ಚಿತ್ರದುರ್ಗದಲ್ಲಿ ಬಸವ ಜಯಂತಿಯ ಅಂಗವಾಗಿ ಪ್ರಬಂಧ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ :

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ವಿಶ್ವಗುರು, ಮಹಾಮಾನವತಾವಾದಿ ಬಸವಣ್ಣನವರ ಜಯಂತಿಯ ಹಿನ್ನೆಲೆಯಲ್ಲಿ ಅವರ ವಿಚಾರಧಾರೆಗಳನ್ನು ಈಗಿನ ಪೀಳಿಗೆ ಅಧ್ಯಯನ ಮಾಡುವ ಮತ್ತು ಆ ಅಧ್ಯಯನ ಜ್ಞಾನವು ಸದಾ ಮನಸ್ಸಿನಲ್ಲಿರಲಿ ಎನ್ನುವ ಕಾರಣದಿಂದ ಮಾಧ್ಯಮಿಕ ಹಂತದಿಂದ ಸ್ನಾತಕೋತ್ತರ ತರಗತಿಗಳವರೆಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆ ಹಾಗೂ ವಿವರ :

೧) ಮಾಧ್ಯಮಿಕ ತರಗತಿಗಳ ವಿದ್ಯಾರ್ಥಿಗಳಿಗೆ – ವಿಷಯ : “ವಿಶ್ವಗುರು ಬಸವಣ್ಣ ನನಗೇಕೆ ಇಷ್ಟ”,

೨) ಪ್ರೌಢಶಾಲಾ ವಿದ್ಯಾರ್ಥಿಗಳಿಗೆ – ವಿಷಯ : “ಬಸವಣ್ಣನವರ ಮೌಢ್ಯ ವಿರೋಧಿನಿಲುವು”,

೩) ಪಿಯುಸಿ, ಐಟಿಐ, ಡಿಪ್ಲೊಮಾ, ಡಿ.ಎಡ್. ಇತರ ತರಗತಿಗಳವರಿಗೆ – ವಿಷಯ : “ಬಸವಣ್ಣನವರ ಸಮ  ಸಮಾಜ”.

೪) ಪದವಿ ಹಾಗೂ ಸಮಾನಾಂತರ ತರಗತಿಗಳ ವಿದ್ಯಾರ್ಥಿಗಳಿಗೆ – ವಿಷಯ : “ಸಮಕಾಲೀನ ಶರಣರು ಕಂಡ ಬಸವಣ್ಣ”.

೫) ಸ್ನಾತಕೋತ್ತರ ತರಗತಿಗಳವರಿಗೆ – ವಿಷಯ : “ಬಸವಣ್ಣನವರ ಚಿಂತನೆಗಳಲ್ಲಿ ಭಾರತೀಯ ಸಂವಿಧಾನ”.

ಪ್ರಬಂಧ ಬರೆಯುವವರು ಸಂಬಂಧಿಸಿದ ವಚನಗಳನ್ನು ಉಲ್ಲೇಖಿಸಬಹುದಾಗಿದೆ.

ಸ್ಪರ್ಧೆ ನಿಯಮಗಳು : ಪ್ರಬಂಧವು ಕನ್ನಡದಲ್ಲಿರಬೇಕು ಮತ್ತು ವಿಷಯಾಂತರವಾಗಿರಬಾರದು. ಪ್ರಬಂಧವು ಸ್ವಂತ ರಚನೆಯಾಗಿರಬೇಕು. ಇತರರ ಬರಹದ ನಕಲು ಆಗಿರಬಾರದು. ಬೇರೆಯವರ ಅಭಿಪ್ರಾಯ ಉಲ್ಲೇಖಿಸಿದಲ್ಲಿ ಆ ವ್ಯಕ್ತಿಗಳ ಉಲ್ಲೇಖವಿರಬೇಕು. ಪ್ರಬಂಧವು ೧೦೦೦ (ಸಾವಿರ) ಪದಗಳಿಗೆ ಮೀರಿರಬಾರದು, ಮತ್ತು ಎ೪ ಗಾತ್ರದ ಬಿಳಿ ಹಾಳೆ ಬಳಸಿರಬೇಕು. ಅಕ್ಷರಗಳು ಸ್ಪಷ್ಟವಾಗಿ, ಅಂದವಾಗಿ, ವ್ಯಾಕರಣ ದೋಷವಿಲ್ಲದ ಹಾಗೂ ವಸ್ತುನಿಷ್ಠ ಅಂದವಾದ ಬರವಣಿಗೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ನೀಲಿ ಅಥವಾ ಕಪ್ಪು ಶಾಯಿಯಲ್ಲಿರಬೇಕು.

ಪ್ರಬಂಧದೊಂದಿಗೆ ಸ್ಪಷ್ಟ ಅಧಿಕೃತ ವಿಳಾಸ, ದೂರವಾಣಿ ಸಂಖ್ಯೆ, ಶಾಲಾ ಕಾಲೇಜುಗಳ ವಿವರಗಳನ್ನು ಲಗತ್ತಿಸಿರಬೇಕು. ನಿಗದಿತ ಅಂತಿಮ ದಿನಾಂಕದೊಳಗೆ ಪ್ರಬಂಧವನ್ನು ಸಲ್ಲಿಸಬೇಕು ಹಾಗೂ ಲೇಖನದ ಒಂದು ಪ್ರತಿಯನ್ನು ಕಾಯ್ದಿರಿಸಿಕೊಳ್ಳುವುದು. ತಡವಾಗಿ ಬಂದ ಲೇಖನಗಳನ್ನು ಪರಿಗಣಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಪ್ರಬಂಧ ತಲುಪಲು ಕಡೆಯ ದಿನಾಂಕ ೧೨-೪-೨೦೨೬ ಆಗಿರುತ್ತದೆ. ಆಯ್ಕೆಯಾದವರಿಗೆ ಸೂಕ್ತ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಗುವುದು.

ಆಸಕ್ತರು ಯಾರೇ ಆದರೂ ಮೇಲ್ಕಾಣಿಸಿದ ವಿಷಯ ಹಾಗೂ ವಯೋಮಾನಾನುಸಾರವಾಗಿ ಪ್ರಬಂಧ ಬರೆದು ಸಂಯೋಜಕರು, ಬಸವ ಜಯಂತಿ ಪ್ರಬಂಧಸ್ಪರ್ಧೆ ವಿಭಾಗ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಂ.ಕೆ. ಹಟ್ಟಿ- ಅಂಚೆ, ಚಿತ್ರದುರ್ಗ- ೫೭೭೫೦೨

ಈ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಪ್ರಬಂಧಗಳನ್ನು ಕಳುಹಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ೯೪೪೮೬೬೪೯೩೨ ಸಂಪರ್ಕಿಸಲು ಶ್ರೀಮಠದ ಪ್ರಕಟಣೆ ಕೋರಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *