ಗಜೇಂದ್ರಗಡ
ತಾಲ್ಲೂಕ ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಬಸವಕೇಂದ್ರ, ಲಿಂಗಾಯತ ಒಳಪಂಗಡಗಳು ಹಾಗೂ ಬಸವಪರ ಸಂಘಟನೆಗಳಿಂದ ಇದೇ 30ರಂದು, ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ, ‘ವಚನ ಸಾಹಿತ್ಯ ಉತ್ಸವ’ದ ಮೆರವಣಿಗೆ ಜನಪದ ಕಲಾ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.




ಬಸವ ಜಯಂತಿ ಅಂಗವಾಗಿ ಮುದ್ರಿಸಲಾದ ಕರಪತ್ರವನ್ನು ಪಟ್ಟಣದ ಅನೇಕ ಕಡೆಗಳಲ್ಲಿನ ಲಿಂಗಾಯತ ಧರ್ಮಿಯರಲ್ಲಿ, ಬಸವಾಭಿಮಾನಿಗಳಿಗೆ ಹಂಚಿ, ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಳ್ಳಲಾಗಿದೆ.


ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಲು ತುಂಬಾ ಅನುಕೂಲಕರ.