಗಾವಿ ತಾಲೂಕಿನ ಹಾರಣ ಕೊಳ್ಳದಲ್ಲಿ ಜಮೀನು ಖರೀದಿಸಿ, ತಂದೆ ತಾಯಿ ಸ್ಮರಣೆಯಲ್ಲಿ ‘ಗುರು ಬಸವಾಶ್ರಮ’ ಸ್ಥಾಪನೆ ಮಾಡಿದ್ದಾರೆ.
ಈ ಆಶ್ರಮದ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಮೂಢನಂಬಿಕೆ ಕಂದಾಚಾರ ಮುಕ್ತವಾದ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ,ಪ್ರವಚನಗಳ ಮೂಲಕ ಬಸವತತ್ವವನ್ನು ಮನೆ ಮನಗಳಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.
ಸಾಮಾಜಿಕ ಸೇವೆ:-
ಯುವಜನರನ್ನು ಮತ್ತು ಮಹಿಳಾ ಸಮುದಾಯವನ್ನು ಸಂಘಟಿಸಿ,ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾರೆ.
ಕಳೆದ 15 ವರ್ಷಗಳಿಂದ ಈ ಸೇವೆ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ. ಸ್ವಂತ ಶಂಕರ್ ಗುಡಸ್ ಅವರೇ 15ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಜನರಲ್ಲಿ ದೇಹ ದಾನ ಮತ್ತು ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಸ್ವತಹ ತಾವೇ ನೇತ್ರದಾನ ಮತ್ತು ದೇಹದಾನಿಕ್ಕೆ ಒಪ್ಪಿಗೆ ನೀಡಿ.ಬೇರೆಯವರಿಗೆ ಸ್ಫೂರ್ತಿಯಾಗಿದ್ದಾರೆ.
ಕರೋನ ಮಹಮಾರಿ ಬಂದ ಪರಿಣಾಮವಾಗಿ ಅನೇಕ ಸಾವು ನೋವುಗಳಾದವು ಆ ಸಂದರ್ಭದಲ್ಲಿ ಇಡಿ ಜಗತ್ತೇ ಹೆದರಿ ಮೂಲೆ ಸೇರಿತ್ತು.ಆದರೆ ಶಂಕರ ಗುಡಸ ಅವರು ವೈಯಕ್ತಿಕ ಹಣದಿಂದ ಅನೇಕ ಜನರಿಗೆ ಆಹಾರದ ಕಿಟ್ಗಳನ್ನು ಒದಗಿಸಿದರು. ಇದೆಲ್ಲದಕ್ಕೂ ಮಿಗಿಲಾಗಿ 50ಕ್ಕೂ ಹೆಚ್ಚು ಜನ ಕರೋನಾ ರೋಗಕ್ಕೆ ತುತ್ತಾಗಿ ನಿಧನರಾದಾಗ. ಅಂತ್ಯಕ್ರಿಯೆಗೆ ಹೆತ್ತ ಮಕ್ಕಳ ಹೆದರಿ ಹಿಂದೆ ಸರಿದಾಗ ತಾವೇ ಮುಂದು ನಿಂತು ಅಂತ್ಯಕ್ರಿಯೆ ನೆರವೇರಿಸಿ ಮಾನವತೆಯನ್ನು ಮೆರೆದರು.ಹೀಗೆ ಇನ್ನು ಅನೇಕ ಕಾರ್ಯಗಳಲ್ಲಿ ತಮ್ಮನ್ನು ತಾವು ತನು ಮನ ಧನದಿಂದ ತೊಡಗಿಸಿಕೊಂಡಿರುತ್ತಾರೆ.
ಗೌರವ ಪ್ರಶಸ್ತಿಗಳು:-
ಶಂಕರ ಗುಡಸ ಅವರ ಸಾಮಾಜಿಕ ಧಾರ್ಮಿಕ ಸೇವೆಯನ್ನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಪರಮಪೂಜ್ಯ ನಾಡೋಜ ಶ್ರೀ ಡಾ ಬಸವಲಿಂಗ ಪಟ್ಟಾಧ್ಯಕ್ಷರು ಶರಣ ಸಂಸ್ಕೃತಿ ಸೇವೆಯನ್ನು ಪರಿಗಣಿ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ‘ಸಮಾಜ ಸೇವಾ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
*2008ರಲ್ಲಿ ಸಿರಿಗನ್ನಡ ಪ್ರತಿಷ್ಠಾನದ ಗೌರವ ಪ್ರಶಸ್ತಿ ಸಂದಿದೆ
*2010ರಲ್ಲಿ ಸಿರಿಗನ್ನಡ ವರ್ಷದ ವ್ಯಕ್ತಿ ಪುರಸ್ಕಾರ
*2013ರಲ್ಲಿ ಸಮಸ್ತ ದಿಗಂಬರ ಜೈನ ಸಮಾಜ ವ್ಯಕ್ತಿಯಿಂದ ಸಮಾಜ ಸೇವೆ ಪುರಸ್ಕಾರ
*2016ರಲ್ಲಿ 37ನೇ ಶರಣ ಕಮ್ಮಟ ಅನುಭವ ಮಂಟಪೋತ್ಸವ ವತಿಯಿಂದ ಸಮಾಜ ಸೇವೆಗೆ ಸನ್ಮಾನ ಪತ್ರ ದೊರಕಿದೆ
*2023ರಲ್ಲಿ ಸತೀಶ್ ಪ್ರತಿಭಾ ಪುರಸ್ಕಾರ ಲಭಿಸಿದೆ, ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಇವರ ಧಾರ್ಮಿಕ ಮತ್ತು ಸಮಾಜ ಸೇವೆಗೆ ಲಭಿಸಿವೆ.
ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಡಾ. ಅರವಿಂದ ಜತ್ತಿಯವರ ಅಧ್ಯಕ್ಷತೆಯಲ್ಲಿ ನೆಲೆ ನಿಂತಿರುವ ಬಸವ ಸಮಿತಿಯು ಭಾರತದ ಮಾಜಿ ರಾಷ್ಟ್ರಪತಿಗಳು ಹಾಗೂ ಬಸವ ಸಮಿತಿಯ ಸ್ಥಾಪಕರಾದ ಗೌರವಾನ್ವಿತ ಡಾ. ಬಿ.ಡಿ.ಜತ್ತಿಯವರ 112ನೆಯ ಜಯಂತಿ ಮಹೋತ್ಸವ ಹಾಗೂ ಬಸವ ಸಮಿತಿ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬಸವ ಮನಿಹದಲ್ಲಿ ವಿಶಿಷ್ಟ ಸಾಧನೆಗೈದಿರುವ ಮನೆತನದವರಿಗೆ ಹಾಗೂ ಮಹನೀಯರುಗಳಿಗೆ ಬಸವ ಸಮಿತಿಯಿಂದ ಗೌರವ ಸನ್ಮಾನವನ್ನು ಆರು ಜನ ಮಹನೀಯರಿಗೆ ನೀಡುತ್ತಿದ್ದು ಅದರಲ್ಲಿ ಶಂಕರ ಗುಡಸ ಅವರಿಗೆ ಬಸವ ಭೂಷಣ ಎನ್ನುವ ಪುರಸ್ಕಾರವನ್ನು ದಿನಾಂಕ 14/9/2024ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಿದ್ದಾರೆ.